News

ಮುಸ್ಲೀಂ ಹಬ್ಬಗಳಿಗೆ ಸಾರ್ವತ್ರಿಕ ರಜೆ ಹೆಚ್ಚಿಸಿ, ಹಿಂದೂ ಹಬ್ಬಗಳಿಗೆ ರಜೆ ಕಟ್ ಮಾಡಿದ ಬಿಹಾರ ಸರ್ಕಾರ…!

ಬಿಹಾರದಲ್ಲಿ ಆಡಳಿತ ನಡೆಸುತ್ತಿರುವ ನಿತೀಶ್ ಕುಮಾರ್‍ ಸರ್ಕಾರ ಮುಸ್ಲೀಂ ಹಬ್ಬಗಳಿಗೆ ಸಾರ್ವತ್ರಕ ರಜೆ ಹೆಚ್ಚಿಸಿ, ಹಿಂದೂ ಹಬ್ಬಗಳಿಗೆ ರಜೆಗಳನ್ನು ಕಡಿತಗೊಳಿಸಿದ್ದು, ಈ ಕುರಿತು ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ. ಬಿಹಾರದ ರಾಜ್ಯ ಶಿಕ್ಷಣ ಇಲಾಖೆಯು 2024ರ ರಜೆಗಳ ಕ್ಯಾಲೆಂಡರ್‍ ಬಿಡುಗಡೆ ಮಾಡಿದ್ದು, ಇದರಲ್ಲಿ ಹಿಂದೂ ಹಬ್ಬಗಳಿಗೆ ರಜೆ ಕಡಿತ ಮಾಡಿದ್ದನ್ನು ಬಿಜೆಪಿ ನಾಯಕರು ಖಂಡಿಸಿದ್ದಾರೆ.

ಬಿಹಾರ ರಾಜ್ಯ ಶಿಕ್ಷಣ ಇಲಾಖೆಯ 2024ರ ರಜೆಯ ಕ್ಯಾಲೆಂಡರ್‍ ಬಿಡುಗಡೆ ಮಾಡಿದ್ದು, ಹಿಂದೂಗಳಿಗೆ ಅನ್ಯಾಯವಾಗಿದೆ ಎಂದು I.N.D.I.A ಒಕ್ಕೂಟದ ಮೈತ್ರಿಕೂಟ ಹಾಗೂ ನಿತಿಶ್ ಕುಮಾರ್‍ ಸರ್ಕಾರದ ವಿರುದ್ದ ಬಿಜೆಪಿ ಆಕ್ರೋಷ ಹೊರಹಾಕಿದೆ. ಬಿಹಾರದ ಶಿಕ್ಷಣ ಇಲಾಖೆ ಮುಂದಿನ ವರ್ಷದ ಕ್ಯಾಲೆಂಡರ್‍ ಬಿಡುಗಡೆ ಮಾಡಿದ್ದು, ಅದರಲ್ಲಿ ಹರ್ತಾಲಿಕಾ ತೀಜ್ ಮತ್ತು ಜಿತಿಯಾ ರಜಾದಿನಗಳನ್ನು ತೆಗೆದು ಹಾಕಿದೆ. ಈದ್ ಅಲ್ ಫಿತರ್‍ ಹಾಗೂ ಈದ್ ಅಲ್ ಅದಾ (ಬಕ್ರೀದ್) ರಜಾದಿನಗಳನ್ನು ಮೂರಕ್ಕೆ ಏರಿಸಿದೆ ಎಂದು ವರದಿಯಾಗಿದೆ. ಈ ಕುರಿತು ಬಿಜೆಪಿ ಸಂಸದ ಸುಶೀಲ್ ಮೋದಿ ಕಿಡಿಕಾರಿದ್ದು, ನಿತೀಶ್ ಕುಮಾರ್‍ ನೇತೃತ್ವದ ಸರ್ಕಾರ ಹಿಂದೂ ವಿರೋಧಿಯಾಗಿದ್ದು, ಹಿಂದೂ ಭಾವನೆಗಳಿಗೆ ಧಕ್ಕೆ ತರುವ ನಿರ್ಧಾರ ತೆಗೆದುಕೊಂಡಿದೆ. ಹಿಂದೂ ಹಬ್ಬಗಳ ರಜಾದಿನಗಳನ್ನು ಕಡಿತಗೊಳಿಸಿ, ಮುಸ್ಲೀಂ ಹಬ್ಬಗಳಿಗೆ ರಜೆಯನ್ನು ಹೆಚ್ಚಿಸಿದೆ ಎಂದು ಆಕ್ರೋಷ ಹೊರಹಾಕಿದ್ದಾರೆ ಎಂದು ಸಂಸದರ ಹೇಳಿಕೆಯ ಬಗ್ಗೆ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಇನ್ನೂ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಹ ಈ ಬಗ್ಗೆ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ. ಹಿಂದೂಗಳ ರಜಾದಿನಗಳನ್ನು ಖಡಿತಗೊಳಿಸಿ, ಮುಸ್ಲೀಂರ ಹಬ್ಬಗಳ ರಜೆಯನ್ನು ಹೆಚ್ಚಿಸಲಾಗಿದೆ. ನಿತೀಶ್ ಕುಮಾರ್‍ ಸರ್ಕಾರ ಇಸ್ಲಾಮಿಕ್ ಧಾರ್ಮಿಕ ನಂಬಿಕೆಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯದಲ್ಲಿ ಕೆಲಸ ಮಾಡುತ್ತಿದೆ ಇದಕ್ಕೆ ಇದೊಂದು ಉದಾಹರಣೆಯಾಗಿದೆ ಎನ್ನಬಹುದು. ಕೂಡಲೇ ಅವರು ಈ ಕ್ರಮವನ್ನು ಬದಲಿಸದಿದ್ದರೇ ಮುಂಬರುವ ಚುನಾವಣೆಯಲ್ಲಿ ತೊಂದರೆ ಎದುರಿಸಬೇಕಾಗುತ್ತದೆ ಎಂದು ಆಕ್ರೋಷ ಹೊರಹಾಕಿದ್ದಾರೆ. ಜೊತೆಗೆ ಅನೇಕ ನಾಯಕರು ನಿತೀಶ್ ಕುಮಾರ್‍ ರವರ ಈ ಹೇಳಿಕೆಯ ವಿರುದ್ದ ಆಗ್ರಹ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top