ಪ್ರತಿನಿತ್ಯ ಬೆಳಗಾದರೇ ಸಾಕು ಆ ದಿನ ಹೇಗೆ ಎದುರಿಸಬೇಕು ಎಂದು ಚಿಂತೆ ಕಾಡುತ್ತಿತ್ತು ಎಂದ ದೀಪಿಕಾ ಪಡುಕೋಣೆ……!

Follow Us :

ಬಾಲಿವುಡ್ ನಲ್ಲಿ ವಯಸ್ಸಾದರೂ ಸಹ ಗ್ಲಾಮರ್‍ ಮೂಲಕ ಭಾರಿ ಅವಕಾಶಗಳನ್ನು ಪಡೆದುಕೊಳ್ಳುತ್ತಾ ಅನೇಕ ಸೀನಿಯರ್‍ ನಟಿಯರು ಸಾಗುತ್ತಿದ್ದಾರೆ. ಅದರಲ್ಲೂ ಮದುವೆಯಾದ ಬಳಿಕವೂ ಬ್ಯಾಕ್ ಟು ಬ್ಯಾಕ್ ಆಫರ್‍ ಗಳ ಮೂಲಕ ಸಿನಿರಂಗದಲ್ಲಿ ಮುನ್ನುಗ್ಗುತ್ತಿರುತ್ತಾರೆ. ಈ ಸಾಲಿಗೆ ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ಸಹ ಸೇರುತ್ತಾರೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗಲೇ ಆಕೆ ಬಾಲಿವುಡ್ ನಟ ರಣವೀರ್‍ ಸಿಂಗ್ ಜೊತೆಗೆ ಪ್ರೀತಿಗೆ ಬಿದ್ದು ಮದುವೆಯಾದರು. ಇದೀಗ ಆಕೆ ಪ್ರತಿನಿತ್ಯ ಬೆಳಗಾದರೇ ಸಾಕು ಆ ದಿನ ಹೇಗೆ ಎದುರಿಸಬೇಕು ಎಂಬ ಚಿಂತೆ ಕಾಡುತ್ತಿತ್ತು ಎಂದು ಆಕೆ ನೋವಿನಿಂದ ಹೇಳಿಕೊಂಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗಿದೆ.

ಬಾಲಿವುಡ್ ಸ್ಟಾರ್‍ ನಟಿ ದೀಪಿಕಾ ಪಡುಕೋಣೆ ತಾವು ಒಮ್ಮೆ ಡಿಪ್ರೆಷನ್ ಗೆ ಹೋದಾಗ ಯಾವ ರೀತಿಯ ಅನುಭವ ಆಗಿತ್ತು ಎಂಬ ವಿಚಾರವನ್ನು ಆಕೆ ಹಂಚಿಕೊಂಡಿದ್ದಾರೆ. ನನಗೆ ಮನಸ್ಸಿನಲ್ಲಿ ತುಂಬಾ ವಿಚಿತ್ರವಾದ ಫೀಲಿಂಗ್ಸ್ ಬರುತ್ತಿತ್ತು. ಅದನ್ನು ಯಾವುದೇ ರೀತಿಯ ಭಾಷೆಯಲ್ಲಿ ಹೇಳಲು ಆಗುತ್ತಿರಲಿಲ್ಲ. ಬೆಳಗಾದ ಕೂಡಲೇ ನನಗೆ ತುಂಬಾನೆ ಭಯ ಆಗುತ್ತಿತ್ತು. ಮಲಗುವುದೂ ಕಷ್ಟ, ಹೊರಗೆ ಹೋಗಿ ಮುಖ ತೋರಿಸಲು ಸಹ ಕಷ್ಟ, ಜನರೊಂದಿಗೆ ಬೆರೆಯಲೂ ಸಹ ಭಯ ಆಗುತ್ತಿತ್ತು. ಹೊಟ್ಟೆಯಲ್ಲಿ ವಿಚಿತ್ರ ಸಂಕಟ ಆಗುತ್ತಿತ್ತು. ನನಗೆ ಏನೋ ಆಗುತ್ತಿದೆ, ಆದರೆ ಅದು ಬೇರೆಯವರಿಗೆ ತಿಳಿಯಂದತೆ ನಾನು ಇರಬೇಕು ಎಂದು ಅನ್ನಿಸುತ್ತಿತ್ತು. ನನ್ನಲ್ಲಿ ಸಾಕಷ್ಟು ಸಮಸ್ಯೆಗಳಿವೆ, ನನಗೆ ಏನೋ ಬೇಕು ಆದರೆ ಏನು ಬೇಕಾಗಿದೆ ಎಂಬುದು ಮಾತ್ರ ತಿಳಿಯುತ್ತಿರಲಿಲ್ಲ. ನನ್ನಲ್ಲಿ ಬರೀ ಪ್ರಶ್ನೆಗಳು ಮಾತ್ರ ಇತ್ತು. ಯಾವುದೇ ಕಾರಣವಿಲ್ಲದೇ ದುಃಖ ಆಗುತ್ತಿತ್ತು, ಸಂತೋಷ ತುಂಬಾನೆ ದೂರವಾಗಿತ್ತು. ಕತ್ತಲಲ್ಲಿ ಇರಬೇಕೆಂಬ ಭಾವನೆ ಹೆಚ್ಚಾಗಿತ್ತು ಎಂದಿದ್ದಾರೆ.

ಇನ್ನೂ ನನಗೆ ಯಾಕೇ ಆ ರೀತಿ ಆಗುತ್ತಿದೆ ಎಂಬುದು ಸಹ ತಿಳಿಯುತ್ತಿರಲಿಲ್ಲ. ಅದಕ್ಕೆ ಏನು ಪರಿಹಾರ ಕಂಡುಕೊಳ್ಳಬೇಕು ಎಂದು ಹೊಳೆದಿರಲಿಲ್ಲ. ಒಂದು ನನಗೆ ಯಾವುದೋ ಒಂದು ವಿಡಿಯೋ ಮೂಲಕ ತಿಳಿಯಿತು ಅದು ಡಿಪ್ರೆಶನ್ ಖಾಯಿಲೆಯಿಂದ ನಾನು ನೋವು ಅನುಭವಿಸುತ್ತಿದ್ದೇನೆ ಎಂದು ಅರಿವಿಗೆ ಬಂತು. ಅದು ಅರಿವಾದ ಬಳಿಕ ನನಗೆ ಮಾರ್ಗವೂ ಸಹ ಸಿಕ್ಕಿತ್ತು. ಬಳಿಕ ನಾನು ಡಿಪ್ರೆಷನ್ ನಿಂದ ಸಂಪೂರ್ಣವಾಗಿ ಹೊರಬಂದಿದ್ದೇನೆ. ಆ ಸಮಯದಲ್ಲಿ ನಾನು ಅನುಭವಿಸಿದ ನೋವು, ಮಾನಸಿಕ ಹಿಂಸೆ ಇಂದೂ ನೆನಪಿಸಿಕೊಂಡರೂ ಸಹ ತುಂಬಾನೆ ಅಳು ಬರುತ್ತದೆ. ಆದರೆ ಡಿಪ್ರೆಷನ್ ಬಗ್ಗೆ ನನಗೆ ಸಂಪೂರ್ಣ ಅರಿವು ಮೂಡಿದೆ. ಈ ಬಗ್ಗೆ ನಾನು ಸಹ ಅನೇಕ ಸಂದರ್ಶನಗಳಲ್ಲಿ ಮಾತನಾಡುತ್ತಾ ಜಾಗೃತಿ ಸಹ ಮೂಡಿಸಲು ತುಂಬಾನೆ ಪ್ರಯತ್ನಗಳನ್ನು ಮಾಡುತ್ತಿದ್ದೇನೆ ಎಂದು ಆಕೆ ಹೇಳಿದ್ದಾರೆ. ಆಕೆಯ ಈ ಕಾಮೆಂಟ್ ಗಳು ಸಂದರ್ಶನವೊಂದರಲ್ಲಿ ಹೇಳಿದ್ದು, ವೈರಲ್ ಆಗುತ್ತಿದೆ.