ಪತ್ನಿಯ ತಂಗಿಯನ್ನು ಕಾಮ ತೃಷೆಗೆ ಬಳಸಿಕೊಂಡ ಗಂಡ, ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡ ಪತ್ನಿ ಆತನ ಮರ್ಮಾಂಗ ಕಟ್ ಮಾಡಿಬಿಟ್ಲು….!

Follow Us :

ಮದುವೆಯಾದ ಹೆಂಡತಿಯನ್ನು ಬಿಟ್ಟು ಹೆಂಡತಿಯ 15 ವರ್ಷದ ತಂಗಿಯನ್ನು ಪುಸಲಾಯಿಸಿ ತನ್ನ  ಕಾಮಕ್ಕೆ ಬಳಸಿಕೊಂಡ ಗಂಡನಿಗೆ ಪತ್ನಿ ಸರಿಯಾಗಿಯೇ ಮಾಡಿದ್ದಾರೆ. ತಂಗಿಯೊಂದಿಗೆ ಸರಸ ಸಲ್ಲಾಪ ಮಾಡುವಾಗಿ ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡ ಪತ್ನಿ ಕಾಳಿ ಅವತಾರ ತಾಳಿ, ಗಂಡನ ಕೈ ಕಾಲು ಕಟ್ಟಿ ಹಾಕಿ ಆತನ ಮರ್ಮಾಂಗ ಕತ್ತರಿಸಿ, ಅದನ್ನು ಟಾಯ್ಲೆಟ್ ಗೆ ಹಾಕಿ ಫ್ಲಶ್ ಮಾಡಿದ್ದಾಳೆ. ಈ ಘಟನೆ ಬ್ರೆಜಿಲ್ ನ ಆಟಿಬಯಾ ಎಂಬ ಪ್ರದೇಶದಲ್ಲಿ ನಡೆದಿದೆ ಎನ್ನಲಾಗಿದೆ.

ಬ್ರೆಜಿಲ್ ನ ಆಟಿಬಯಾ ಎಂಬ ಪ್ರದೇಶದಲ್ಲಿ ವಾಸವಿದ್ದ ಪತಿ ಹಾಗೂ ಪತ್ನಿ ಇಬ್ಬರೂ ಉದ್ಯೋಗ ಮಾಡುತ್ತಿದ್ದರು. ಆದರೆ ಪತಿಯ ಕೆಲವೊಂದು ವರ್ತನೆಗಳು ಪತ್ನಿಗೆ ಅನುಮಾನ ತರಿಸಿದೆ. ಕೆಲವೊಂದು ವಿಚಾರಗಳನ್ನು ಪತ್ನಿಯೊಂದಿಗೆ ಮುಚ್ಚಿಡುತ್ತಿದ್ದ ಎನ್ನಲಾಗಿದೆ. ಜೊತೆಗೆ ಪತಿ ಕೆಲಸದಿಂದ ಬೇಗ ಬರುವುದು, ಕೆಲಸಕ್ಕೆ ಆಗಾಗ ರಜೆ ಹಾಕುವುದು ಮಾಡುತ್ತಿದ್ದನಂತೆ. ಈ ಕಾರಣದಿಂದ ಪತ್ನಿಗೆ ಆತನ ಮೇಲೆ ಅನುಮಾನ ಮೂಡಿದೆ. ಬಳಿಕ ಸಿನಿಮೀಯ ರೀತಿಯಲ್ಲಿ ಪತಿಯ ಬಂಡವಾಳ ಬಯಲು ಮಾಡಿದ್ದಾಳೆ. ಒಂದು ದಿನ ಕೆಲಸಕ್ಕೆಂದು ಹೇಳಿ ಹೊರಟ ಪತಿಯನ್ನು ಆಕೆ ಹಿಂಬಾಲಿಸಿದ್ದಾಳೆ. ಆಗ ತನ್ನ 15 ವರ್ಷದ ತಂಗಿಯನ್ನು ಪುಸಲಾಯಿಸಿ, ಬೆದರಿಕೆ ಹಾಕಿ ಕಾಮಕ್ಕೆ ಬಳಸಿಕೊಂಡಿರುವುದು ಪತ್ನಿಗೆ ಗೊತ್ತಾಗಿದೆ. ಬಳಿಕ ಒಂದು ದಿನ ತನ್ನ ತಂಗಿಯ ಜೊತೆ ಮಲಗಿರುವಾಗ ಗಂಡನ ಕಾಮದಾಟ ಬಯಲು ಮಾಡಿದ್ದಾಳೆ.

ಬಳಿಕ ಪತಿಯ ಕೈ ಕಾಲು ಕಟ್ಟಿಹಾಕಿ ಆತನಿಗೆ ಮನಬಂದಂತೆ ಥಳಿಸಿದ್ದಾಳೆ. ಅಷ್ಟಕ್ಕೂ ಕೋಪ ತಣ್ಣಗಾಗದೇ ನೇರವಾಗಿ ಅಡುಗೆ ಮನೆಗೆ ಹೋಗಿ ಚಾಕು ತಂದು ಪತಿಯ ಮರ್ಮಾಂಗವನ್ನು ಒಂದೇ ಏಟಿನಲ್ಲಿ ಕತ್ತರಿಸಿದ್ದಾಳೆ. ಬಳಿಕ ಮರ್ಮಾಂಗವನ್ನು ಟಾಯ್ಲೆಟ್ ನಲ್ಲಿ ಹಾಕಿ ನೀರು ಹಾಕಿದ್ದಾಳೆ. ಬಳಿಕ ಆಕೆ ಅಲ್ಲಿಂದ ಹೊರಡು ಹೋಗಿದ್ದಾಳೆ. ಬಳಿಕ ಅಕ್ಕಪಕ್ಕದ ಮನೆಯವರು ಆತನ ಚೀರಾಟ ಕೇಳಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಪತ್ನಿ ಪೊಲೀಸ್ ಠಾಣೆಗೆ ಹೋಗಿ ನಡೆದ ಘಟನೆಯನ್ನು ವಿವರಿಸಿದ್ದಾಳೆ ಎಂದು ತಿಳಿದುಬಂದಿದೆ. ಸದ್ಯ 39 ವರ್ಷದ ಪತಿಯ ಸ್ಥಿತಿ ಚಿಂತಾಜನಕವಾಗಿ, ಆತನ ಪತ್ನಿಯನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.