ಬಾತ್ ರೂಮ್ ಮಿರರ್ ಸೆಲ್ಫಿ ಹಂಚಿಕೊಂಡ ಮಲ್ಲು ಬ್ಯೂಟಿ ಅನುಪಮಾ, ಮೊದಲು ನೀನು ಮಿರರ್ ಸ್ವಚ್ಚಗೊಳಿಸು ಎಂದ ನೆಟ್ಟಿಗರು…..!

Follow Us :

ಮಲಯಾಳಂ ಮೂಲದ ನಟಿ ಅನುಪಮಾ ಕ್ಯೂಟ್ ನಟಿ ಎಂತಲೇ ಫೇಂ ಸಂಪಾದಿಸಿಕೊಂಡಿದ್ದರು. ಮಲಯಾಳಂ ಮೂಲದ ನಟಿಯಾದರೂ ಸಹ ಅನುಪಮಾ ಸೌತ್ ಪ್ರೇಕ್ಷಕರಿಗೆ ತುಂಬಾನೆ ಹತ್ತಿರವಾದರು. ಸಿನೆಮಾಗಳಲ್ಲಿ ಹೋಮ್ಲಿಯಾಗಿ, ಓವರ್‍ ಗ್ಲಾಮರ್‍ ಶೋ ಮಾಡದೇ ಕ್ರೇಜ್ ಸಂಪಾದಿಸಿಕೊಂಡ ನಟಿ ಅನುಪಮಾ ಪರಮೇಶ್ವರನ್ ಇತ್ತೀಚಿಗೆ ಗ್ಲಾಮರ್‍ ಡೋಸ್ ಏರಿಸುತ್ತಿದ್ದಾರೆ. ಇದೀಗ ಆಕೆ ಬಾತ್ ರೂಂ ನಲ್ಲಿ ಬೋಲ್ಡ್ ಸೆಲ್ಫಿಗಳನ್ನು ಹಂಚಿಕೊಂಡಿದ್ದು, ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಪ್ರೇಮಂ ಎಂಬ ಮಲಯಾಳಂ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಅನುಪಮಾ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಬಹುಬೇಡಿಕೆ ನಟಿಯಾದರು. ಶತಮಾನಂ ಭವತಿ, ಹಲೋ ಗುರು ಪ್ರೇಮ ಕೋಸಮೇ, ಉನ್ನದಿ ಒಕ್ಕಟೆ ಜೀವಿತಂ ಸಿನೆಮಾದಲ್ಲಿ ನಟಿಸಿ ಖ್ಯಾತಿ ಪಡೆದುಕೊಂಡರು. ಇನ್ನೂ ಇತ್ತಿಚಿಗೆ ಆಕೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳನ್ನು ಮುಡಿಗೇರಿಸಿಕೊಂಡರು. ಕಾರ್ತಿಕೇಯ-2, 18 ಪೇಜಸ್, ಬಟರ್‍ ಪ್ಲೈ ಸಿನೆಮಾದಲ್ಲಿ ನಟಿಸಿದ್ದರು. ಈ ಮೂರು ಸಿನೆಮಾಗಳು ಆಕೆಗೆ ಒಳ್ಳೆಯ ಸಕ್ಸಸ್ ತಂದುಕೊಟ್ಟಿತ್ತು. ಅದರಲ್ಲೂ ಕಾರ್ತಿಕೇಯ-2 ಸಿನೆಮಾ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಆಕೆ ಈ ಸಿನೆಮಾದ ಮೂಲಕ ತುಂಬಾನೆ ಖ್ಯಾತಿ ಪಡೆದುಕೊಂಡರು. ಇನ್ನೂ ಈ ಹಿಂದೆ ಅನುಪಮಾ ಅಷ್ಟೊಂದು ಗ್ರಾಮರ್‍ ಶೋ ಮಾಡುತ್ತಿರಲಿಲ್ಲ. ಆದರೆ ಇತ್ತಿಚಿಗೆ ಆಕೆ ಕೊಂಚ ಓವರ್‍ ಆಗಿಯೇ ಗ್ಲಾಮರ್‍ ಶೋ ಮಾಡುತ್ತಿದ್ದಾರೆ.

ಇನ್ನೂ ನಟಿ ಅನುಪಮಾ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಬ್ಯಾಕ್ ಟು ಬ್ಯಾಕ್ ಹಾಟ್ ಪೊಟೋಶೂಟ್ಸ್ ಮೂಲಕ ಭಾರಿ ಸದ್ದು ಮಾಡುತ್ತಿದ್ದಾರೆ. ಈ ಹಾದಿಯಲ್ಲೇ ಆಕೆ ಬಾತ್ ರೂಂ ನಲ್ಲಿ ಬೋಲ್ಡ್ ಪೊಟೋಸ್ ಹಂಚಿಕೊಂಡಿದ್ದಾರೆ. ಬಾತ್ ರೂಂನಲ್ಲಿ ಮಿರರ್‍ ಸೆಲ್ಫಿ ತೆಗೆದುಕೊಂಡು ಅದನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಸ್ಲೀವ್ ಲೆಸ್ ಟಾಪ್ ನಲ್ಲಿ ಆಕೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯ ಪೊಟೋಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಜೊತೆಗೆ ವಿವಿಧ ರೀತಿಯ ಕಾಮೆಂಟ್ ಗಳೂ ಸಹ ಹರಿದುಬರುತ್ತಿವೆ. ಓರ್ವ ನೆಟ್ಟಿಗ ನಿಮ್ಮ ಮಿರರ್‍ ಕ್ಲೀನ್ ಮಾಡಿಕೊಳ್ಳಿ ಎಂದರೇ, ಮತ್ತೋರ್ವ ಟೂ ಲೇಜಿ ಟು ಕ್ಲೀನ್ ಮಿರರ್‍ ಎಂದು ವಿವಿಧ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ಅನುಪಮಾ ಲೇಟೆಸ್ಟ್ ಪೊಟೋಗಳಿಗೆ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ. ಮೊದಲನೇ ಸಿನೆಮಾದ ಮೂಲಕ ಫೇಂ ಪಡೆದುಕೊಂಡ ಈಕೆ ಸದ್ಯ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಪಡೆದುಕೊಂಡರು. ಜೊತೆಗೆ ಆಕೆ ತನ್ನ ಸಂಭಾವನೆಯನ್ನು ಸಹ ಏರಿಸಿಕೊಂಡಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಆಕೆ ಟಿಲ್ಲು ಸ್ಕ್ವೇರ್‍, ಸೀರನ್, ಈಗಲ್ ಸಿನೆಮಾಗಳ ಜೊತೆಗೆ ಮಲಯಾಳಂ ನಲ್ಲೂ ಸಹ ಒಂದು ಸಿನೆಮಾದಲ್ಲಿ ನಟಿಸುತ್ತಿದ್ದಾರೆ.