Film News

ಹೊಸ ವರ್ಷಕ್ಕೆ ವಿದೇಶಗಳಿಗೆ ಹಾರಿದ ತಮನ್ನಾ-ವಿಜಯ್ ವರ್ಮಾ, ವೈರಲ್ ಆದ ಪೊಟೋಸ್……!

ಪ್ರಸಕ್ತ ವರ್ಷದ ಆರಂಭದಲ್ಲಿ ಸ್ಟಾರ್‍ ನಟಿ ತಮನ್ನಾ ಪ್ರೇಮ ವಿಚಾರ ಹೊರಬಂತು. ಆಕೆ ಬಾಲಿವುಡ್ ವಿಲಕ್ಷಣ ನಟ ವಿಜಯ್ ವರ್ಮಾ ಜೊತೆಗೆ ಪ್ರೇಮಾಯಣ ನಡೆಸುತ್ತಿದ್ದಾರೆ. ಮೊದಲಿಗೆ ಎಲ್ಲವೂ ಸುಳ್ಳು ಎಂದು ಹೇಳಿದ ಈ ಜೋಡಿ ಇದೀಗ ಅವರ ನಡುವಣ ಸಂಬಂಧವನ್ನು ಒಪ್ಪಿಕೊಂಡಿದ್ದಾರೆ. ಸದ್ಯ ಹೊಸ ವರ್ಷವನ್ನು ಆಚರಿಸಲು ಇಬ್ಬರೂ ವಿದೇಶಗಳಿಗೆ ಹಾರಿದ್ದಾರಂತೆ. ಈ ಸಂಬಂಧ ಅವರು ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ಟಾಲಿವುಡ್ ನಲ್ಲಿ ಬಹುತೇಕ ಎಲ್ಲಾ ಸ್ಟಾರ್‍ ಗಳ ಜತೆಗೆ ನಟಿಸಿದ ತಮನ್ನಾ ಪ್ರಭಾಸ್, ಪವನ್, ಮಹೇಶ್, ಅಲ್ಲು ಅರ್ಜುನ್, ರಾಮ್ ಚರಣ್ ರವರಂತಹ ಸ್ಟಾರ್‍ ಗಳ ಜೊತೆ ನಟಿಸಿ ಭಾರಿ ಫಾಲೋಯಿಂಗ್ ಪಡೆದುಕೊಂಡರು. ಜೊತೆಗೆ ಬಾಲಿವುಡ್ ನ ವೆಬ್ ಸಿರೀಸ್ ಮೂಲಕ ಆಕೆ ಮತಷ್ಟು ಸುದ್ದಿಯಾದರು. ಹಿಂದೆದೂ ನಟಿಸಿದಂತಹ ರೀತಿಯಲ್ಲಿ ಅಂದರೇ ಬೋಲ್ಡ್ ಆಗಿ ಹಾಗೂ ಇಂಟಿಮೆಂಟ್ ಸೀನ್ಸ್ ಗಳಲ್ಲಿ ಸಹ ನಟಿಸಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದರು. ವರ್ಷದ ಆರಂಭದಿಂದ ವಿಜಯ್ ವರ್ಮಾ ಹಾಗೂ ತಮನ್ನಾ ಬಗ್ಗೆ ಡೇಟಿಂಗ್ ರೂಮರ್‍ ಶುರುವಾಯ್ತು. ಹೊಸ ವರ್ಷದ ಆಚರಣೆಯ ವೇಳೆ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡರು. ಅಂದು ಇಬ್ಬರೂ ಲಿಪ್ ಕಿಸ್ ಇಟ್ಟುಕೊಂಡ ಪೊಟೋಗಳು ವೈರಲ್ ಆಗಿತ್ತು. ಅಂದಿನಿಂದ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂದು ಸುದ್ದಿ ಹರಿದಾಡಿತ್ತು. ಬಳಿಕ ಅವರಿಬ್ಬರೂ ಪ್ರೀತಿಯಲ್ಲಿರುವುದಾಗಿ ಬಹಿರಂಗಪಡಿಸಿದರು.

ಇನ್ನೂ ತಮನ್ನಾ ಹಾಗೂ ವಿಜಯ್ ಸಮಯ ಸಿಕ್ಕಾಗಲೆಲ್ಲಾ ವೆಕೇಷನ್ ಗಳಿಗೆ ಹಾರುತ್ತಿರುತ್ತಾರೆ. ಇದೀಗ ಈ ಜೋಡಿ ಹೊಸ ವರ್ಷದ ಆಚರಣೆಗೆ ವಿದೇಶಗಳಿಗೆ ಹಾರಿದ್ದಾರೆ. ಅವರು ಬೇರೆ ಬೇರೆಯಾಗಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಆದರೆ ವಿಮಾನ ನಿಲ್ದಾಣದಲ್ಲಿ ಮಿಡಿಯಾ ಕಣ್ಣಿಗೆ ಸಿಕ್ಕಿಬಿದಿದ್ದಾರೆ. ಇದೇ ಮಾದರಿಯಲ್ಲಿ ಇಬ್ಬರು ಅನೇಕ ಭಾರಿ ಯಾರಿಗೂ ತಿಳಿಯದಂತೆ ಹೊರಗೆ ಬರುತ್ತಾರೆ. ಆದರೆ ಪಾಪರಾಜಿಗಳ ಕಣ್ಣಿಗೆ ಬೀಳುತ್ತಾರೆ. ಆಗ ಅವರ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುತ್ತವೆ. ಇದೀಗ ಆದೇ ಮಾದರಿಯಲ್ಲಿ ಮತ್ತೊಮ್ಮೆ ಮಿಡಿಯಾ ಕಣ್ಣಿಗೆ ಸಿಕ್ಕಿಬಿದಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಹಾಗೂ ನೆಟ್ಟಿಗರು ಮದುವೆ ಯಾವಾಗ ಎಂದು ಕಾಮೆಂಟ್ ಗಳನ್ನು ಹರಿಬಿಡುತ್ತಿದ್ದಾರೆ.

ಇನ್ನೂ ತಮನ್ನಾ ಹಾಗೂ ವಿಜಯ್ ವರ್ಮಾ ಮುಂದಿನ ವರ್ಷ ಮದುವೆಯಾಗಬಹುದು ಎಂದು ಹೇಳಲಾಗುತ್ತಿದೆ. ಸದ್ಯ ಸ್ಟಾರ್‍ ನಟಿಯ ಪಟ್ಟದಿಂದ ತಮನ್ನಾ ಕೆಳಗೆ ಇಳಿದರೂ ಸಹ ಆಕೆಗೆ ದೊಡ್ಡ ದೊಡ್ಡ ಸಿನೆಮಾಗಳಲ್ಲಿ ನಟಿಸುವ ಅವಕಾಶ ಹರಿದುಬರುತ್ತಿವೆ. ಇತ್ತೀಚಿಗಷ್ಟೆ ಆಕೆ ಭೋಳಾಶಂಕರ್‍ ಹಾಗೂ ಜೈಲರ್‍ ಸಿನೆಮಾದಲ್ಲಿ ನಟಿಸಿ ಸಕ್ಸಸ್ ಕಂಡುಕೊಂಡರು. ನಿರ್ದೇಶಕ ಬಾಬಿ ಹಾಗೂ ನಂದಮೂರಿ ಬಾಲಕೃಷ್ಣ ರವರ ಸಿನೆಮಾದಲ್ಲೂ ಸಹ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top