Film News

ಮೂರು ಹೆಣ್ಣು ಮಕ್ಕಳ ತಾಯಿಗೆ ಸಹಾಯ ಮಾಡಿದ ನಟ ರಾಘವ ಲಾರೆನ್ಸ್, ಜನರ ಮೆಚ್ಚುಗೆಗೆ ಪಾತ್ರರಾದ ನಟ….!

ದಕ್ಷಿಣ ಭಾರತ ಸಿನಿರಂಗದ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಅನೇಕ ಸಿನೆಮಾಗಳಲ್ಲಿ ನಟನಾಗಿ, ಕೊರಿಯೋಗ್ರಾಫರ್‍ ಆಗಿ ನಿರ್ದೇಶಕನಾಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಪಡೆದುಕೊಂಡ ರಾಘವ ಲಾರೆನ್ಸ್ ರವರು ಅನೇಕ ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇದೀಗ ಬಾಲ ಎಂಬ ಖ್ಯಾತ ಯೂಟ್ಯೂಬರ್‍ ಹಾಗೂ ರಾಘವ ಲಾರೆನ್ಸ್ಇಬ್ಬರೂ ಮೂರು ಹೆಣ್ಣು ಮಕ್ಕಳ ತಾಯಿಗೆ ಸಹಾಯ ಮಾಡಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಟ ರಾಘವ ಲಾರೆನ್ಸ್ ಸಾಮಾನ್ಯನಾಗಿ ನಿರ್ದೇಶಕನ ಕಾರು ಒರೆಸುವವನಾಗಿ ಕೆಲಸ ಆರಂಭಿಸಿದ್ದರು. ಬಳಿಕ ಸೈಡ್ ಡ್ಯಾನ್ಸರ್‍ ಆಗಿ, ಪ್ರಮುಖ ಡ್ಯಾನ್ಸರ್‍ ಆಗಿ, ಕೊರಿಯೋಗ್ರಾಫರ್‍ ಆಗಿ, ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಬೆಳೆದಿದ್ದಾರೆ. ತುಂಬಾ ಬಡತನದಿಂದ ಬಂದು ಓರ್ವ ಸ್ಟಾರ್‍ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದುಡಿದ ಹಣದಲ್ಲಿ ಇಂತಿಷ್ಟು ಮೀಸಲಿಟ್ಟು, ಅದನ್ನು ಬಡವರಿಗಾಗಿ ಮೀಸಲಿಟ್ಟು ಅವರಿಗೆ ಸಹಾಯ ಮಾಡುತ್ತಿರುತ್ತಾರೆ. ಈ ರೀತಿ ಲಾರೆನ್ಸ್ ಕೈಗೊಂಡ ಸಾಮಾಜಿಕ ಕಾರ್ಯಕ್ರಮಗಳ ದೊಡ್ಡ ಪಟ್ಟಿಯೇ ಇದೆ ಎನ್ನಬಹುದಾಗಿದೆ. ಇದೀಗ ಬಾಲ ಹೆಸರಿನ ಯೂಟ್ಯೂಬರ್‍ ಕಾಮಿಡಿ ನಟರೊಬ್ಬರು ತಮಿಳುನಾಡಿನಲ್ಲಿ ತುಂಬಾನೆ ಫೇಮಸ್ ಆಗಿದ್ದಾರೆ. ಇದೀಗ ಬಾಲ ಹಾಗೂ ಲಾರೆನ್ಸ್ ಇಬ್ಬರೂ ಜೊತೆಗೂಡಿ ಮಹಿಳೆಯೊಬ್ಬರಿಗೆ ಸಹಾಯ ಮಾಡಿದ್ದು, ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ತಮ್ಮ ಮೂರು ಮಂದಿ ಹೆಣ್ಣು ಮಕ್ಕಳನ್ನು ಸಾಕಲು ತುಂಬಾನೆ ಕಷ್ಟಪಡುತ್ತಿದ್ದು, ಚೆನ್ನಾಗಿ ದುಡಿದು ಆಟೋ ಒಂದನ್ನು ಖರೀದಿಸಬೇಕೆಂಬ ಹಂಬಲ ಆ ಮಹಿಳೆಗೆ ಇದೆ ಎನ್ನಲಾಗಿದೆ. ಆದರೆ ಆಟೋ ಖರೀದಿಸಲು ಆರ್ಥಿಕ ಸ್ಥಿತಿ ಸರಿಯಿಲ್ಲದ ಕಾರಣ ಆಕೆಯ ಆಸೆ ಈಡೇರಲಿಲ್ಲ. ಈ ವಿಚಾರವನ್ನು ತಿಳಿದ ಬಾಲ ಹಾಗೂ ಲಾರೆನ್ಸ್ ಆಕೆಗೆ ಸಹಾಯ ಮಾಡಿದ್ದಾರೆ. ಬಾಲ ಹಾಗೂ ಲಾರೆನ್ಸ್ ಆಟೋ ಒಂದನ್ನು ಖರಿದೀಸಿ ಮಹಿಳೆಗೆ ಗಿಫ್ಟ್ ನೀಡಿದ್ದಾರೆ. ಹೊಸ ಆಟೋನಲ್ಲಿ ಬಾಲ ಆ ಮಹಿಳೆಯನ್ನು ಕೂರಿಸಿಕೊಂಡು ಹೋಗಿದ್ದಾರೆ. ಬಳಿಕ ಕೆಲವು ಆಟೋಗಳು ಆ ಆಟೋವನ್ನು ಸುತ್ತುವರೆದವರು. ಸುತ್ತುವರೆದ ಎಲ್ಲಾ ಆಟೋಗಳ ಚಾಲಕರು ಮಹಿಳೆಯರಾಗಿದ್ದರು. ಆಟೋ ಚಲಾಯಿಸುತ್ತಿದ್ದ ಬಾಲ ಮಾಸ್ಕ್ ತೆಗೆದು ಈ ಆಟೋ ನಿಮಗಾಗಿ ಎಂದು ಹೇಳಿದ್ದಾರೆ.

ಸ್ವಲ್ಪ ಹಣ ಮಾತ್ರ ನಾನು ಹಾಕಿದ್ದು, ದೊಡ್ಡ ಮೊತ್ತವನ್ನು ಇನ್ನೊಬ್ಬರು ಹಾಕಿದ್ದಾರೆ ಎಂದ ಬಾಲ ರಾಘವ ಲಾರೆನ್ಸ್ ರವರನ್ನು ಕರೆದಿದ್ದಾರೆ. ಲಾರೆನ್ಸ್ ರವರನ್ನು ಕಂಡ ಮಹಿಳೆಯ ಖುಷಿಗೆ ಪಾರವೇ ಇಲ್ಲ ಎಂದು ಹೇಳಬಹುದಾಗಿದೆ. ಇನ್ನೂ ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ಅನೇಕರು ಬಾಲ ಹಾಗೂ ಲಾರೆನ್ಸ್ ರವರು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Most Popular

To Top