Film News

ದಿ ಕೇರಳ ಸ್ಟೋರಿ ಸಿನೆಮಾ ಬ್ಯಾನ್ ಮಾಡಿದ ವೆಸ್ಟ್ ಬೆಂಗಾಲ್ ಸರ್ಕಾರ…!

ಸಿನಿರಂಗದಲ್ಲಿ ಕೆಲವೊಂದು ಸಿನೆಮಾಗಳು ದೊಡ್ಡ ಮಟ್ಟದ ವಿವಾದಗಳಿಗೆ ಕಾರಣವಾಗುತ್ತಿರುತ್ತವೆ. ಕಳೆದ ವರ್ಷ ತೆರೆಕಂಡ ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ಸಹ ವಿವಾದಗಳ ನಡುವೆಯೇ ಭಾರಿ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾದ ಮಾದರಿಯಲ್ಲೇ ದಿ ಕೇರಳ ಸ್ಟೋರಿ ಸಿನೆಮಾ ಸಹ ಕಳೆದ ವೀಕೆಂಡ್ ನಲ್ಲಿ ರಿಲೀಸ್ ಆಗಿದ್ದು, ದೇಶದಾದ್ಯಂತ ಸಂಚಲನ ಸೃಷ್ಟಿಸಿದೆ. ಈಗಾಗಲೇ ಈ ಸಿನೆಮಾವನ್ನು ತಮಿಳುನಾಡಿನಲ್ಲಿ ನಿಷೇಧ ಮಾಡಿದೆ. ಇದೀಗ ಬೆಂಗಾಲ್ ಸರ್ಕಾರ ಸಹ ಈ ಸಿನೆಮಾವನ್ನು ಬ್ಯಾನ್ ಮಾಡಿದ್ದಾಗಿ ಘೋಷಣೆ ಮಾಡಿದೆ.

ಕಳೆದ ವರ್ಷ ತೆರೆಗೆ ಬಂದಂತಹ ದಿ ಕಾಶ್ಮೀರಿ ಫೈಲ್ಸ್ ಸಿನೆಮಾ ಇಡೀ ದೇಶದಾದ್ಯಂತ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಈ ಸಿನೆಮಾದ ಮೇಲೂ ಸಹ ಅನೇಕ ವಿವಾದಗಳು ಸೃಷ್ಟಿಯಾಗಿದ್ದವು. ಇದೀಗ ದಿ ಕೇರಳ ಸ್ಟೋರಿ ಎಂಬ ಸಿನೆಮಾದ ಸಹ ಭಾರಿ ಸಂಚಲನ ಸೃಷ್ಟಿ ಮಾಡಿದೆ. ಈ ಸಿನೆಮಾ ಸ್ಕ್ರೀನಿಂಗ್ ಆಗಬೇಕೆಂದು ಈಗಾಗಲೇ ಅನೇಕರು ಆಗ್ರಹಿಸುತ್ತಿದ್ದಾರೆ. ಆದರೆ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡುತ್ತಿದೆ. ಸಿನೆಮಾ ಬಿಡುಗಡೆಯಾಗಿ ಪ್ರದರ್ಶನ ಆಗುತ್ತಿದ್ದರೂ ಸಹ ಸಿನೆಮಾದ ಮೇಲಿನ ವಿವಾದ ಮುಂದುವರೆಯುತ್ತಲೇ ಇದೆ. ಇದೀಗ ಪಶ್ಚಿಮ ಬಂಗಾಳ ಸರ್ಕಾರ ಈ ಸಿನೆಮಾದ ಮೇಲೆ ನಿಷೇಧ ಹೇರಿದೆ. ಮತ ಕಲಹ ಆಗುವ ಸಾಧ್ಯತೆಗಳಿರುವ ಕಾರಣದಿಂದ ಸಿನೆಮಾ ಮೇಲೆ ನಿಷೇಧ ಹೇರಲಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿಂದೆಯೇ ತಮಿಳುನಾಡು ಸರ್ಕಾರ ಈ ಸಿನೆಮಾದ ಮೇಲೆ ಪಾಕ್ಷಿಕವಾಗಿ ನಿಷೇಧ ಹೇರಿದೆ. ಮೆಟ್ರೋ ನಗರಗಳಲ್ಲಿ ಈ ಸಿನೆಮಾದ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ. ಈ ಹಾದಿಯಲ್ಲೇ ಇದೀಗ ಬಂಗಾಳ ಸರ್ಕಾರ ಸಹ ನಿಷೇಧ ಹೇರಿದೆ.

ಇನ್ನೂ ಪ್ರೀತಿಯ ಹೆಸರಿನಲ್ಲಿ ಹಿಂದೂ ಯುವತಿಯರನ್ನು ದೇಶಾಂತರ ಮಾಡಿ ಉಗ್ರವಾದಕ್ಕೆ ಬಳಸಿಕೊಳ್ಳುತ್ತಾರೆ ಎಂಬ ಅಂಶವನ್ನು ಆಧರಿಸಿ ಈ ಸಿನೆಮಾ ತೆರೆಗೆ ಬಂದಿದೆ. ಈ ಸಿನೆಮಾಗೆ ಈಗಾಗಲೇ ಸೆನ್ಸಾರ್‍ ಬೋರ್ಡ್ ಸಹ ಕೆಲವೊಂದು ದೃಶ್ಯಗಳಿಗೆ ಕತ್ತರಿ ಸಹ ಹಾಕಿದ್ದಾರೆ. ಬಿಡುಗಡೆಯಾದ ಬಳಿಕ ಅನೇಕ ವಿವಾದಗಳಿಗೆ ಕಾರಣವಾಗಿದೆ. ಇನ್ನೂ ಈ ಸಿನೆಮಾ ಬಿಜೆಪಿ ಪಕ್ಷಕ್ಕೆ ಅನುಕೂಲವಾಗಲಿದೆ ಎಂಬ ಸುದ್ದಿಗಳು ಸಹ ಕೇಳಿಬಂದಿದೆ. ಬಿಜೆಪಿಯೇತರ ಸರ್ಕಾರಗಳು ದಿ ಕೇರಳ ಸ್ಟೋರಿ ಸಿನೆಮಾದ ಮೇಲೆ ಪೋಕಸ್ ಇಟ್ಟಿವೆ. ಈ ಹಾದಿಯಲ್ಲೇ ಪಶ್ಚಿಮ ಬಂಗಾಳ ಸರ್ಕಾರ ಸಹ ಈ ಸಿನೆಮಾ ನಿಷೇಧ ಮಾಡಿದೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡಿದೆ. ಇನ್ನೂ ಈ ಸಿನೆಮಾ ಸದ್ಯ ಸುಮಾರು 35 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಇನ್ನೂ ಈ ಸಿನೆಮಾದ ಬಗ್ಗೆ ಟಾಲಿವುಡ್ ವಿವಾದಿತ ನಿರ್ದೇಶಕ ಎಂದೇ ಕರೆಯಲಾಗುವ ರಾಮ್ ಗೋಪಾಲ್ ವರ್ಮಾ ಸಹ ಮೆಚ್ಚುಗೆ ಟ್ವೀಟ್ ಮಾಡಿದ್ದಾರೆ. ಇದು ಅಸಲೀ ಪ್ಯಾನ್ ಇಂಡಿಯಾ ಸಿನೆಮಾ ಎಂದು ಟ್ವೀಟ್ ಮಾಡಿದ್ದಾರೆ. ಈ ಸಿನೆಮಾವನ್ನು ಸುದೀಪ್ತ್ ಸೇನ್ ನಿರ್ದೇಶನ ಮಾಡಿದ್ದು, ವಿಪುಲ್ ಅಮೃತ್ ಲಾಲ್ ಷಾ ನಿರ್ಮಾಣ ಮಾಡಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

Most Popular

To Top