ಲೈಂಗಿಕ ಶಿಕ್ಷಣ ಅತ್ಯಗತ್ಯ ಎಂದ ಸ್ಟಾರ್ ಆಂಕರ್ ರಶ್ಮಿ, ಸಂಚಲನಾತ್ಮಕ ಪೋಸ್ಟ್ ವೈರಲ್….!

Follow Us :

ತೆಲುಗು ಕಿರುತೆರೆಯಲ್ಲಿ ಭಾರಿ ಕ್ರೇಜ್ ಪಡೆದುಕೊಂಡ ಆಂಕರ್‍ ಗಳಲ್ಲಿ ಒಬ್ಬರಾದ ರಶ್ಮಿ ಕಿರುತೆರೆ ಶೋಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಆಕ್ಟೀವ್ ಆಗಿರುತ್ತಾರೆ. ಬ್ಯಾಕ್ ಟು ಬ್ಯಾಕ್ ಪೊಟೋಶೂಟ್ಸ್ ಮೂಲಕ ಸಖತ್ ಸದ್ದು ಮಾಡುತ್ತಿರುತ್ತಾರೆ. ಜೊತೆಗೆ ಕೆಲವೊಮ್ಮೆ ಆಕೆ ಸಂಚಲನಾತ್ಮಕ ಪೋಸ್ಟ್ ಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಮನರಂಜನೆಯ ಜೊತೆಗೆ ಆಕೆ ಸೋಷಿಯಲ್ ಆಕ್ಟಿವಿಸ್ಟ್ ಆಗಿದ್ದು, ಇದೀಗ ಸಮಾಜ ತಲೆತಗ್ಗಿಸುವಂತಹ ಘಟನೆಯೊಂದರ ಬಗ್ಗೆ ಸಂಚಲನಾತ್ಮಕ ಪೋಸ್ಟ್ ನೀಡಿದ್ದಾರೆ.

ಆಂಕರ್‍ ಕಂ ನಟಿ ರಶ್ಮಿ ಅನಿಮಲ್ ಲವರ್‍ ಆಗಿದ್ದಾರೆ. ಎಲ್ಲಿ ಏನೇ ತಪ್ಪು ನಡೆದರೂ ಸಹ ಅದರ ಬಗ್ಗೆ ಆಕೆ ರಿಯಾಕ್ಟ್ ಆಗಿದ್ದಾರೆ. ಇದೀಗ 12 ವರ್ಷದ ಹುಡುಗಿಯನ್ನು ಹತ್ಯೆ ಮಾಡಿದ ಘಟನೆಯ ಬಗ್ಗೆ  ಆಕೆ ರಿಯಾಕ್ಟ್ ಆಗಿದ್ದಾರೆ. ಋತಿಮತಿಯಾದ 12 ವರ್ಷದ ಬಾಲಕಿಯನ್ನು ತಪ್ಪಾಗಿ ಅರ್ಥೈಸಿಕೊಂಡು ವ್ಯಕ್ತಿಯೊಬ್ಬರು ಆಕೆಯನ್ನು ಹತ್ಯೆ ಮಾಡಿದ್ದಾರೆ. ಮೃತಪಟ್ಟ ಬಾಲಕಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ ಎಂಬ ಅನುಮಾನದಿಂದ ಸಾಯಿಸಿದ್ದಾನೆ. ಇದು ಲೈಂಗಿಕ ಶಿಕ್ಷಣದ ಕೊರತೆಯಿಂದಲೇ ಇಂತಹ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿರುತ್ತವೆ. ಲೈಂಗಿಕ ಶಿಕ್ಷಣದ ಬಗ್ಗೆ ಪ್ರಾಥಮಿಕವಾದ ಅರಿವು ಸಹ ಇಲ್ಲದ ಕಾರಣ ಇಂತಹ ಘೋರ ಕೃತ್ಯಗಳು ನಡೆಯುತ್ತಿವೆ ಎಂದು ರಶ್ಮಿ ಅಭಿಪ್ರಾಯ ವ್ಯಕ್ತಪಡಿಸಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಸದ್ಯ ರಶ್ಮಿ ಹಂಚಿಕೊಂಡ ಈ ಪೊಸ್ಟ್ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ನೆಟ್ಟಿಗರಿಂದ ವಿವಿಧ ರೀತಿಯ ಪ್ರತಿಕ್ರಿಯೆಗಳೂ ಸಹ ವ್ಯಕ್ತವಾಗುತ್ತಿವೆ.

ಇನ್ನೂ ನಟಿ ರಶ್ಮಿ ಕಿರುತೆರೆಯಲ್ಲಿ ಭಾರಿ ಪೇಂ ಪಡೆದುಕೊಂಡಿದ್ದಾರೆ. ನಟಿಯಾಗಿ ಕೆರಿಯರ್‍ ಆರಂಭಿಸಿದರೂ ಸಹ ಆಕೆಗೆ ಕಿರುತೆರೆಯಲ್ಲಿ ಭಾರಿ ಕ್ರೇಜ್ ಪಡೆದುಕೊಂಡರು. ಇದೀಗ ಸಿನೆಮಾಗಳಲ್ಲೂ ಸಹ ಫೇಂ ಪಡೆದುಕೊಳ್ಳಲು ಭಾರಿ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಆಕೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದರೂ ಸಹ ಯಾವುದೇ ಸಿನೆಮಾ ಆಕೆಗೆ ಬ್ರೇಕ್ ನೀಡಲಿಲ್ಲ ಎಂದೇ ಹೇಳಬಹುದು. ಸಿನೆಮಾಗಳಲ್ಲಿ ಆಕೆಯ ಜೋರು ಕಡಿಮೆಯಾದರೂ ಸಹ ಕಿರುತೆರೆಯಲ್ಲಿ ಮಾತ್ರ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ. ವಿವಿಧ ಶೋಗಳ ಮೂಲಕ ಭಾರಿ ಫಾಲೋಯಿಂಗ್ ಪಡೆದುಕೊಂಡಿದ್ದಾರೆ. ತೆಲುಗು ಕಿರುತೆರೆ ಶೋಗಳಿಗೆ, ವಿಶೇಷ ಕಾರ್ಯಕ್ರಮಗಳಿಗೆ ಮೊದಲ ಆಯ್ಕೆ ಆಗಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ರಶ್ಮಿ ಕಳೆದ ವರ್ಷ ಬೊಮ್ಮ ಬ್ಲಾಕ್ ಬ್ಲಾಸ್ಟರ್‍ ಸಿನೆಮಾದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.  ಆದರೆ ಈ ಸಿನೆಮಾ ಅಂದುಕೊಂಡಷ್ಟು ಸಕ್ಸಸ್ ಕಾಣಲಿಲ್ಲ. ಇನ್ನೂ ಜಬರ್ದಸ್ತ್ ಶೋ ಮೂಲಕ ಫೇಂ ಪಡೆದುಕೊಂಡ ಆಂಕರ್‍ ಗಳಲ್ಲಿ ರಶ್ಮಿ ಸಹ ಒಬ್ಬರಾಗಿದ್ದಾರೆ. ಮಲ್ಲೆಮಾಲ ಸಂಸ್ಥೆಯ ಮೈನ್ ಆಂಕರ್‍ ಆಗಿ ರಶ್ಮಿ ಜೋರು ಪಡೆದುಕೊಂಡಿದ್ದಾರೆ. ಸದ್ಯ ಆಕೆ ಎಕ್ಸ್ಟ್ರಾ ಜಬರ್ದಸ್ತ್, ಶ್ರೀದೇವಿ ಡ್ರಾಮಾ ಕಂಪನೊ ಸೇರಿದಂತೆ ಅನೇಕ ಕಾರ್ಯಕ್ರಮಗಳ ಮೂಲಕ ಆಕೆ ಭಾರಿ ಕ್ರೇಜ್ ಪಡೆದುಕೊಂಡಿದ್ದಾರೆ.