ಬಾಲಿವುಡ್ ಸ್ಟಾರ್ ಗಳ ಜೊತೆಗೆ ಮಾಸ್ ಸ್ಟೆಪ್ಸ್ ಹಾಕಿದ ಬೆಂಗಾಲ್ ಸಿಎಂ ಮಮತಾ ಬೆನರ್ಜಿ, ವೈರಲ್ ಆದ ವಿಡಿಯೋ….!

Follow Us :

ಪಶ್ಚಿಮ ಬೆಂಗಾಲದ ಮುಖ್ಯಮಂತ್ರಿ ಮಮತಾ ಬೆನರ್ಜಿ ಬಾಲಿವುಡ್ ಹಿರೋಗಳೊಂದಿಗೆ ಮಾಸ್ ಸ್ಟೆಪ್ಸ್ ಹಾಕಿದ್ದಾರೆ. ಸದ್ಯ ಪಶ್ಚಿಮ ಬಂಗಾಲದ ಕೋಲ್ಕತ್ತಾ ನಗರದಲ್ಲಿ ಸಿಟಿ ಆಫ್ ಜಾಯ್ ಇಂಟರ್‍ ನ್ಯಾಷನಲ್ ಫಿಲ್ಮಂ ಫೆಸ್ಟಿವಲ್ 2023 ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸೆಲೆಬ್ರೆಟಿಗಳು ಹಾಜರಾಗಿದ್ದರು. ಬಾಲಿವುಡ್ ಸ್ಟಾರ್‍ ನಟ ಸಲ್ಮಾನ್ ಖಾನ್ ಮುಖ್ಯ ಅತಿಥಿಯಾಗಿ ಹಾಜರಾಗಿದ್ದರು. ಅವರೊಂದಿಗೆ ಸಿಎಂ ಮಮತಾ ಬೆನರ್ಜಿ, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಪಶ್ಚಿಮ ಬಂಗಾಲದ ಸಿಎಂ ಮಮತಾ ಬ್ಯಾನರ್ಜಿ ತುಂಬಾನೆ ಗಂಭೀರವಾಗಿರುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಮಮತಾ ಬೆನರ್ಜಿ ತುಂಬಾ ಖುಷಿಯಾಗಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳೊಂದಿಗೆ ಕೆಲ ಸಮಯ ಸಂತೋಷದಿಂದ ಕೆಲವೊಂದು ಮಾಸ್ ಸ್ಟೆಪ್ ಗಳನ್ನು ಹಾಕಿ ಎಲ್ಲರನ್ನೂ ಶಾಕ್ ಆಗುವಂತೆ ಮಾಡಿದ್ದಾರೆ. ಮಮತಾ ರವರ ಕೈಯಲ್ಲಿ ಸಲ್ಮಾನ್ ಖಾನ್ ನೃತ್ಯ ಮಾಡಿಸಿದ್ದಾರೆ. ಬಾಲಿವುಡ್ ಸೀನಿಯರ್‍ ನಿರ್ದೇಶಕ ಮಹೇಶ್ ಭಟ್, ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಸೌರವ್ ಗಂಗೂಲಿ, ನಟ ಅನೀಲ್ ಕಪೂರ್‍ ಸೇರಿದಂತೆ ಈ ಸಮಯದಲ್ಲಿ ಅವರೊಂದಿಗೆ ನೃತ್ಯ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ವಿವಿಧ ಕಾಮೆಂಟ್ ಗಳು ಹರಿದುಬರುತ್ತಿವೆ.

ವೇದಿಕೆಯ ಮೇಲೆ ಮಮತಾ ಬ್ಯಾನರ್ಜಿ, ಸಲ್ಮಾನ್ ಖಾನ್ ಸೇರಿದಂತೆ ಹಲವು ಸಿನಿಮಾ ತಾರೆಯರು ನೃತ್ಯ ಮಾಡಿದ್ದು, ಸಿನಿಮಾ ಅಭಿಮಾನಿಗಳು ಮತಷ್ಟು ಖುಷಿಯಾಗಿದ್ದಾರೆ. ಗಾಯಕ ಅರ್ಜಿತ್ ಸಿಂಗ್ ಹಾಡಿದ ಹಾಡಿಗೆ ಮಮತಾ ಬೆನರ್ಜಿ ಸ್ಟೆಪ್ಸ್ ಹಾಕಿ ಫಿಲಂ ಫೆಸ್ಟಿವಲ್ ಗೆ ಮತಷ್ಟು ಹೈಪ್ ತಂದುಕೊಟ್ಟರು. ಇದೇ ಕಾರ್ಯಕ್ರಮದಲ್ಲಿ ಸೌರವ್ ಗಂಗೂಲಿಯವರ ವಿಡಿಯೋ ಒಂದು ಸಹ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಲ್ಮಾನ್ ರವರನ್ನು ಗಂಗೂಲಿ ಹಾಡಿ ಹೊಗಳಿದ್ದಾರೆ. ಎಲ್ಲರಿಗೂ ಇಷ್ಟವಾದ ಹಾಗೂ ನನಗೂ ಇಷ್ಟವಾದ ಸಲ್ಮಾನ್ ಖಾನ್ ರವರನ್ನು ಮೊಟ್ಟ ಮೊದಲ ಬಾರಿಗೆ ಭೇಟಿ ಆಗುತ್ತಿರುವುದು. ಈ ಹಿಂದೆ ನಾವು ಭೇಟಿಯಾಗದೇ ಇರುವುದು ದುರದೃಷ್ಟಕರವಾದ ವಿಚಾರ ಎಂದು ಹೇಳಿದ್ದಾರೆ.