Film News

ಡೀಪ್ ಫೇಕ್ ಗೆ ಬಲಿಯಾದ ಮತ್ತೋರ್ವ ನಟಿ, ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಡೀಪ್ ಫೇಕ್ ವಿಡಿಯೋ ವೈರಲ್……!

ಸದ್ಯ ಇಡೀ ವಿಶ್ವದಾದ್ಯಂತ ಡೀಪ್ ಫೇಕ್ ಭಾರಿ ಸಂಚಲನ ಸೃಷ್ಟಿಸುತ್ತಿದೆ. ಈ ಡೀಪ್ ಫೇಕ್ ವಿಡಿಯೋಗಳಿಗೆ ಅನೇಕ ಸ್ಟಾರ್‍ ನಟಿಯರು ಬಲಿಯಾಗುತ್ತಿದ್ದಾರೆ. ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ, ಆಲಿಯಾ, ಕತ್ರಿನಾ, ಕಾಜೋಲ್ ಸೇರಿದಂತೆ ಅನೇಕರು ಬಾದಿತರಾಗಿದ್ದಾರೆ. ಇದೀಗ ಈ ಸಾಲಿಗೆ ಗ್ಲೋಬಲ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಸಹ ಡೀಪ್ ಫೇಕ್ ವಿಡಿಯೋಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

AI ಟೆಕ್ನಾಲಜಿಯ ಪುಣ್ಯ ಎಂಬಂತೆ ಸಿನಿರಂಗದಲ್ಲಿ ಡೀಪ್ ಫೇಕ್ ವಿಡಿಯೋ ಭಾರಿ ವಿವಾದ ಸೃಷ್ಟಿಸುತ್ತಿದೆ. ಅದರಲ್ಲೂ ನಟಿಯರೇ ಅದಕ್ಕೆ ಬಲಿಯಾಗುತ್ತಿದ್ದಾರೆ. ಸದ್ಯ ಇದು ವಿಶ್ವದಾದ್ಯಂತ ಭಾರಿ ಸಂಚಲನ ಸೃಷ್ಟಿಸಿದೆ. ಸ್ಟಾರ್‍ ನಟಿಯರ ಮುಖವನ್ನು ಮಾರ್ಫಿಂಗ್ ಮಾಡಿ ಅವರ ಬೇರೆಯವರ ದೇಹವನ್ನು ಜೋಡಿಸಿ ವಲ್ಗರ್‍ ಆಗಿ ಕ್ರಿಯೇಟ್ ಮಾಡುತ್ತಿದ್ದಾರೆ. ಈ ವಿಡಿಯೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಮಾಡುತ್ತಿದ್ದಾರೆ. ಇನ್ನೂ ಈ ಡೀಪ್ ಫೇಕ್ ವಿಡಿಯೋ ಕ್ರಿಯೇಟ್ ಮಾಡುವವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂಬ ದೊಡ್ಡ ಕೂಗು ಸಹ ಕೇಳಿಬರುತ್ತಿದೆ. ಕೇಂದ್ರ ಸರ್ಕಾರ ಸಹ ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಲು ಕ್ರಮ ವಹಿಸುತ್ತಿದೆ. ಆದರೂ ಸಹ ಡೀಪ್ ಫೇಕ್ ವಿಡಿಯೋ ಆರ್ಭಟ ಮಾತ್ರ ಕಡಿಮೆಯಾಗುತ್ತಿಲ್ಲ ಎಂದೇ ಹೇಳಬಹುದು.

ನ್ಯಾಷನಲ್ ಕ್ರಷ್ ರಶ್ಮಿಕಾ ಫೇಕ್ ವಿಡಿಯೋ ಒಂದು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗಿತ್ತು. ಅಲ್ಲಿಂದ ಈ ಡೀಪ್ ಫೇಕ್ ವಿಡಿಯೋ ವಿವಾದ ಶುರುವಾಯ್ತು. ರಶ್ಮಿಕಾ ಫೇಕ್ ವಿಡಿಯೋ ವೈರಲ್ ಆಗಿ ದೊಡ್ಡ ಸಂಚಲನವೇ ಸೃಷ್ಟಿಯಾಗಿತ್ತು. ಈ ವಿಡಿಯೋಗೆ ಅನೇಕ ಸ್ಟಾರ್‍ ಗಳು, ನಟಿಯರು ಹಾಗೂ ರಾಜಕೀಯ ವ್ಯಕ್ತಿಗಳು ಆಗ್ರಹ ವ್ಯಕ್ತಪಡಿಸಿದರು. ಬಳಿಕ ಕತ್ರಿನಾ ಕೈಫ್, ಕಾಜೋಲ್, ಆಲಿಯಾ ಭಟ್ ರವರ ಮಾರ್ಫಿಂಗ್ ವಿಡಿಯೋಗಳು ಇಂಟರ್‍ ನೆಟ್ ನಲ್ಲಿ ವೈರಲ್ ಆಗಿತ್ತು. ಈ ಸಾಲಿಗೆ ಇದೀಗ ಗ್ಲೋಬಲ್ ಬ್ಯೂಟಿ ಬಾಲಿವುಡ್ ಸ್ಟಾರ್‍ ಪ್ರಿಯಾಂಕಾ ಚೋಪ್ರಾ ಸಹ ಡೀಪ್ ಫೇಕ್ ವಿಡಿಯೋಗೆ ಬಲಿಯಾಗಿದ್ದಾರೆ. ಈ ಸಂಬಂಧ ಪ್ರಿಯಾಂಕಾ ಚೋಪ್ರಾ ರವರ ಡೀಪ್ ಫೇಕ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಆದರೆ ಈ ಬಾರಿ ಕಿಡಿಗೇಡಿಗಳು ಆಕೆಯ ಪೊಟೋ ಬದಲಿಸದೇ ಪ್ರಿಯಾಂಕಾ ಚೋಪ್ರಾ ಧ್ವನಿಯನ್ನು ಬದಲಿಸಿ ಫೇಕ್ ಬ್ರಾಂಡ್ ಪ್ರಮೋಟ್ ಮಾಡಿದ್ದಾರೆ.

ಈ ವಿಡಿಯೋ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆಕೆ ನಕಲಿ ಬ್ರಾಂಡ್ ಒಂದನ್ನು ಪ್ರಮೋಟ್ ಮಾಡುತ್ತಿರುವಂತೆ ಕ್ರಿಯೇಟ್ ಮಾಡಿದ್ದಾರೆ. ಆ ಕಾರಣದಿಂದ ಆ ಬ್ರಾಂಡ್ ನ ವಾರ್ಷಿಕ ಆದಾಯ ತುಂಬಾನೆ ಏರಿದೆ ಎನ್ನಲಾಗಿದೆ. ಆ ಬ್ರಾಂಡ್‌ ಅನ್ನು ಪ್ರಿಯಾಂಕಾ ಚೋಪ್ರಾ ಬಳಸುತ್ತಿರುವಂತೆ ವಿಡಿಯೋ ಕ್ರಿಯೇಟ್ ಮಾಡಿದ್ದಾರೆ.

Most Popular

To Top