ವಧು ಬೇಕೆಂದು ಪ್ರಕಟಣೆ ಕೊಟ್ಟ ವಿಜಯ್ ವರ್ಮಾ, ತಮ್ಮನ್ನಾ ಇದ್ದಾಗ ಮತ್ತೇ ಇದೇನು ಎಂದ ನೆಟ್ಟಿಗರು……!

Follow Us :

ಸೌತ್ ಸಿನಿರಂಗದ ಸ್ಟಾರ್‍ ನಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ನಡುವೆ ಅಫೈರ್‍ ನಡೆಯುತ್ತಿದೆ ಎಂದು ರೂಮರ್‍ ಗಳು ಹರಿದಾಡುತ್ತಲೇ ಇದೆ. 2023 ರ ಹೊಸ ವರ್ಷದ ಸಂಭ್ರಮದ ವೇಳೆ ತಮನ್ನಾ ಹಾಗೂ ವಿಜಯ್ ವರ್ಮಾ ಜಂಟಿಯಾಗಿ ಆಚರಿಸಿಕೊಂಡರು. ಅಲ್ಲಿಂದ ಅವರಿಬ್ಬರ ನಡುವೆ ಅಫೈರ್‍ ಇದೆ ಎಂಬ ಸುದ್ದಿ ಹರಿದಾಡಲು ಶುರುವಾಯ್ತು. ಈ ಹಿಂದೆ ತಮನ್ನಾ ಈ ಸುದ್ದಿಗಳನ್ನು ಖಂಡಿಸಿದ್ದರು. ಎಲ್ಲವೂ ಸುಳ್ಳು ಸುದ್ದಿಗಳು ಎಂದು ತಳ್ಳಿಹಾಕಿದ್ದರು. ಆದರೆ ಅವರ ನಡವಳಿಕೆಗಳು ಮಾತ್ರ ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಅನುಮಾನಗಳನ್ನು ಹುಟ್ಟಿಹಾಕುತ್ತಿವೆ.

ನಟಿ ತಮನ್ನಾ ಹೊಸ ವರ್ಷವನ್ನು ಗೋವಾದಲ್ಲಿ ಆಚರಿಸಿಕೊಂಡರು. ಪಾರ್ಟಿಯಲ್ಲಿ ತಮನ್ನಾ ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಮುತ್ತಿಟ್ಟಿರುವ ಪೊಟೋ ಒಂದು ವೈರಲ್ ಆಗಿದೆ. ಆಕೆ ರೂಮರ್‍ ಬಾಯ್ ಫ್ರೆಂಡ್ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಹಗ್ ಮಾಡಿಕೊಳ್ಳುತ್ತಾ ಎಂಜಾಯ್ ಮಾಡಿದ್ದರು. ಈ ಸಂಬಂಧ ವಿಡಿಯೋ ಒಂದು ಹೊರಬಂದಿದ್ದು, ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಶುರುವಾಯಿತು. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸಿನಿವಲಯದಲ್ಲಿ ಜೋರಾಗಿ ಕೇಳಿಬಂತು. ಜೊತೆಗೆ ಕೆಲವೊಂದು ಕಾರ್ಯಕ್ರಮಗಳಲ್ಲೂ ಸಹ ಈ ಜೋಡಿ ಕಾಣಿಸಿಕೊಂಡಿದ್ದು, ಈ ರೂಮರ್‍ ಗಳಿಗೆ ಮತಷ್ಟು ಬಲ ಬಂದಂತಾಗಿದೆ. ಕೆಲವು ದಿನಗಳ ಹಿಂದೆ ಸಹ ಅವರಿಬ್ಬರೂ ಡಿನ್ನರ್‍ ನೈಟ್ ಗೆ ಹೋಗುತ್ತಾ ಕಾಣಿಸಿಕೊಂಡಿದ್ದರು. ಈ ವೇಳೆ ಕ್ಯಾಮೆರಾಗಳಿಗೆ ನಗುತ್ತಾ ಪೋಸ್ ಕೊಟ್ಟಿದ್ದರು. ಇದೆಲ್ಲವನ್ನು ಗಮನಿಸಿದರೇ ಅವರಿಬ್ಬರ ನಡುವೆ ಅಫೈರ್‍ ನಡೆಯುತ್ತಿದೆ ಎಂದೇ ಎಲ್ಲರೂ ಭಾವಿಸುತ್ತಿದ್ದಾರೆ.

ಇನ್ನೂ ಇದೀಗ ವಿಜಯ್ ವರ್ಮಾ ರವರಿಗೆ ಸಂಬಂಧಿಸಿದ ಸುದ್ದಿಯೊಂದು ವೈರಲ್ ಆಗುತ್ತಿದೆ. ವಿಜಯ್ ವರ್ಮಾ ಅಭಿನಯದ ವೆಬ್ ಸಿರೀಸ್ ದಾಹಡ್ ಪ್ರಮೋಷನ್ ನಲ್ಲಿ ವಿಜಯ್ ವರ್ಮಾ ಹೆಸರಿನಲ್ಲಿ ಸುದ್ದಿಯೊಂದು ಬಿಡುಗಡೆಯಾಗಿತ್ತು.  ವಿಜಯ್ ವರ್ಮಾ ಗುಣಗಳು, ಸೌಂದರ್ಯವನ್ನು ತಿಳಿಸುತ್ತಾ ವಧು ಬೇಕಾಗಿದೆ ಎಂದು ಪೋಸ್ಟರ್‍ ಹಾಕಿದ್ದರು. ಈ ಪ್ರಮೋಷನ್ ಪೋಸ್ಟರ್‍ ಇದೀಗ ಬೇರೆಯದ್ದೆ ತಿರುವು ಪಡೆದುಕೊಂಡಿದೆ.  ತಮನ್ನಾ ಇರುವಾಗ ಈ ಪ್ರಕಟನೆ ಏಕೆ. ನೀವು ದೊಡ್ಡ ಸ್ಟಾರ್‍ ಸಹ ಅಲ್ಲ ಆದರೂ ಸಹ ತಮನ್ನಾ ರನ್ನು ಪ್ರೀತಿಗೆ ಬೀಳಿಸಿದ್ದೀರಿ ಎಂಬೆಲ್ಲಾ ಕಾಮೆಂಟ್ ಗಳು ಹರಿದು ಬರುತ್ತಿದೆ.

ಇನ್ನೂ ವಿಜಯ್ ವರ್ಮಾ ತೆಲುಗಿನಲ್ಲಿ ಎಂ.ಸಿ.ಎ ಸಿನೆಮಾದಲ್ಲಿ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಬಾಲಿವುಡ್ ನಲ್ಲು ಕೆಲವೊಂದು ಸಿನೆಮಾಗಳಲ್ಲಿ ಆತ ನಟಿಸಿದ್ದಾರೆ. ಇನ್ನೂ ತಮನ್ನಾ ಸಹ ಸೌತ್ ನಲ್ಲಿ ಬಹುಬೇಡಿಕೆ ನಟಿಯಾಗಿದ್ದಾರೆ. ಸದ್ಯ ಆಕೆ ಭೋಳಾ ಶಂಕರ್‍, ಜೈಲರ್‍ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ. ತಮಿಳು ಸ್ಟಾರ್‍ ನಟ ರಜನಿಕಾಂತ್ ರವರ ಜೈಲರ್‍ ಸಿನೆಮಾದಲ್ಲಿ ರಜನಿಕಾಂತ್ ಗೆ ಜೋಡಿಯಾಗಿ ಮೊದಲ ಬಾರಿಗೆ ತಮನ್ನಾ ಬಣ್ಣ ಹಚ್ಚುತ್ತಿದ್ದಾರೆ.