ವಿಶಾಲ್ ಹಾಗೂ ವರಲಕ್ಷ್ಮೀ ಶರತ್ ಕುಮಾರ್ ಬೇರೆಯಾಗಲು ಕಾರಣವೇ ಅದೇನಂತೆ….!

Follow Us :

ಸಿನಿರಂಗದಲ್ಲಿ ಡೇಟಿಂಗ್, ಲವ್, ಮ್ಯಾರೇಜ್, ಡಿವೋರ್ಸ್ ಸಾಮಾನ್ಯವಾಗಿ ನಡೆಯುತ್ತಿರುತ್ತವೆ. ಅನೇಕ ಜೋಡಿಗಳು ಪ್ರೀತಿಸಿ ಬಳಿಕ ಬ್ರೇಕಪ್ ಮಾಡಿಕೊಂಡಿದ್ದಾರೆ. ಮದುವೆಯಾದ ಬಳಿಕವೂ ಸಹ ಕೆಲವು ಜೋಡಿಗಳು ವಿಚ್ಚೇದನ ಪಡೆದುಕೊಂಡಿವೆ. ಇದೀಗ ಕಾಲಿವುಡ್ ಸ್ಟಾರ್‍ ನಟ ವಿಶಾಲ್ ಹಾಗೂ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಈ ಹಿಂದೆ ಪ್ರೀತಿಸಿಕೊಂಡಿದ್ದರಂತೆ. ಆದರೆ ಕೆಲವೊಂದು ಕಾರಣಗಳಿಂದ ಅವರಿಬ್ಬರು ಬೇರೆಯಾದರು ಎಂದು ಹೇಳಲಾಗುತ್ತಿದ್ದು, ಇದೀಗ ಅವರು ಬೇರೆಯಾಗಲು ಕಾರಣ ಅದೇ ಇದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ತಮಿಳು ನಟ ವಿಶಾಲ್ ಬಗ್ಗೆ ಹೆಚ್ಚಿನ ಪರಿಚಯ ಅಗತ್ಯವಿಲ್ಲ. ಅನೇಕ ಸಿನೆಮಾಗಳ ಮೂಲಕ ತನ್ನದೇ ಆದ ಕ್ರೇಜ್ ಪಡೆದುಕೊಂಡಿದ್ದಾರೆ. ತಮಿಳು ಹಾಗೂ ತೆಲುಗಿನಲ್ಲೂ ಸಹ ಅವರ ಸಿನೆಮಾಗಳು ಬಿಡುಗಡೆಯಾಗುತ್ತಿದ್ದು ಎರಡೂ ಸಿನಿರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿಗಳನ್ನು ಗಳಿಸಿಕೊಂಡಿದಾರೆ. ಅದೇ ರೀತಿ ನಟಿ ವರಲಕ್ಷ್ಮೀ ಶರತ್ ಕುಮಾರ್‍ ಸಹ ವಿಭಿನ್ನವಾದ ಪಾತ್ರಗಳನ್ನು ಪೋಷಣೆ ಮಾಡುವ ಮೂಲಕ ತನ್ನದೇ ಆದ ಅಭಿಮಾನಿ ಬಳಗವನ್ನು ಸಹ ಪಡೆದುಕೊಂಡಿದ್ದಾರೆ. ಆದರೆ ಆಕೆ ವೈವಾಹಿಕ ಜೀವನಕ್ಕೆ ದೂರವೇ ಉಳಿದಿದ್ದಾರೆ. ಜೊತೆಗೆ ಮದುವೆ ಸುದ್ದಿ ಬಂದರೇ ಸಾಕು ಅದರಿಂದ ಆಕೆ ತಪ್ಪಿಸಿಕೊಳ್ಳುತ್ತಿರುತ್ತಾರೆ. ಇದೀಗ ವರಲಕ್ಷ್ಮೀ ಶರತ್ ಕುಮಾರ್‍ ರವರಿಗೆ ಸಂಬಂಧಿಸಿದ ಸುದ್ದಿಯೊಂದು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇನ್ನೂ ವರಲಕ್ಷ್ಮೀ ಹಾಗೂ ವಿಆಶಾಲ್ ಸುಮಾರು ದಿನಗಳಿಂದ ಪ್ರೀತಿಸಿಕೊಳ್ಳುತ್ತಿದ್ದರಂತೆ, ಜೊತೆಗೆ ಮದುವೆಗೂ ಸಹ ಸಿದ್ದರಾಗಿದ್ದರಂತೆ. ಆದರೆ ಮದುವೆಯಾಗಬೇಕು ಎಂದುಕೊಳ್ಳುವ ಸಮಯದಲ್ಲಿ ವಿಶಾಲ್ ಆಕೆಯಿಂದ ದೂರವಾಗಿದ್ದಾರೆ. ಇನ್ನೂ ಅದಕ್ಕೆ ಕಾರಣಗಳು ಏನು ಎಂಬುದರ ಬಗ್ಗೆ ಸಹ ಹೇಳಲಾಗುತ್ತಿದೆ. ವಿಶಾಲ್ ಹಾಗೂ ವರಲಕ್ಷ್ಮೀ ಬ್ರೇಕಪ್ ಗೆ ಕಾರಣ ವಿಶಾಲ್ ಹಾಗೂ ವರಲಕ್ಷ್ಮಿ ತಂದೆ ಶರತ್ ಕುಮಾರ್‍ ನಡುವೆ ಗಲಾಟೆಗಳು ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ವರಲಕ್ಷ್ಮಿ ಶರತ್ ಕುಮಾರ್‍ ರವರ ಮೊಂಡುತನದ ಕಾರಣದಿಂದ ವಿಶಾಲ್ ಆಕೆಯೊಂದಿಗೆ ಬ್ರೇಕಪ್ ಮಾಡಿಕೊಂಡ ಎಂದು ಹೇಳಲಾಗುತ್ತಿದೆ. ಸದ್ಯ ಈ ಸುದ್ದಿ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

ಇದರ ಜೊತೆಗೆ ಮತಷ್ಟು ರೂಮರ್‍ ಗಳೂ ಸಹ ಕೇಳಿಬರುತ್ತಿವೆ. ಆಕೆಯೊಂದಿಗೆ ವಿಶಾಲ್ ಗೆ ಅವಸರ ತೀರಿದೆ ಈ ಕಾರಣದಿಂದ ಆಕೆಯನ್ನು ಬಿಟ್ಟುಬಿಟ್ಟ ಎಂದು ವಿಮರ್ಶೆಗಳೂ ಸಹ ಕೇಳಿಬರುತ್ತಿವೆ. ಇನ್ನೂ ಈ ಸುದ್ದಿ ಯಲ್ಲಿ ಎಷ್ಟು ನಿಜವಿದೆಯೋ ತಿಳಿಯದು. ಆದರೆ ಅವರಿಬ್ಬರೂ ಬೇರೆಯಾಗಿದ್ದಾಗಿ ಸುದ್ದಿಗಳು ಮಾತ್ರ ಕೇಳಿಬರುತ್ತಲೇ ಇದೆ.