ವ್ಯಾಲೆಂಟೈನ್ ಡೇ ಅಂಗವಾಗಿ ಸ್ಪೇಷಲ್ ಪೊಟೋ ಮೂಲಕ ತಮ್ಮ ಪ್ರೀತಿಯನ್ನು ಅಧಿಕೃತವಾಗಿ ಹೊರಹಾಕಿದ್ರೇ ವಿಜಯ್ ವರ್ಮಾ?

ಸಿನಿರಂಗದಲ್ಲಿ ಸೆಲೆಬ್ರೆಟಿಗಳ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಆಸಕ್ತರಾಗಿರುತ್ತಾರೆ. ಅವರ ಬಗ್ಗೆ ಯಾವುದೇ ಸುದ್ದಿ ಬರಲಿ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಹರಿದಾಡುತ್ತಿರುತ್ತದೆ. ಹೊಸವರ್ಷದ ಆಚರಣೆಯ ವೇಳೆ ಮಿಲ್ಕಿ ಬ್ಯೂಟಿ ತಮನ್ನಾ…

ಸಿನಿರಂಗದಲ್ಲಿ ಸೆಲೆಬ್ರೆಟಿಗಳ ವೈಯುಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳಲು ಅವರ ಅಭಿಮಾನಿಗಳು ಆಸಕ್ತರಾಗಿರುತ್ತಾರೆ. ಅವರ ಬಗ್ಗೆ ಯಾವುದೇ ಸುದ್ದಿ ಬರಲಿ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಹರಿದಾಡುತ್ತಿರುತ್ತದೆ. ಹೊಸವರ್ಷದ ಆಚರಣೆಯ ವೇಳೆ ಮಿಲ್ಕಿ ಬ್ಯೂಟಿ ತಮನ್ನಾ ಹಾಗೂ ಬಾಲಿವುಡ್ ನಟ ವಿಜಯ್ ವರ್ಮಾ ಪಾರ್ಟಿಯಲ್ಲಿ ಕಿಸ್ ಮಾಡಿಕೊಂಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು. ಇದೀಗ ಪ್ರೇಮಿಗಳ ದಿನದ ಅಂಗವಾಗಿ ವಿಜಯ್ ವರ್ಮಾ ಸ್ಪೇಷಲ್ ಪೊಟೋ ಒಂದು ಹಂಚಿಕೊಂಡಿದ್ದು, ಈ ಪೊಟೋ ಮೂಲಕ ತಮ್ಮ ಪ್ರೀತಿಯ ವಿಚಾರ ಹೊರಹಾಕಿದ್ದಾರೆಯೇ ಎಂಬ ಅನುಮಾನಗಳು ಮೂಡುವಂತೆ ಮಾಡಿದ್ದಾರೆ.

ವ್ಯಾಲೆಂಟೈನ್ ಡೇ ಅಂಗವಾಗಿ ಸಿನೆಮಾ ಸೆಲೆಬ್ರೆಟಿಗಳು ವಿಶೇಷ ರೀತಿಯ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಮದುವೆಯಾದ ಜೋಡಿಗಳು ತಮ್ಮ ಪ್ರೀತಿಯ ಶುಭಾಷಯಗಳನ್ನು ಕೋರಿದ್ದಾರೆ. ಅದೇ ಮಾದರಿಯಲ್ಲಿ ವಿಜಯ್ ವರ್ಮಾ ಸಹ ವಿಶೇಷ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತನ್ನ ಪ್ರೇಯಸಿಗೆ ಶುಭಾಷಯ ಕೋರಿದ್ದಾರೆ. ಇನ್ನೂ ವಿಜಯ್ ವರ್ಮಾ ಕಾಲಿನ ಪೊಟೋ ಶೇರ್‍ ಮಾಡಿ ಹಾರ್ಟ್ ಎಮೋಜಿ ಹಾಕಿ ಪೊಟೋ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ ಯಾರು ಎಂಬ ವಿಚಾರ ಮಾತ್ರ ವಿಜಯ್ ರಿವೀಲ್ ಮಾಡಿಲ್ಲ. ಆದರೆ ಅಭಿಮಾನಿಗಳು ಮಾತ್ರ ಪೋಸ್ಟ್ ಬಂದ ಕೂಡಲೇ ಆ ಕಾಲುಗಳು ತಮನ್ನಾ ರವರದ್ದೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ತಮನ್ನಾ ಧರಿಸಿದ ಶೂ ಹಾಗೂ ಜರ್ಕಿನ್ ಪೊಟೋಗಳನ್ನು ಶೇರ್‍ ಮಾಡಿದ್ದು, ಇದು ತಮನ್ನಾ ಕಾಲಿಗಳೇ ಎಂದು, ಈ ಪೊಟೋ ಮೂಲಕ ವಿಜಯ್ ವರ್ಮಾ ತನ್ನ ಪ್ರೀತಿಯನ್ನು ಆ ಮೂಲಕ ಬಹಿರಂಗ ಪಡಿಸಿದರೇ ಎಂಬ ಅನುಮಾನಗಳೂ ಸಹ ಹುಟ್ಟಿಕೊಂಡಿವೆ.

ಇನ್ನೂ ತಮನ್ನಾ ಹಾಗೂ ವಿಜಯ್ ವರ್ಮಾ ಹೊಸ ವರ್ಷದ ಆಚರಣೆ ಒಟ್ಟಿಗೆ ಆಚರಿಸಿಕೊಂಡಿದ್ದರು. ಈ ಸಂಬಂಧ ವಿಡಿಯೋ ಒಂದು ಸಖತ್ ವೈರಲ್ ಆಗಿತ್ತು. ಈ ವಿಡಿಯೋದಲ್ಲಿ ವಿಜಯ್ ಹಾಗೂ ತಮನ್ನಾ ಕಿಸ್ ಮಾಡಿಕೊಂಡಿದ್ದರು. ಬಳಿಕ ಇಬ್ಬರೂ ಸಖತ್ ಎಂಜಾಯ್ ಮಾಡಿದ್ದಾರೆ. ಅವರಿಬ್ಬರೂ ಲವ್ ಸ್ಟೋರಿ-2 ಸಿನೆಮಾದಲ್ಲಿ ಭೇಟಿಯಾಗಿದ್ದರು. ಅಂದಿನಿಂದ ಅವರಿಬ್ಬರೂ ಸ್ನೇಹಿತರಾದರು, ಸ್ನೇಹ ಪ್ರೀತಿಯಾಗಿದೆ ಎನ್ನಲಾಗುತ್ತಿದೆ. ಇನ್ನೂ ಇಬ್ಬರೂ ಸೀಕ್ರೇಟ್ ಆಗಿಯೇ ಪ್ರೀತಿಸಿಕೊಳ್ಳುತ್ತಿದ್ದು, ಹೊಸ ವರ್ಷದ ಆಚರಣೆಯ ವೇಳೆ ಬಹಿರಂಗವಾಗಿದೆ ಎನ್ನಲಾಗುತ್ತಿದೆ.

ಸದ್ಯ ತಮನ್ನಾ ಸೌತ್ ಸಿನಿರಂಗದಲ್ಲಿ ಬ್ಯುಸಿಯಾದ ನಟಿಯಾಗಿದ್ದಾರೆ. ತೆಲುಗು, ತಮಿಳು ಸಿನೆಮಾಗಳ ಜೊತೆಗೆ ಹಿಂದಿ ಸಿನೆಮಾಗಳಲ್ಲೂ ಸಹ ನಟಿಸುತ್ತಿದ್ದಾರೆ. ತಮನ್ನಾ ಸದ್ಯ ಮೇಗಾಸ್ಟಾರ್‍ ಚಿರಂಜೀವಿ ಜೊತೆಗೆ ಭೋಳಾ ಶಂಕರ್‍, ಸೂಪರ್‍ ಸ್ಟಾರ್‍ ರಜನಿಕಾಂತ್ ಜೊತೆಗೆ ಜೈಲರ್‍ ಸಿನೆಮಾದಲ್ಲೂ ಸಹ ತಮನ್ನಾ ನಟಿಸುತ್ತಿದ್ದಾರೆ. ಇನ್ನೂ ತಮನ್ನಾ ಹಾಗೂ ವಿಜಯ್ ವರ್ಮಾ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.