ಸ್ಟಾರ್ ನಟಿ ಅನುಷ್ಕಾಗೂ ಆರೋಗ್ಯ ಸಮಸ್ಯೆ, ಅನುಷ್ಕಾ ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆ ಏನು, ವೈರಲ್ ಆದ ಕಾಮೆಂಟ್ಸ್….!

ಸೌತ್ ಸಿನಿರಂಗದ ಅನೇಕ ನಟಿಯರು ತಮಗಿರುವ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾ ಮೂಲಕ ತಮ್ಮ ಆರೋಗ್ಯ ಸಮಸ್ಯೆಯ ಬಗ್ಗೆ ರಿವೀಲ್ ಮಾಡುತ್ತಿದ್ದು, ಆ ನಟಿಯರ ಅಭಿಮಾನಿಗಳು ಶಾಕ್ ಆಗುತ್ತಿದ್ದಾರೆ. ನಟಿ ಸಮಂತಾ ಮಯೋಸೈಟೀಸ್ ವ್ಯಾಧಿಗೆ ಗುರಿಯಾಗಿದ್ದರೇ, ಮಮತಾ ಮೋಹನ್ ದಾಸ್, ಶ್ರುತಿಹಾಸನ್, ರೇಣು ದೇಸಾಯಿ ಸೇರಿದಂತೆ ಹಲವರು ತಮ್ಮ ಆರೋಗ್ಯ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಇದೀಗ ಈ ಸಾಲಿಗೆ ಸೌತ್ ಸ್ಟಾರ್‍ ನಟಿ ಅನುಷ್ಕಾ ಸಹ ಸೇರಿಕೊಂಡಿದ್ದಾರೆ. ತಾನು ಅನುಭವಿಸುತ್ತಿರುವ ಆರೋಗ್ಯ ಸಮಸ್ಯೆಯ ಬಗ್ಗೆ ರಿವೀಲ್ ಮಾಡಿದ್ದಾರೆ.

ಸೌತ್ ಸಿನಿರಂಗದ ಸ್ಟಾರ್‍ ನಟಿ ಸಮಂತಾ ಭಯಂಕರವಾದ ಮಯೋಸೈಟೀಸ್ ಎಂಬ ಕಾಯಿಲೆಯಿಂದ ಬಳಲುತ್ತಿರುವುದಾಗಿ ಸೋಷಿಯಲ್ ಮಿಡಿಯಾ ಮೂಲಕ ಹೇಳಿಕೊಂಡಿದ್ದರು. ಸದ್ಯ ಸಮಂತಾ ಈ ವ್ಯಾಧಿಯಿಂದ ಹೊರಬಂದಿದ್ದು, ಸಿನೆಮಾಗಳಲ್ಲಿ ಕಮ್ ಬ್ಯಾಕ್ ಆಗಿದ್ದಾರೆ. ಅದೇ ರೀತಿ ನಟಿ ಮಮತಾ ಮೋಹನ್ ದಾಸ್ ಸಹ ಚರ್ಮ ವ್ಯಾಧಿಯಿಂದ ಬಳಲುತ್ತಿರುವುದಾಗಿ ಸೋಷಿಯಲ್ ಮಿಡಿಯಾ ಮೂಲಕ ತಿಳಿಸಿದ್ದರು. ಇತ್ತೀಚಿಗೆ ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಸಹ ತಾನು ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಸಾಲಿಗೆ ಇದೀಗ ಸೌತ್ ನ ಮತ್ತೋರ್ವ ಸ್ಟಾರ್‍ ನಟಿ ಅನುಷ್ಕಾ ಶೆಟ್ಟಿ ಸಹ ಸೇರಿಕೊಂಡಿದ್ದಾರೆ. ಆಕೆ ಸಹ ಒಂದು ವಿಭಿನ್ನವಾದ ಕಾಯಿಲೆಯಿಂದ ಬಳಲುತ್ತಿರುವುದಾಗಿ ಇತ್ತಿಚಿಗೆ ನಡೆದ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಸೌತ್ ಸ್ಟಾರ್‍ ನಟಿ ಅನುಷ್ಕಾ ಶರ್ಮಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ಸಂದರ್ಶನದಲ್ಲಿ ಅನುಷ್ಕಾ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ತಾನು ಸುಮಾರು ದಿನಗಳಿಂದ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದಾಗಿ ತಿಳಿಸಿದ್ದಾರೆ. ತಾನು ಒಂದು ಬಾರಿ ನಗಲು ಪ್ರಾರಂಭಿಸಿದರೇ 15-20 ನಿಮಿಷಗಳ ವರೆಗೂ ನಗುತ್ತಲೇ ಇರುತ್ತಾರಂತೆ. ನಗಿಸುವಂತಹ ಸಂಘಟನೆ ಏನಾದರೂ ಬಂದರೇ ನಗುತ್ತಲೇ ಇರುತ್ತಾರಂತೆ. ಆ ನಗುವನ್ನು ಕಂಟ್ರೋಲ್ ಮಾಡಲು ಸಹ ಆಕೆಗೆ ಆಗುವುದಿಲ್ಲವಂತೆ. ಇನ್ನೂ ಶೂಟಿಂಗ್ ಸಮಯದಲ್ಲಿ ಏನಾದರೂ ಅಂತಹ ನಗಿಸುವ ಸನ್ನಿವೇಶಗಳು ಬಂದರೇ ಶೂಟಿಂಗ್ ಸಹ ಸ್ಥಗಿತಗೊಳ್ಳುತ್ತದೆಯಂತೆ. ಶೂಟಿಂಗ್ ಸಮಯದಲ್ಲಿ ನಗು ಬಂದರೇ ಪ್ರೊಡಕ್ಷನ್ ನಲ್ಲಿರುವವರು ಹೋಗಿ ಟಿಫನ್ ಹಾಗೂ ಸ್ನ್ಯಾಕ್ಸ್ ತಿಂದು ಬರುತ್ತಾರೆ ಎಂದು ಕೆಲವೊಂದು ಆಸಕ್ತಿಕರವಾದ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಅನುಷ್ಕಾ ನಿಜಕ್ಕೂ ಅಂತಹ ವ್ಯಾಧಿಯಿಂದ ಬಳಲುತ್ತಿದ್ದಾರಾ ಅಥವಾ ತಮಾಷೆಗೆ ಹೇಳಿದ್ದಾರಾ ಎಂಬುದರ ಬಗ್ಗೆ ಯಾವುದೇ ಸ್ಪಷ್ಟನೆ ಇಲ್ಲ. ಇನ್ನೂ ನಗುವುದು ಆರೋಗ್ಯಕ್ಕೆ ಒಳ್ಳೆಯದು, ನೀವು ಎಷ್ಟು ಸಮಯ ನಕ್ಕರೇ ನಮಗೆ ಅಷ್ಟು ಸಂತೋಷ ಎಂದು ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ. ಸದ್ಯ ನವೀನ್ ಪೊಲಿಶೆಟ್ಟಿ ಜೊತೆಗೆ ಅನುಷ್ಕಾ ಮೈತ್ರಿ ಮೂವಿ ಬ್ಯಾನರ್‍ ನಡಿ ಸಿನೆಮಾ ಒಂದನ್ನು ಮಾಡುತ್ತಿದ್ದಾರೆ.