Film News

ಲವರ್ಸ್ ಡೇ ಸಮಯದಲ್ಲಿ ಸಿದ್ದಾರ್ಥ್ ಗೆ ಪ್ರಪೋಸ್ ಮಾಡುವ ಬದಲಿಗೆ ಸೀನಿಯರ್ ನಟನಿಗೆ ಪ್ರಪೋಸ್ ಮಾಡಿದ ಅದಿತಿ, ಸಿದ್ದಾರ್ಥ್ ರಿಯಾಕ್ಷನ್?

ಇತ್ತೀಚಿಗೆ ಕೆಲವು ದಿನಗಳಿಂದ ಸೌತ್ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಡೇಟಿಂಗ್ ನಡೆಸುತ್ತಿರುವ ಸುದ್ದಿ ಕೇಳಿಬರುತ್ತಲೇ ಇದೆ. ಈ ಹಿಂದೆ ಶರ್ವಾನಂದ್ ಎಂಗೇಜ್ ಮೆಂಟ್ ವೇಳೆ ಸಿದ್ದಾರ್ಥ್ ಹಾಗೂ ಅದಿತಿ ನವ ದಂಪತಿಯಂತೆ ಹಾಜರಾಗಿದ್ದರು. ಈ ವೇಳೆ ಅವರು ಸದ್ಯ ಮದುವೆಯಾಗುವ ಉದ್ದೇಶವಿಲ್ಲ. ಸಹ ಜೀವನ ನಡೆಸುತ್ತಿದ್ದೇವೆ ಎಂದು ಹೇಳಿದ್ದಾಗಿಯೂ ಸಹ ಕೆಲವೊಂದು ಸುದ್ದಿಗಳು ಕೇಳಿಬಂದಿದ್ದವು. ಇದೀಗ ಪ್ರೇಮಿಗಳ ದಿನದಂದು ಸಿದ್ದಾರ್ಥ್‌ಗೆ ಪ್ರಪೋಸ್ ಮಾಡುವ ಬದಲಿಗೆ ಸೀನಿಯರ್‍ ನಟರೊಬ್ಬರಿಗೆ ಪ್ರಪೋಸ್ ಮಾಡಿದ್ದಾರೆ. ಪ್ರೇಮಿಗಳ ದಿನದಂದು ಬಿಗ್ ಟ್ವಿಸ್ಟ್ ನೀಡಿದ್ದಾರೆ ಅದಿತಿ.

ಸೌತ್ ಸಿನಿರಂಗದ ಹಾಟ್ ಬ್ಯೂಟಿ ಅದಿತಿ ರಾವ್ ಹೈದರಿ ಪ್ರೇಮಿಗಳ ದಿನದಂದೇ ತನ್ನ ಪ್ರಿಯಕರಿಗೆ ಬಿಗ್ ಶಾಕ್ ನೀಡಿದ್ದಾರೆ. ಸುಮಾರು ದಿನಗಳಿಂದ ಅವರಿಬ್ಬರೂ ಪ್ರೇಮ ಪಯಣ ಸಾಗಿಸುತ್ತಿರುವುದು ತಿಳಿದೇ ಇದೆ. ಪ್ರೇಮಿಗಳ ದಿನದಂದು ಎಲ್ಲರೂ ಸಿದ್ದಾರ್ಥ್ ಗೆ ಅದಿಥಿ ಪ್ರಪೋಸ್ ಮಾಡುತ್ತಾರೆ ಎಂದುಕೊಂಡಿದ್ದರೇ, ಅದಿತಿ ಮಾತ್ರ ಎಲ್ಲರಿಗೂ ಶಾಕ್ ನೀಡಿದ್ದಾರೆ. ಸೀನಿಯರ್‍ ನಟನಿಗೆ ಪ್ರಪೋಸ್ ಮಾಡುವ ಮೂಲಕ ಬಿಗ್ ಟ್ವಿಸ್ಟ್ ನೀಡಿದ್ದಾರೆ. ನಟಿ ಅದಿತಿ ಬಾಲಿವುಡ್ ಸಿನೀಯರ್‍ ನಟ ಧರ್ಮೆಂದ್ರ ರವರಿಗೆ ವಾಲೆಂಟೈನ್ ಡೇ ವಿಷಸ್ ತಿಳಿಸಿದ್ದಾರೆ. ಇದರ ಜೊತೆಗೆ ಆಕೆ ದಿ ಮೋಸ್ಟ್ ಹ್ಯಾಂಡ್ಸಮ್ ಎಂದು ಕಾಮೆಂಟ್ ಮಾಡಿದ್ದಾರೆ. ಆತನಿಗೆ ರೋಜಾ ಹೂವನ್ನು ನೀಡುವ ಪೊಟೋಗಳನ್ನು ಸಹ ಆಕೆ ತನ್ನ ಇನ್ಸ್ಟಾ ಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಆದರೆ ಇದು ನಿಜವಲ್ಲ, ಅಂದರೇ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಅದಿತಿ ತಾನು ಅಭಿಮಾನಿಸುವ ಹಿರೋ ಮೇಲೆ ಈ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಸಿದ್ದಾರ್ಥ್ ರನ್ನು ಬಿಟ್ಟು, ಸೀನಿಯರ್‍ ನಟನಿಗೆ ಲವ್ ಪ್ರಪೋಸ್ ಮಾಡಿದ ಕಾರಣದಿಂದ ಹಾಟ್ ಟಾಪಿಕ್ ಆಗಿದೆ. ಇನ್ನೂ ನೆಟ್ಟಿಗರೂ ಸೇರಿದಂತೆ ಅನೇಕರು ವಿವಿಧ ರೀತಿಯ ಅರ್ಥಗಳನ್ನು ಕಲ್ಪಿಸಿಕೊಂಡು ಕಾಮೆಂಟ್ ಗಳನ್ನು ಸಹ ಮಾಡುತ್ತಿದ್ದಾರೆ. ಲವರ್ಸ್ ಡೇ ದಿನದಂದು ಪ್ರಿಯಕರನಿಗೆ ಅದಿತಿ ಹಾಂಡ್ ಕೊಟ್ಟಿದ್ದಾರೆ ಎಂಬೆಲ್ಲಾ ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಈ ಪೋಸ್ಟ್ ಗೆ ಸಿದ್ದಾರ್ಥ್ ಸಹ ರಿಪ್ಲೆ ಕೊಟ್ಟಿರುವುದು ವಿಶೇಷ ಎಂದೇ ಹೇಳಬಹುದಾಗಿದೆ. ಇನ್ನೂ ಸಿದ್ದಾರ್ಥ್ ಸಹ ಈ ಪೋಸ್ಟ್ ಗೆ ಲವ್ ಎಮೋಜಿಗಳನ್ನು ಹಂಚಿಕೊಂಡಿದ್ದಾರೆ.

ಇನ್ನೂ ಅದಿತಿ ಮಾಡಿದ ಈ ಪೋಸ್ಟ್ ಕುರಿತು ಸಿದ್ದಾರ್ಥ್ ಸಾಮಾನ್ಯವಾಗಿ ಸ್ವೀಕರಿಸಿದ್ದಾರೆ. ಆದರೆ ಪ್ರೇಮಿಕರ ದಿನದಂದು ಸಿದ್ದಾರ್ಥ್ ಬದಲಿಗೆ ಮತ್ತೋರ್ವ ನಟನಿಗೆ ರೋಜಾ ಕೊಟ್ಟಿರುವುದು ಅನೇಕರನ್ನು ಆಶ್ಚರ್ಯಪಡಿಸಿದೆ. ಇನ್ನೂ ಅದಿತಿಗೆ ಈಗಾಗಲೇ ಮದುವೆಯಾಗಿದ್ದು, ವಿಚ್ಚೇದನ ಪಡೆದುಕೊಂಡಿದ್ದಾರೆ. ಇದೀಗ ಸಿದ್ದಾರ್ಥ್ ಹಾಗೂ ಅದಿತಿ ಡೇಟಿಂಗ್ ನಡೆಸುತ್ತಿದ್ದಾರೆ.

Most Popular

To Top