ಮಿಲ್ಕಿ ಬ್ಯೂಟಿ ತಮನ್ನಾಗೆ ಮತ್ತೊಂದು ಬಿರುದು ಕೊಟ್ಟ ಪ್ರಿಯಕರ, ಮಿಲ್ಕಿ ಬ್ಯೂಟಿ ತಮನ್ನಾ ಟಮೋಟಾ ಅಂತೆ…!

ಸೌತ್ ಸಿನಿರಂಗದಲ್ಲಿ ತಮನ್ನಾ ಎಂದರೇ ಅನೇಕ ಯುವಕರ ಕ್ರಷ್ ಎಂದೇ ಕರೆಯಲಾಗುತ್ತದೆ. ಗ್ಲಾಮರಸ್ ಡ್ಯಾನ್ಸ್ ಗೆ ಸಂಬಂಧಿಸಿದಂತೆ ಯುವಕರಲ್ಲಿ ತಮನ್ನಾ ತಂದುಕೊಂಡಷ್ಟು ಕ್ರೇಜ್ ಬೇರೆ ಯಾವುದೇ ನಟಿ ಪಡೆದುಕೊಳ್ಳಲಿಲ್ಲ ಎನ್ನಬಹುದಾಗಿದೆ. ಆಕೆಗೆ ಮುದ್ದಾಗಿ ಅಭಿಮಾನಿಗಳು…

ಸೌತ್ ಸಿನಿರಂಗದಲ್ಲಿ ತಮನ್ನಾ ಎಂದರೇ ಅನೇಕ ಯುವಕರ ಕ್ರಷ್ ಎಂದೇ ಕರೆಯಲಾಗುತ್ತದೆ. ಗ್ಲಾಮರಸ್ ಡ್ಯಾನ್ಸ್ ಗೆ ಸಂಬಂಧಿಸಿದಂತೆ ಯುವಕರಲ್ಲಿ ತಮನ್ನಾ ತಂದುಕೊಂಡಷ್ಟು ಕ್ರೇಜ್ ಬೇರೆ ಯಾವುದೇ ನಟಿ ಪಡೆದುಕೊಳ್ಳಲಿಲ್ಲ ಎನ್ನಬಹುದಾಗಿದೆ. ಆಕೆಗೆ ಮುದ್ದಾಗಿ ಅಭಿಮಾನಿಗಳು ಮಿಲ್ಕಿ ಬ್ಯೂಟಿ ಎಂತಲೇ ಕರೆಯುತ್ತಾರೆ. ಈ ಹಿಂದೆ ತಮನ್ನಾ ಯಾವುದೇ ವೈಯುಕ್ತಿಕ ವಿಚಾರಗಳಿಂದ ಸುದ್ದಿಯಾಗಿರಲಿಲ್ಲ. ಆದರೆ ಇದೀಗ ಆಕೆ ಪ್ರೀತಿಯಲ್ಲಿದ್ದಾರೆ, ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿದೆ. ಇದೀಗ ತಮನ್ನಾ ಗೆ ತನ್ನ ಪ್ರಿಯಕರ ವಿಜಯ್ ಹೊಸ ಬಿರುದನ್ನು ಕೊಟ್ಟಿದ್ದಾರೆ.

ಸಿನಿರಂಗದಲ್ಲಿ ಅನೇಕ ನಟಿಯರು ನಟನಾ ಕೌಶಲ್ಯದಿಂದ ದೊಡ್ಡ ಮಟ್ಟದ ಖ್ಯಾತಿ ಪಡೆದುಕೊಂಡಿದ್ದರೇ, ನಟಿ ತಮನ್ನಾ ಮಾತ್ರ ದಶಕಗಳ ಕಾಲದಿಂದ ಗ್ಲಾಮರಸ್ ಡ್ಯಾನ್ಸ್ ಮೂಲಕವೇ ಯುವಕರಲ್ಲಿ ಕ್ರೇಜ್ ಸಂಪಾದಿಸಿಕೊಂಡಿದ್ದಾರೆ. ಇನ್ನೂ ನಟಿ ತಮನ್ನಾ ಹೊಸ ವರ್ಷವನ್ನು ಗೋವಾದಲ್ಲಿ ಆಚರಿಸಿಕೊಂಡರು. ಪಾರ್ಟಿಯಲ್ಲಿ ತಮನ್ನಾ ಒಬ್ಬ ವ್ಯಕ್ತಿಯನ್ನು ತಬ್ಬಿಕೊಂಡು ಮುತ್ತಿಟ್ಟಿರುವ ಪೊಟೋ ಒಂದು ವೈರಲ್ ಆಗಿದೆ. ಆಕೆ ರೂಮರ್‍ ಬಾಯ್ ಫ್ರೆಂಡ್ ಬಾಲಿವುಡ್ ನಟ ವಿಜಯ್ ವರ್ಮಾ ಜೊತೆಗೆ ಹಗ್ ಮಾಡಿಕೊಳ್ಳುತ್ತಾ ಎಂಜಾಯ್ ಮಾಡಿದ್ದರು. ಈ ಸಂಬಂಧ ವಿಡಿಯೋ ಒಂದು ಹೊರಬಂದಿದ್ದು, ಅವರಿಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ರೂಮರ್‍ ಶುರುವಾಯಿತು. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಸಿನಿವಲಯದಲ್ಲಿ ಜೋರಾಗಿ ಕೇಳಿಬಂತು. ಜೊತೆಗೆ ಕೆಲವೊಂದು ಕಾರ್ಯಕ್ರಮಗಳಲ್ಲೂ ಸಹ ಈ ಜೋಡಿ ಕಾಣಿಸಿಕೊಂಡಿದ್ದು, ಈ ರೂಮರ್‍ ಗಳಿಗೆ ಮತಷ್ಟು ಬಲ ಬಂತಂತಾಗಿದೆ.

ಇನ್ನೂ ತಮನ್ನಾ ರವರಿಗೆ ತಮ್ಮ ಅಭಿಮಾನಿಗಳು ಮುದ್ದಾಗಿ ಮಿಲ್ಕಿ ಬ್ಯೂಟಿ ಎಂದು ಕರೆಯುತ್ತಾರೆ. ಇದೀಗ ತಮನ್ನಾ ರೂಮರ್‍ ಭಾಯ್ ಪ್ರೆಂಡ್ ಆಕೆಯ ಮುದ್ದಿನ ಹೆಸರನ್ನೇ ಬದಲಿಸಿದ್ದಾರೆ. ಎಲ್ಲರಂತೆ ತಾನೂ ಸಹ ಕರೆದರೇ ಏನು ಚೆನ್ನಾಗಿರುತ್ತದೆ ಸ್ಪೇಷಲ್ ಆಗಿ ಕರೆಯಬೇಕೆಂಬ ಉದ್ದೇಶದಿಂದಲೋ ಏನೋ ವಿಜಯ್ ವರ್ಮಾ ತಮನ್ನಾ ಗೆ ಹೊಸ ಹೆಸರನ್ನು ಇಟ್ಟಿದ್ದಾರೆ. ತಮನ್ನಾ ರವರನ್ನು ಹೋಲಿಕೆ ಮಾಡಲು ಬೇರೆಯಾವುದೇ ಹಣ್ಣುಗಳು ಸಿಗಲಿಲ್ಲ ವೆಂದು ಆಕೆಗೆ ಟಮೋಟರ್‍ ಎಂದು ಮುದ್ದಾಗಿ ಕರೆದಿದ್ದಾರೆ ವಿಜಯ್. ಇನ್ನೂ ವಿಜಯ್ ವರ್ಮಾ ಹಾಗೂ ಸೋನಾಕ್ಷಿ ಸಿನ್ಹಾ ಕಾಂಬಿನೇಷನ್ ನಲ್ಲಿ ಮೂಡಿಬಂದ ದಾಹಾಡ್ ಎಂಬ ವೆಬ್ ಸಿರೀಸ್ ಬೆರ್ಲಿನ್ ನಲ್ಲಿ ನಡೆದ ಇಂಟರ್‍ ನ್ಯಾಷನಲ್ ಫಿಲಂ ಫೆಸ್ಟಿವಲ್ ನಲ್ಲಿ ಪ್ರದರ್ಶನ ಮಾಡಿದ್ದರು. ಈ ವೇಳೆ ಸೋನಾಕ್ಷಿ, ವಿಜಯ್ ಕೆಲವೊಂದು ಪೊಟೋಗಳಿಗೆ ಪೋಸ್ ಕೊಟ್ಟಿದ್ದರು. ಈ ಪೊಟೋಗಳಿಗೆ ತಮನ್ನಾ ಸಹ ರಿಯಾಕ್ಟ್ ಆಗಿದ್ದು ಕಂಗ್ರಾಟ್ಸ್ ಟೀಂ ಎಂದು ಪೋಸ್ಟ್ ಮಾಡಿದ್ದರು.

ಇನ್ನೂ ವಿಜಯ್ ಸಹ ತಮನ್ನಾ ಪೋಸ್ಟ್ ಗೆ ರಿಯಾಕ್ಟ್ ಆಗಿದ್ದು, ಥ್ಯಾಂಕ್ಸ್ ಟಮೋಟರ್‍ ಎಂದು ಕಾಮೆಂಟ್ ಮಾಡಿ ಟಮೋಟ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ. ಇನ್ನೂ ಈ ಪೊಸ್ಟ್ ಸಖತ್ ವೈರಲ್ ಆಗುತ್ತಿದ್ದು. ತಮನ್ನಾಗೆ ಮುದ್ದಿನ ಹೆಸರು ಇಡಲು ಬೇರೆ ಯಾವುದೇ ಹಣ್ಣು ದೊರೆಯಲಿಲ್ಲವೇ  ಎಂದು ಕಾಮೆಂಟ್ ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇನ್ನೂ ಈ ಜೋಡಿ ಯಾವಾಗ ತಮ್ಮ ಪ್ರೀತಿಯ ಬಗ್ಗೆ ಅಧಿಕೃತವಾಗಿ ಘೋಷಿಸಿ ಮದುವೆಯಾಗುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.