Film News

ಕ್ಯಾನ್ಸರ್ ಜಯಿಸಿ ಮೊದಲಿನಂತೆ ಹಾಟ್ ಆಗಿ ಪೋಸ್ ಕೊಟ್ಟ ಹಂಸನಂದಿನಿ, ಬೀಚ್ ನಲ್ಲಿ ಹಾಟ್ ಅವತಾರದಲ್ಲಿ ಕಾಣಿಸಿಕೊಂಡ ನಟಿ…!

ಸಿನಿರಂಗದಲ್ಲಿ ಎಲ್ಲರನ್ನೂ ರಂಜಿಸುವಂತಹ ಕಲಾವಿದರು ಅನೇಕ ಆರೋಗ್ಯ ಸಮಸ್ಯೆಗಳಿಗೆ ಗುರಿಯಾಗುತ್ತಿರುತ್ತಾರೆ. ಅನೇಕ ಸಿನೆಮಾಗಳಲ್ಲಿ ಸ್ಪೇಷಲ್ ಸಾಂಗ್ಸ್ ಗಳಲ್ಲಿ ಹೆಜ್ಜೆ ಹಾಕಿದಂತಹ ಹಂಸ ನಂದಿನಿ ನೆನಪಿನಲ್ಲಿರುತ್ತಾರೆ. ಅನೇಕ ಸಿನೆಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದಂತಹ ಹಂಸನಂದಿನಿ ಕಳೆದ 2021 ರಲ್ಲಿ ಕ್ಯಾನ್ಸರ್‍ ವ್ಯಾದಿಗೆ ಗುರಿಯಾಗಿದ್ದರು. ಇದೀಗ ಕ್ಯಾನ್ಸರ್‍ ಎಂಬ ಯುದ್ದದಲ್ಲಿ ಜಯಗಳಿಸಿ, ಮೊದಲಿನಂತೆ ಆರೋಗ್ಯಕರವಾಗಿದ್ದಾರೆ. ಇದೀಗ ಆಕೆ ಬೀಚ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದು, ಪೊಟೋ ವೈರಲ್ ಆಗುತ್ತಿದೆ.

ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡ ನಟಿ ಹಂಸನಂದಿನಿ ಕಳೆದ 2021 ರಲ್ಲಿ ಕ್ಯಾನ್ಸರ್‍ ಗೆ ತುತ್ತಾಗಿದ್ದರು. ಬಳಿಕ 2022 ರಲ್ಲಿ ಗುಣಮುಖರಾದರು. ಕ್ಯಾನ್ಸರ್‍ ನಿಂದ ಪಾರಾದ ಈಕೆ ಕೂದಲಿಲ್ಲದೇ ಬೋಳಾಗಿ ಕಾಣಿಸಿಕೊಂಡಿದ್ದರು. ಸುಮಾರು ದಿನಗಳ ಕಾಲ ಇದೇ ಕಾರಣದಿಂದಲೇ ಆಕೆ ಗ್ಲಾಮರ್‍ ಲುಕ್ಸ್ ನಿಂದಲೂ ದೂರ ಉಳಿದಿದ್ದರು. ಇದೀಗ ಹಂಸ ನಂದಿನಿ ಪುಲ್ ಜೋಷ್ ಗೆ ಬಂದಿದ್ದಾರೆ. ಮೊದಲಿನಂತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಮೊದಲಿನಂತೆ ತಲೆ ತುಂಬಾ ಕೂದಲು ಬಂದಿದೆ. ಈ ಸಂಬಂಧ ವಿಡಿಯೋ ಒಂದನ್ನು ಸಹ ಹಂಸ ನಂದಿನಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ವರ್ಷ ಕೂದಲು ಇಲ್ಲದೇ, ವರ್ಷದ ಬಳಿಕ ಕೂದಲು ಬಂದಿದ್ದು, ಹೇಗೆ ಕಾಣಿಸುತ್ತಿದ್ದೀನಿ ಎಂಬುದನ್ನು ತಿಳಿಸಿವಂತೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಸ ನಂದಿನಿ ವಿಡಿಯೋ ಒಂದನ್ನು ಶೇರ್‍ ಮಾಡಿದ್ದಾರೆ. ಮೊದಲಿನಂತೆ ಸಂಪೂರ್ಣವಾಗಿ ಬದಲಾದ ಈಕೆ ಸಿನೆಮಾಗಳಲ್ಲೂ ನಟಿಸಲು ಸೈ ಎನ್ನುತ್ತಿದ್ದಾರೆ. ಬೀಚ್ ನಲ್ಲಿ ಎಂಜಾಯ್ ಮಾಡುತ್ತಾ ಲೇಟೆಸ್ಟ್ ಗ್ಲಾಮರ್‍ ಲುಕ್ಸ್ ಸಹ ಹಂಚಿಕೊಂಡಿದ್ದಾರೆ. ಸದ್ಯ ನಾನು ತುಂಬಾ ಚೆನ್ನಾಗಿ ಇದ್ದೀನಿ ಎಂದು ಸಹ ಕ್ಯಾಪ್ಷನ್ ಹಾಕಿದ್ದಾರೆ. ಇನ್ನೂ ಹಂಸ ನಂದಿನಿ ಹೊಸ ಗ್ಲಾಮರ್‍ ಲುಕ್ಸ್ ನೋಡಿದ ಅಭಿಮಾನಿಗಳೂ ಸಹ ಖುಷಿಯಾಗಿದ್ದಾರೆ. ಸಂಪೂರ್ಣವಾಗಿ ಮೊದಲಿನಂತೆ ಕಾಣಿಸಿಕೊಂಡ ಹಂಸ ನಂದಿನಿ ರಿಯಲ್ ಫೈಟರ್‍, ಹಾಟ್ ಡಾಲ್ ಎಂಬೆಲ್ಲಾ ಕಾಮೆಂಟ್ ಗಳ ಜೊತೆಗೆ ಫೈರಿಂಗ್ ಎಮೋಜಿಗಳನ್ನು ಸಹ ಹಂಚಿಕೊಳ್ಳುತ್ತಾ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ಇನ್ನೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಮತ್ತೆ ಸಿನೆಮಾಗಳಲ್ಲಿ ಕಮ್ ಬ್ಯಾಕ್ ಮಾಡಬೇಕೆಂದು ಆಕೆಯ ಅಭಿಮಾನಿಗಳೂ ಸಹ ಕೋರುತ್ತಿದ್ದಾರೆ. ಇನ್ನೂ ಹಂಸನಂದಿನಿ, ಮಿರ್ಚಿ, ಲೌಕ್ಯಂ, ಲೆಜೆಂಡ್, ಅತ್ತಾರಿಂಟಿಕಿ ದಾರೆದಿ ಮೊದಲಾದ ಸಿನೆಮಾಗಳಲ್ಲಿ ಸ್ಪೇಷಲ್ ಹಾಡುಗಳಲ್ಲೂ ಸಹ ಸ್ಟೇಪ್ಸ್ ಹಾಕಿದ್ದರು. ಜೊತೆಗೆ ಕೆಲವೊಂದು ಸಿನೆಮಾಗಳಲ್ಲೂ ಸಹ ಆಕೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಇದೀಗ ಮತ್ತೆ ಆಕೆ ಸಿನೆಮಾಗಳಲ್ಲಿ ಯಾವ ರೀತಿಯಲ್ಲಿ ರೀ ಎಂಟ್ರಿ ಕೊಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top