Film News

ಅಂತೂ ಇಂತೂ ಮಂಚು ಮನೋಜ್- ಭೂಮಾ ಮೌನಿಕಾರೆಡ್ಡಿ ಮದುವೆ ಡೇಟ್ ಫಿಕ್ಸ್ ಆಯ್ತತಂತೆ?

ಸುಮಾರು ದಿನಗಳಿಂದ ಮಂಚು ಮನೋಜ್ ಹಾಗೂ ಭೂಮಾ ಮೌನಿಕಾರೆಡ್ಡಿ ಮದುವೆಯಾಗಲಿದ್ದಾರೆ, ಇಬ್ಬರೂ ಈಗಾಗಲೇ ಒಂದೇ ಮನೆಯಲ್ಲಿ ವಾಸವಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಕಳೆದ ಗಣೇಶ ಚರ್ತುಥಿಯಂದು ಇಬ್ಬರೂ ಜಂಟಿಯಾಗಿ ಗಣೇಶನ ಉತ್ಸವದಲ್ಲಿ ಭಾಗಿಯಾಗಿದ್ದು ಅವರ ಅಫೈರ್‍ ರೂಮರ್‍ ಗೆ ಮತಷ್ಟು ಬಲ ಬಂದಿತ್ತು. ಇದೀಗ ಈ ಜೋಡಿಯ ಮದುವೆ ದಿನಾಂಕ ಫಿಕ್ಸ್ ಆಗಿದೆಯಂತೆ. ಶೀಘ್ರದಲ್ಲೇ ಅವರ ಮದುವೆ ಸಮಾರಂಭ ನಡೆಯಲಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ.

ನಟ ಮಂಚು ಮನೋಜ್ ಕಳೆದೆರಡು ವರ್ಷಗಳ ಹಿಂದೆಯಷ್ಟೆ ಪ್ರಣತಿ ಯೊಂದಿಗೆ ವಿಚ್ಚೇದನ ಪಡೆದುಕೊಂಡರು. ಕಳೆದ 2019 ರಲ್ಲಿ ವಿಚ್ಚೇದನ ಪಡೆದುಕೊಂಡ ಮನೋಜ್ ಮೂರು ವರ್ಷಗಳಿಂದ ಸಿಂಗಲ್ ಆಗಿಯೇ ಇದ್ದಾರೆ. ರಾಜಕಾರಣಿ ಭೂಮಾ ನಾಗಿರೆಡ್ಡಿ ಎಂಬುವವರ ಎರಡನೇ ಪುತ್ರಿ ಭೂಮಾ ಮೌನಿಕ ರೆಡ್ಡಿ ಯವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಲೇ ಇದೆ. ಇನ್ನೂ ಈ ಬಗ್ಗೆ ಸುಮಾರು ದಿನಗಳಿಂದ ರೂಮರ್‍ ಗಳು ಹರಿದಾಡುತ್ತಿದ್ದರೂ ಸಹ ಈ ಬಗ್ಗೆ ಮಂಚು ಕುಟುಂಬ ಯಾವುದೇ ರೀತಿಯ ರಿಯಾಕ್ಷನ್ ನೀಡಲಿಲ್ಲ. ಅನೇಕ ಬಾರಿ ಮಂಚು ಲಕ್ಷ್ಮೀ ಸಹ ಈ ಬಗ್ಗೆ ಆಕ್ರೋಷಗೊಂಡಿದ್ದರು. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ. ಅದು ಏನೆಂದರೇ ಶೀಘ್ರದಲ್ಲೇ ಮನೋಜ್ ಹಾಗೂ ಮೌನಿಕಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಬರುಗಾಳಿಯಂತೆ ಹರಿದಾಡುತ್ತಿದೆ.

ಸದ್ಯ ಮನೋಜ್ ಹಾಗೂ ಭೂಮಾ ಮೌನಿಕಾ ರೆಡ್ಡಿ ಮದುವೆಗೆ ರೆಡಿಯಾಗಿದ್ದಾರಂತೆ. ಸುಮಾರು ದಿನಗಳಿಂದ ರಿಲೇಷನ್ ಶಿಪ್ ನಲ್ಲಿದ್ದಾರಂತೆ ಈ ಜೋಡಿ. ಕಳೆದ ವರ್ಷದ ಗಣೇಶ ಉತ್ಸವದಲ್ಲಿ ಈ ಜೋಡಿ ಪೂಜಾ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಅಲ್ಲಿಂದಲೇ ಅವರ ಬಗ್ಗೆ ವಿವಿಧ ರೀತಿಯ ರೂಮರ್‍ ಗಳು ಹುಟ್ಟಿಕೊಂಡವು. ಇನ್ನೂ ಈ ಬಗ್ಗೆ ಅಧಿಕೃತವಾಗಿ ಸುದ್ದಿ ಮಾತ್ರ ಹೊರಬಂದಿಲ್ಲ. ಇದೀಗ ಮತ್ತೊಂದು ಸುದ್ದಿ ಸಹ ಹರಿದಾಡುತ್ತಿದೆ. ಮುಂದಿನ ತಿಂಗಳ ಮಾರ್ಚ್ 3 ರಂದು ಮನೋಜ್ ಹಾಗೂ ಭೂಮಾ ಮೌನಿಕಾ ಮದುವೆ ನಡೆಯಲಿದೆಯಂತೆ. ಇನ್ನೂ ಈಗಾಗಲೇ  ಮದುವೆಗೆ ಸಂಬಂಧಿಸಿದ ಕೆಲಸ ಕಾರ್ಯಗಳೂ ಸಹ ಭರದಿಂದ ಸಾಗುತ್ತಿವೆಯಂತೆ. ಇನ್ನೂ ಮಂಚು ಲಕ್ಷ್ಮೀ ಯವರೇ ಹತ್ತಿರದಿಂದ ಮದುವೆ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದಾರಂತೆ.

ಈಗಾಗಲೇ ಇಬ್ಬರೂ ಒಂದೇ ಮನೆಯಲ್ಲಿ ಸಹ ಜೀವನ ಸಹ ನಡೆಸುತ್ತಿದ್ದಾರಂತೆ. ಇದೀಗ ಅಧಿಕೃತವಾಗಿ ಮದುವೆಯಾಗಿ ಹೈದರಾಬಾದ್ ನಲ್ಲೇ ಜೀವನ ಸಾಗಿಸಲಿದ್ದಾರೆ ಎಂದೂ ಸಹ ಹೇಳಲಾಗುತ್ತಿದೆ. ಇನ್ನೂ ನಟನಾಗಿ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ವಿಫಲರಾದ ಮನೋಜ್ ಸಾರ್ವಜನಿಕವಾಗಿ ಒಳ್ಳೆಯ ವ್ಯಕ್ತಿ ಎಂಬ ಪ್ರಶಂಸೆಗೂ ಸಹ ಪಾತ್ರರಾಗಿದ್ದಾರೆ. ಇನ್ನೂ ಮನೋಜ್ ವಾಟ್ ದಿ ಫಿಷ್ ಎಂಬ ಸಿನೆಮಾದ ಮೂಲಕ ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದಾರೆ.

Most Popular

To Top