Film News

ಮತ್ತೊಮ್ಮೆ ಸಿಕ್ಕಿಬಿದ್ದ ವಿಜಯ್ ದೇವರಕೊಂಡ ಅಂಡ್ ರಷ್ಮಿಕಾ ಮಂದಣ್ಣ, ವೈರಲ್ ಆದ ಪೊಟೋಸ್…..!

ಸುಮಾರು ದಿನಗಳಿಂದ ಟಾಲಿವುಡ್ ರೌಡಿ ಹಿರೋ ವಿಜಯ್ ದೇವರಕೊಂಡ ಹಾಗೂ ನ್ಯಾಷನಲ್ ಕ್ರಷ್ ರಷ್ಮಿಕಾ ಮಂದಣ್ಣ ನಡುವೆ ಅಫೈರ್‍ ನಡೆಯುತ್ತಿದೆ. ಇಬ್ಬರೂ ಡೇಟಿಂಗ್ ನಲ್ಲಿದ್ದಾರೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಲೇ ಇದೆ. ಜೊತೆಗೆ ಅವರು ಆಗಾಗ ವೆಕೇಷನ್ ಗಳಲ್ಲಿ ಪಾರ್ಟಿಗಳಲ್ಲಿ ಕ್ಯಾಮೆರಾಗಳಿಗೆ ಸಿಕ್ಕಿ ಬೀಳುತ್ತಿರುತ್ತಾರೆ. ಇದೀಗ ಮತ್ತೊಮ್ಮೆ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದು, ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಕನ್ನಡದಿಂದ ತೆಲುಗು ಸಿನಿರಂಗಕ್ಕೆ ಹಾರಿದ ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗೆ ಕೆಲವೊಂದು ಸಿನೆಮಾಗಳಲ್ಲಿ ನಟಿಸಿದ್ದಾರೆ. ಈ ಸಿನೆಮಾಗಳ ಸಮಯದಲ್ಲೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಜೊತೆಗೆ ಲವ್ ಹುಟ್ಟಿಕೊಂಡಿದೆ ಎನ್ನಲಾಗಿದೆ. ಅನೇಕ ಬಾರಿ ಅವರು ಜಂಟಿಯಾಗಿ ಸಹ ಕಂಡುಬಂದಿದ್ದು, ಅವರ ಬಗ್ಗೆ ರೂಮರ್‍ ಗಳು ಮತಷ್ಟು ಜೋರಾಗಿದೆ. ಇದೀಗ ಒಂದು ಕೆಫೆಯಲ್ಲಿ ಕಾಣಿಸಿಕೊಂಡಿದ್ದು, ಚರ್ಚನೀಯ ಅಂಶವಾಗಿದೆ. ಈ ಪೊಟೋ ಕಾರಣದಿಂದ ಇಬ್ಬರೂ ಡೇಟಿಂಗ್ ನಲ್ಲಿದ್ದಾರೆಯೇ ಎಂಬ ಚರ್ಚೆ ಮತ್ತೊಮ್ಮೆ ಕೇಳಿಬರುತ್ತಿದೆ. ಇನ್ನೂ ಈ ಕೆಫೆ ನಲ್ಲಿ ನಿರ್ದೇಶಕ ಗೌತಮ್ ತಿನ್ನಸೂರಿ, ಆನಂದ್ ದೇವರಕೊಂಡ ಹಾಗೂ ಪೆರಿಯಾ ವರ್ಮಾ ಸಹ ಇದ್ದಾರೆ. ಇನ್ನೂ ರಷ್ಮಿಕಾ ವಿಜಯ್ ದೇವರಕೊಂಡ ತಮ್ಮ ಆನಂದ್ ದೇವರಕೊಂಡ ಜೊತೆಗೆ ಫ್ರೆಂಡ್ಲಿಯಾಗಿಯೇ ಇದ್ದಾರೆ. ಆತನ ಪ್ರತಿಯೊಂದು ಸಿನೆಮಾವನ್ನು ಸಹ ಪ್ರಮೋಟ್ ಮಾಡುತ್ತಿರುತ್ತಾರೆ.

ಇನ್ನೂ ವಿಜಯ್ ದೇವರಕೊಮಡ ಹಾಗೂ ರಶ್ಮಿಕಾ ಮಂದಣ್ಣ ಅನೇಕ ಬಾರಿ ಜೊತೆಗೆ ಕಾಣಿಸಿಕೊಂಡಿದ್ದಾರೆ. ಮುಂಬೈನಲ್ಲಿ ಅನೇಕ ಬಾರಿ ಡಿನ್ನರ್‍ ಡೇಟ್ ಗೆ ಸಹ ಹೋಗಿದ್ದರು. ಬಳಿಕ ಹೊಸ ವರ್ಷದ ಸಂಭ್ರಮದಲ್ಲೂ ಸಹ ಮಾಲ್ಡೀವ್ಸ್ ನಲ್ಲಿ ಎಂಜಾಯ್ ಮಾಡಿದ್ದರು. ಆದರೆ ಇಬ್ಬರೂ ಬೇರೆ ಬೇರೆ ಪೊಟೋಗಳನ್ನು ಶೇರ್‍ ಮಾಡಿದ್ದರು. ಆದರೆ ಎರಡೂ ಲೊಕೇಷನ್ ಗಳೂ ಒಂದೇ ಆಗಿತ್ತು. ಜೊತೆಗೆ ಕೆಲವು ತಿಂಗಳುಗಳ ಹಿಂದೆಯಷ್ಟೆ ವಿಜಯ್ ದೇವರಕೊಂಡ ಕುಟುಂಬದ ಜೊತೆಗೂ ಸಹ ರಶ್ಮಿಕಾ ಪಾರ್ಟಿ ಮಾಡಿಕೊಂಡ ಪೊಟೋಗಳೂ ಸಹ ಹರಿದಾಡಿದ್ದವು. ಈ ಕಾರಣದಿಂದ ಅವರಿಬ್ಬರೂ ಮದುವೆಯಾಗುವುದ ಪಕ್ಕಾ ಎಂದು ಎಲ್ಲರೂ ನಂಬಿದ್ದರು. ಇದೀಗ ಮತ್ತೊಮ್ಮೆ ಈ ಜೋಡಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮತ್ತೊಮ್ಮೆ ಅವರ ಬಗೆಗಿನ ರೂಮರ್‍ ಜೋರಾಗಿದೆ.

ಇನ್ನೂ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸಹ ಅನೇಕ ಬಾರಿ ಈ ಬಗ್ಗೆ ಕೇಳಿದಾಗ ನಾವಿಬ್ಬರೂ ಒಳ್ಳೆಯ ಸ್ನೇಹಿತರು ಮಾತ್ರ ಎಂದು ಹೇಳಿಕೆ ನೀಡಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಸಹ ಮೊದಲಿಗೆ ನಾವಿಬ್ಬರು ಒಲ್ಳೆಯ ಸ್ನೇಹಿತರು ಎಂದು ಹೇಳಿ ಕೆಲವು ದಿನಗಳ ಹಿಂದೆಯಷ್ಟೆ ಎಂಗೇಜ್ ಮೆಂಟ್ ಮಾಡಿಕೊಂಡರು ಇದೀಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಸಹ ಅದೇ ರೀತಿ ಮದುವೆಯಾಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Most Popular

To Top