Film News

ಶೀಘ್ರದಲ್ಲೇ ಕಾಂತಾರ-2 ಅಬ್ಬರ ಶುರು, ಶೂಟಿಂಗ್ ಗಾಗಿ ಪ್ರತ್ಯೇಕ ಶಿಕ್ಷಣ ಪಡೆಯುತ್ತಿದ್ದಾರಂತೆ ರಿಷಭ್ ಶೆಟ್ಟಿ…..!

ಕನ್ನಡದ ಸಿನೆಮಾ ಕಾಂತಾರ ಬಿಡುಗಡೆಯಾದ ಕಲವೇ ದಿನಗಳಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದೆ. ಇಡೀ ದೇಶದಾದ್ಯಂತ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಸಹ ಭರ್ಜರಿಯಾಗಿ ಕಲೆಕ್ಷನ್ ಮಾಡಿದೆ. ಇನ್ನೂ ಸಿನಿರಂಗದ ಅನೇಕ ಸ್ಟಾರ್‍ ಗಳು ಈ ಸಿನೆಮಾ ನೋಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಹಾದಿಯಲ್ಲೇ ಕಾಲಿವುಡ್ ಸೂಪರ್‍ ಸ್ಟಾರ್‍ ರಜನಿಕಾಂತ್ ಸಹ ಕಾಂತಾರ ಸಿನೆಮಾ ನೋಡಿ ಫೀದಾ ಆಗಿದ್ದು, ರಿಷಭ್ ರನ್ನು ಮನೆಗೆ ಕರೆಸಿಕೊಂಡು ಮನಸಾರೆ ಪ್ರಶಂಸೆ ಮಾಡಿದ್ದರು. ಇದೀಗ ಕಾಂತಾರ-2 ಸಹ ಶೀಘ್ರದಲ್ಲೇ ಸೆಟ್ಟೇರಲಿದೆ. ಇದಕ್ಕಾಗಿ ರಿಷಭ್ ಶೆಟ್ಟಿ ಸಹ ಪ್ರತ್ಯೇಕ ಶಿಕ್ಷಣವನ್ನು ಸಹ ಪಡೆದುಕೊಳ್ಳುತ್ತಿದ್ದಾರಂತೆ.

ಸ್ಯಾಂಡಲ್ ವುಡ್ ನಲ್ಲಿ ಯಾವುದೇ ಆರ್ಭಟವಿಲ್ಲದೇ ತೆರೆಕಂಡ ಕಾಂತಾರ ಸಿನೆಮಾ ಸೆನ್ಷೇಷನ್ ಕ್ರಿಯೇಟ್ ಮಾಡಿತ್ತು. ಇಡೀ ದೇಶದಾದ್ಯಂತ ಪ್ರೇಕ್ಷಕರ ಮನಸ್ಸು ರಂಜಿಸಿದೆ.  ಮೊದಲಿಗೆ ಸಾಮಾನ್ಯ ಸಿನೆಮಾದಂತೆ ತೆರೆಕಂಡ ಕಾಂತಾರ ಬಳಿಕ ಪ್ಯಾನ್ ಇಂಡಿಯಾ ಸಿನೆಮಾ ರೇಂಜ್ ನಲ್ಲಿ ಯಶಸ್ವಿಯಾಗಿ ಪ್ರದರ್ಶನವಾಗಿತ್ತು. ದಕ್ಷಿಣ ಕನ್ನಡದ ಸಂಸ್ಕೃತಿಯ ಭಾಗವಾದ ಭೂತಕೊಲ ಕಥೆಯನ್ನು ಆಧರಿಸಿ ಈ ಸಿನೆಮಾ ತೆರೆಕಂಡಿದ್ದು, ಅತ್ಯಂತ ಯಶಸ್ವಿಯಾಗಿತ್ತು. ಡಿವೋಷನಲ್ ಆಕ್ಷನ್ ಸಿನೆಮಾ ಆಗಿ ತೆರೆಗೆ ಬಂದ ಈ ಸಿನೆಮಾ ರಿಲೀಸ್ ಆದಂತಹ ಎಲ್ಲಾ ಭಾಷೆಗಳಲ್ಲೂ ಒಳ್ಳೆಯ ಕಲೆಕ್ಷನ್ ಸಹ ಮಾಡಿದೆ. ಮೂಲಗಳ ಪ್ರಕಾರ ಬರೊಬ್ಬರಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ.

ಇನ್ನೂ ಇದೀಗ ಸಿನೆಮಾದ ಎರಡನೆ ಭಾಗವನ್ನು ಸಹ ತೆರೆಗೆ ತರಲು ನಟ ಕಂ ನಿರ್ದೇಶಕ ರಿಷಭ್ ಶೆಟ್ಟಿ ಸಿದ್ದರಾಗಿದ್ದಾರೆ. ಕಾಂತಾರ ಸಿನೆಮಾಗೆ ಪ್ರೀಕ್ವೆಲ್ ಅನ್ನು ಇದೀಗ ತೆರೆಗೆ ತರಲು ರಿಷಭ್ ಎಲ್ಲಾ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಕಾಂತಾರ ಸಿನೆಮಾದ ಸೀಕ್ವೆಲ್ ಬದಲಿಗೆ ಪ್ರೀಕ್ವೆಲ್ ಅಂದರೇ ಕಾಂತಾರ ಸಿನೆಮಾದ ಹಿಂದೆ ನಡೆದ ಭಾಗವನ್ನು ಕಾಂತಾರ-2 ನಲ್ಲಿ ತೋರಿಸಲಾಗುತ್ತದೆಯಂತೆ. ಇನ್ನೂ ಈ ಸಿನೆಮಾ ಶೂಟಿಂಗ್ ಗೆ ಸಹ ಎಲ್ಲಾ ಸಿದ್ದತೆಗಳನ್ನು ಸಹ ಮಾಡಿಕೊಳ್ಳಲಾಗಿದೆಯಂತೆ. ಶೂಟಿಂಗ್ ಸಹ ಆಗಸ್ಟ್ 27 ರಿಂದ ಪ್ರಾರಂಭವಾಗಲಿದೆಯಂತೆ. ಇನ್ನೂ ಕಾಂತಾರ ಪ್ರೀಕ್ವೆಲ್ ಮೇಲೆ ರಿಷಬ್ ಅಂಡ್ ಟೀಂ ತುಂಬಾ ಆಸಕ್ತಿ ತೋರುತ್ತಿದ್ದಾರೆ. ಜೊತೆಗೆ ಈ ಬಾರಿ ಪ್ಯಾನ್ ಇಂಡಿಯಾ ಸಿನೆಮಾ ಆಗಿ ರಿಲೀಸ್ ಮಾಡಲು ಪ್ಲಾನ್ ಮಾಡಲಾಗಿದೆ. ಜೊತೆಗೆ ಭಾರಿ ಬಜೆಟ್ ನಲ್ಲಿ ಸಿನೆಮಾ ನಿರ್ಮಾಣವಾಗಲಿದೆಯಂತೆ. ಇದಕ್ಕಾಗಿ ರಿಷಭ್ ಜೊತೆಗೆ ಚಿತ್ರತಂಡ ಸಹ ಪ್ರತ್ಯೇಕವಾದ ಶಿಕ್ಷಣ ಸಹ ಪಡೆದುಕೊಳ್ಳುತ್ತಿದ್ದಾರಂತೆ. ಕುದುರೆ ಸವಾರಿ ಜೊತೆಗೆ ಯುದ್ದ ವಿದ್ಯೆಯಲ್ಲೂ ಸಹ ರಿಷಭ್ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇನ್ನೂ ಈ ಪ್ರೀಕ್ವೆಲ್ ನಲ್ಲಿ ಭೂತಕೋಲ, ಪಂಜುರ್ಲಿ ದೈವಾರಾಧನೆ ಆಚರಣೆ ನಡೆದು ಬಂದ ಹಾದಿ, ಸಂಸ್ಕೃತಿ ಮೊದಲಾದ ವಿಚಾರಗಳನ್ನು ಸಿನೆಮಾದ ಮೂಲಕ ತೊರಿಸಲಾಗುತ್ತದೆಯಂತೆ. ಮೊದಲ ಭಾಗಕ್ಕೆ ದೊರೆತ ಪ್ಯಾನ್ ಇಂಡಿಯಾ ಕ್ರೇಜ್ ಅನ್ನು ಪ್ರೀಕ್ವೆಲ್ ನಲ್ಲೂ ಸಹ ಪ್ರೇಕ್ಷಕರನ್ನು ರಂಜಿಸಲು ರಿಷಭ್ ಭಾರಿ ಪ್ಲಾನ್ ಗಳನ್ನು ಸಹ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

Most Popular

To Top