Film News

ಡ್ರಗ್ಸ್ ಕೇಸ್ ಗೂ ನನಗೂ ಯಾವುದೇ ಸಂಬಂಧವಿಲ್ಲ, ನನ್ನ ನಂಬರ್ ರಿವೀಲ್ ಮಾಡಿದ್ರೆ ಸುಮ್ಮನಿರಲ್ಲ ಎಂದ ಅಷುರೆಡ್ಡಿ…..!

ಇತ್ತೀಚಿಗಷ್ಟೆ ತೆಲುಗು ನಿರ್ಮಾಪಕ ಕೆ.ಪಿ.ಚೌದರಿ ಡ್ರಗ್ಸ್ ಕೇಸ್ ನಲ್ಲಿ ಸಿಲುಕೊಂಡಿದ್ದಾರೆ. ಅವರನ್ನು ವಿಚಾರಣೆ ನಡೆಸಿದಾಗ ಕೆಲವು ನಟಿಯರು, ಐಟಂ ಡ್ಯಾನ್ಸರ್‍ ಗಳೂ ಸೇರಿದಂತೆ ಅನೇಕರ ಹೆಸರುಗಳು ಹೊರಬರುತ್ತಿವೆ. ಅವರನ್ನು ವಿಚಾರಣೆ ನಡೆಸಿದಾಗ ಕೆಲವರ ನಂಬರ್‍ ಗಳೂ ಸಹ ಸಿಕ್ಕಿದೆ ಎಂದು ಹೇಳಲಾಗಿದೆ. ಇನ್ನೂ ಈ ಪ್ರಕರಣದಲ್ಲಿ ಯಂಗ್ ಬ್ಯೂಟಿ ಅಷುರೆಡ್ಡಿ ಹೆಸರು ಸಹ ಕೇಳಿಬಂದಿದ್ದು, ಇದೀಗ ಈ ಬಗ್ಗೆ ಅಷುರೆಡ್ಡಿ ರಿಯಾಕ್ಟ್ ಆಗಿದ್ದಾರೆ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ, ನನ್ನ ನಂಬರ್‍ ರಿವೀಲ್ ಮಾಡಿದರೇ ಸುಮ್ಮನೆ ಇರೊಲ್ಲ ಎಂದು ರಿಯಾಕ್ಟ್ ಆಗಿದ್ದಾರೆ.

ಕೆಲವು ವರ್ಷಗಳ ಹಿಂದೆ ಸಿನಿರಂಗದಲ್ಲಿ ಡ್ರಗ್ಸ್ ಕೇಸ್ ಜೋರಾಗಿಯೇ ಸದ್ದು ಮಾಡಿತ್ತು. ಈ ಪ್ರಕರಣದಲ್ಲಿ ಕೆಲವು ಟಾಪ್ ಸೆಲೆಬ್ರೆಟಿಗಳ ಹೆಸರುಗಳೂ ಸಹ ಕೇಳಿಬಂದವು. ಕೆಲ ಸೆಲಬ್ರೆಟಿಗಳು ಸಹ ಪೊಲೀಸ್ ವಿಚಾರಣೆಯನ್ನು ಎದುರಿಸಿದರು. ಇದೀಗ ಮತ್ತೊಮ್ಮೆ ಡ್ರಗ್ಸ್ ಸದ್ದು ಕೇಳಿಬರುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೆ ಸೈಬರಾಬಾದ್ ಪೊಲೀಸರು ನಿರ್ಮಾಪಕ ಕೆ.ಪಿ.ಚೌದರಿ ಬಳಿ ಕೊಕೈನ್ ಸಿಕ್ಕಿದ್ದು, ಅವರನ್ನು ಪೊಲೀಸರು ಆತನನ್ನು ಬಂಧಿಸಿದ್ದಾರೆ. ಕಬಾಲಿ ಸಿನೆಮಾದ ನಿರ್ಮಾಪಕನಾಗಿ ಫೇಂ ಪಡೆದುಕೊಂಡ ಕೆ.ಪಿ.ಚೌದರಿಯನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಕೊಂಡಿದ್ದು, ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಅವರ ಪೋನ್ ಕಾಲ್ ಲೀಸ್ಟ್, ಗೂಗಲ್ ಡ್ರೈವ್ ಆಧಾರವಾಗಿ ಅನೇಕ ವಿಚಾರಗಳು ಹೊರಬಂದಿದೆ. ಈ ವೇಳೆ ಸಿನಿ, ಟಿವಿ ರಂಗಕ್ಕೆ ಸೇರಿದ ಅನೇಕ ಸೆಲೆಬ್ರೆಟಿಗಳ ನಂಬರ್‍ ಗಳು ಇದೆ ಎಂದು ಹೇಳಲಾಗಿದೆ.

ಇನ್ನೂ ಈ ಲೀಸ್ಟ್ ನಲ್ಲಿ ಅಷುರೆಡ್ಡಿ, ಜ್ಯೋತಿ, ಸುರೇಖಾ ವಾಣಿ ಸೇರಿದಂತೆ ಅನೇಕರ ಹೆಸರುಗಳು ಕೇಳಿಬಂದಿದೆ. ಈ ವಿವಾದ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿವೆ. ಅದರಲ್ಲೂ ಅಷುರೆಡ್ಡಿ ಹೆಸರು ದೊಡ್ಡ ಮಟ್ಟದಲ್ಲೇ ಕೇಳಿಬರುತ್ತಿದೆ. ಇದರ ಜೊತೆಗೆ ಸುರೇಖವಾಣಿ, ಆಕೆಯ ಪುತ್ರಿ ಸುಪ್ರಿತಾ, ನಟಿ ಜ್ಯೋತಿ ರವರೊಂದಿಗೆ ಇರುವ ಕೆಪಿ ಚೌದರಿ ಜೊತೆಗೆ ಇರುವಂತಹ ಪೊಟೋಗಳೂ ಸಹ ವೈರಲ್ ಆಗುತ್ತಿವೆ. ಇನ್ನೂ ಅಷುರೆಡ್ಡಿ ಹೆಸರು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಆಕೆ ಈ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಆಕೆಯ ಹೆಸರು ಈ ಪ್ರಕರಣದಲ್ಲಿ ಕೇಳಿಬರುತ್ತಿರುವುದನ್ನು ಖಂಡಿಸಿದ್ದಾರೆ. ಅಂತಹ ವ್ಯಕ್ತಿಗಳಿಗೂ ತಮಗೂ ಯಾವುದೇ ಸಂಬಂಧವಿಲ್ಲ. ತನ್ನ ಹೆಸರನ್ನು ಈ ಪ್ರಕರಣದಲ್ಲಿದೆ ಎಂದು ಪ್ರಕಟಿಸುತ್ತಿರುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಗತ್ಯಬಿದ್ದರೇ ನಾನು ವಿಚಾರಣೆಗೂ ಸಹ ಸಿದ್ದವಾಗಿದ್ದೇನೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವಾಸ್ತವತೆಯನ್ನು ತಿಳಿಸುತ್ತೇನೆ. ಆದರೆ ನನ್ನ ಪೋನ್ ನಂಬರ್‍ ರಿವೀಲ್ ಮಾಡಿದರೇ ಮಾತ್ರ ನಾನು ಸುಮ್ಮನಿರುವುದಿಲ್ಲ ಎಂದು ವಾರ್ನ್ ಮಾಡಿದ್ದಾರೆ.

ಇನ್ನೂ ಇದೇ ವೇಳೆ ಅಷುರೆಡ್ಡಿ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಅಮೇರಿಕಾದಲ್ಲಿ ತಾನು ಅನಾರೋಗ್ಯದ ಪಾಲಾಗಿದ್ದು, ಅಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದಾರೆ. ಆಸ್ಪತ್ರೆಯಲ್ಲಿ ಬೆಡ್ ಮೇಲೆ ಮಲಗಿರುವ ಪೊಟೋ ಶೇರ್‍ ಮಾಡಿದ್ದಾರೆ. ಇನ್ನೂ ಆಕೆಗೆ ಏನಾಗಿದೆ, ಶೀಘ್ರ ಗುಣಮುಖರಾಗಿ ಎಂದು ಕೆಲವರು ಹೇಳುತ್ತಿದ್ದರೇ, ಮತ್ತೆ ಕೆಲವರು ಡ್ರಗ್ಸ್ ಕೇಸ್ ನಲ್ಲಿ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಡ್ರಾಮಾ ಆಡುತ್ತಿದ್ದಾರೆ ಎಂದು ಸಹ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.

Most Popular

To Top