ಸೆಲ್ಫಿಗಾಗಿ ಸಾವಿನ ಮನೆಯಲ್ಲೂ ನಟಿ ವಿದ್ಯಾಬಾಲನ್ ಹಿಂದೆ ಬಿದ್ದ ಅಭಿಮಾನಿ, ಮುಜುಗರ ಅನುಭವಿಸಿದ ನಟಿ….!

ಸಿನೆಮಾ ನಟ-ನಟಿಯರಿಗೆ ತುಂಬಾನೆ ಅಭಿಮಾನಿಗಳಿರುತ್ತಾರೆ. ತಾವು ಅಭಿಮಾನಿಸುವ ಕಲಾವಿದರನ್ನು ಕಂಡರೇ ಕೂಡಲೇ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳಿಂದ ಅತಿರೇಕದ ಕೆಲಸ ಸಹ ಆಗುತ್ತಿರುತ್ತದೆ. ಅಭಿಮಾನಿಗಳು ಮಾಡುವ ಕೆಲಸದಿಂದ ಕಲಾವಿದರು ತುಂಬಾನೆ…

ಸಿನೆಮಾ ನಟ-ನಟಿಯರಿಗೆ ತುಂಬಾನೆ ಅಭಿಮಾನಿಗಳಿರುತ್ತಾರೆ. ತಾವು ಅಭಿಮಾನಿಸುವ ಕಲಾವಿದರನ್ನು ಕಂಡರೇ ಕೂಡಲೇ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳಿಂದ ಅತಿರೇಕದ ಕೆಲಸ ಸಹ ಆಗುತ್ತಿರುತ್ತದೆ. ಅಭಿಮಾನಿಗಳು ಮಾಡುವ ಕೆಲಸದಿಂದ ಕಲಾವಿದರು ತುಂಬಾನೆ ಕಿರಿಕಿರಿ ಅನುಭವಿಸುತ್ತಿರುತ್ತಾರೆ. ಅಂತಹ ಕಿರಿಕಿರಿಯನ್ನು ಬಾಲಿವುಡ್ ನಟಿ ವಿದ್ಯಾಬಾಲನ್ ಎದುರಿಸಿದ್ದಾರೆ. ಸಾವಿನ ಮನೆಯಲ್ಲಿ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ವಿದ್ಯಾಬಾಲನ್ ಮುಂದಾಗಿದ್ದು, ಇದರಿಂದ ಆಕೆ ಮುಜುಗರಕ್ಕೀಡಾಗಿದ್ದರು ಎನ್ನಲಾಗಿದೆ.

ಬಾಲಿವುಡ್ ನಟಿ ವಿದ್ಯಾಬಾಲನ್ ಇತ್ತೀಚಿಗೆ ಮೃತಪಟ್ಟ ಖ್ಯಾತ ಗಾಝಲ್ ಗಾಯಕ ಪಂಕಜ್ ಉದಾಸ್ ರವರ ಅಂತಿಮ ದರ್ಶನಕ್ಕಾಗಿ ಮೃತರ ಮನೆಗೆ ಹೋಗಿದ್ದರು. ಈ ವೇಳೆ ಅಲ್ಲಿದ್ದ ವಿದ್ಯಾಬಾಲನ್ ಅಭಿಮಾನಿಯೋರ್ವ ಆಕೆಯೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದಿದ್ದರು. ಇದರಿಂದ ಆಕೆ ತೀವ್ರ ಮುಜುಗರಕ್ಕೆ ಈಡಾಗಿದ್ದರು. ಆದರೂ ಸಹ ವಿದ್ಯಾಬಾಲನ್ ತಾಳ್ಮೆಯಿಂದ ವರ್ತನೆ ಮಾಡಿದ್ದಾರೆ. ಇನ್ನೂ ಈ ಸಂಬಂಧ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋಗೆ ನೆಟ್ಟಿಗರು ತಮ್ಮದೇ ಆದ ಶೈಲಿಯಲ್ಲಿ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಅನೇಕರು ಆ ಮೂರ್ಖ ಅಭಿಮಾನಿಯ ನಡೆಗೆ ಆಕ್ರೋಷ ಹೊರಹಾಕಿದ್ದಾರೆ.

ಇನ್ನೂ ಸಾಮಾನ್ಯವಾಗಿ ಸಿನೆಮಾ ಸೆಲೆಬ್ರೆಟಿಗಳು ಹೊರಗಿನ ಪ್ರಪಂಚದಲ್ಲಿ ಸಾಮಾನ್ಯರಂತೆ ಇರುವುದು ತುಂಬಾನೆ ಕಷ್ಟ ಎಂದೇ ಹೇಳಬಹುದು. ಸಿನೆಮಾ ಸೆಲೆಬ್ರೆಟಿಗಳಿಗೆ ವೈಯುಕ್ತಿಕ ಬದುಕೆ ಇರೊಲ್ಲ ಎಂಬಂತೆ ಅವರು ಎಲ್ಲಿ ಹೋದರೂ ಅಭಿಮಾನಿಗಳು ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿರುತ್ತಾರೆ. ಅವರು ಸಾಮಾನ್ಯರಂತೆ ಬದುಕೋದು ತುಂಬಾನೆ ಕಷ್ಟ ಎಂದು ಹೇಳಬಹುದು. ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅನೇಕ ಸೆಲೆಬ್ರೆಟಿಗಳು ತಾಳ್ಮೆಯಿಂದ ವರ್ತನೆ ಮಾಡುತ್ತಾರೆ. ಅಭಿಮಾನಿಗಳು ಎಷ್ಟೇ ಅತಿರೇಖ ಮಾಡಿದರೂ ಸಂಯಮದಿಂದ ವರ್ತನೆ ಮಾಡುತ್ತಾರೆ. ಆದರೆ ಕೆಲವರಂತೂ ತಾಳ್ಮೆ ಕಳೆದುಕೊಂಡು ಅಭಿಮಾನಿಗಳ ವಿರುದ್ದ ಆಕ್ರೋಷ ಹೊರಹಾಕಿದ ಸನ್ನಿವೇಶಗಳನ್ನು ನೋಡಿರುತ್ತೇವೆ. ಇದೀಗ ಅಂತಹದ್ದೆ ಕಿರಿಕಿರಿಯನ್ನು ಅನುಭವಿಸಿದ ವಿದ್ಯಾಬಾಲನ್ ಸಹ ತುಂಬಾ ಸಂಯಮದಿಂದ ವರ್ತನೆ ಮಾಡಿದ್ದಾರೆ.

ಇನ್ನೂ ಇದೀಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪಂಕಜ್ ಉದಾಸಿ ರವರ ಅಂತಿಮ ದರ್ಶನಕ್ಕೆ ಬಂದಿದ್ದ ವಿದ್ಯಾಬಾಲನ್ ರವರ ಜೊತೆಗೆ ಅಭಿಮಾನಿಯೋರ್ವ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾನೆ. ವಿದ್ಯಾಬಾಲನ್ ರವರ ಸಹಾಯಕಿ ಆತನನ್ನು ಸೆಲ್ಫಿ ತೆಗೆಯದಂತೆ ಮನವಿ ಮಾಡಿದ್ದಾರೆ. ಆದರೂ ಸಹ ಆತ ಕೇಳದೇ ಸೆಲ್ಫಿ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಆದರೆ ವಿದ್ಯಾಬಾಲನ್ ಆತನಿಗೆ ಏನು ಹೇಲದೇ ತಾಳ್ಮೆಯಿಂದ ವರ್ತನೆ ಮಾಡಿದ್ದು, ನೆಟ್ಟಿಗರು ಆಕೆಯ ವರ್ತನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದರೇ ರೀತಿ ಅಭಿಮಾನಿಯ ಅತಿರೇಕದ ವರ್ತನೆಗೆ ಕೆಲವರು ಕಿಡಿಕಾರಿದ್ದಾರೆ.