ಪ್ರಿಯಕರನೊಂದಿಗೆ ಮದುವೆಯ ಬಗ್ಗೆ ಸರಿಯಾಗಿಯೇ ಕೌಂಟರ್ ಕೊಟ್ಟ ತಾಪ್ಸಿ ಪನ್ನು…..!

Follow Us :

ಸೌತ್ ಸಿನಿರಂಗದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ತಾಪ್ಸಿ ಪನ್ನು ಸಹ ಒಬ್ಬರಾಗಿದ್ದಾರೆ. ಜುಮ್ಮಂದಿ ನಾದಂ ಎಂಬ ಸಿನೆಮಾದ ಮೂಲಕ ಟಾಲಿವುಡ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಕ್ರೇಜ್ ದಕ್ಕಿಸಿಕೊಂಡರು. ಸದ್ಯ ಬಾಲಿವುಡ್‌ ನಲ್ಲಿ ದೊಡ್ಡ ಫೇಮ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿದ್ದಾರೆ. ಇನ್ನೂ ಬಾಲಿವುಡ್ ನಲ್ಲೇ ಸೆಟಲ್ ಆಗಿದ್ದು, ಆಕೆ ಇತ್ತೀಚಿಗೆ ವೈಯುಕ್ತಿಕ ವಿಚಾರಗಳ ಕಾರಣದಿಂದ ಭಾರಿ ಸುದ್ದಿಯಾಗುತ್ತಿದ್ದಾರೆ. ಸದ್ಯ ಆಕೆ ತನ್ನ ಪ್ರಿಯಕರನನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಜೋರಾಗಿ ಹರಿದಾಡುತ್ತಿದ್ದು, ಅದಕ್ಕೆ ಆಕೆ ಸರಿಯಾಗಿಯೇ ಉತ್ತರ ನೀಡಿದ್ದಾರೆ.

ಸೌತ್ ಸಿನಿರಂಗದಿಂದ ಬಾಲಿವುಡ್ ಗೆ ಹಾರಿದ ತಾಪ್ಸಿ ಪನ್ನು ಬಾಲಿವುಡ್ ಸಿನೆಮಾಗಳಲ್ಲಿಯೇ ಪುಲ್ ಬ್ಯುಸಿಯಾಗಿದ್ದಾರೆ. ಬಾಲಿವುಡ್ ಗೆ ಹೋಗಿದ ಬಳಿಕ ತಾಪ್ಸಿ ತುಂಬಾನೆ ಬದಲಾಗಿದ್ದಾರೆ ಎಂದು ಹೇಳಬಹುದಾಗಿದೆ. ನಟನಗೆ ಪ್ರಾಧಾನ್ಯತೆಯಿರುವಂತಹ ಸಿನೆಮಾಗಳನ್ನು ಆಯ್ಕೆ ಮಾಡಿಕೊಳ್ಳುತ್ತಾ, ಸಮಯ ಸಿಕ್ಕಾಗಲೆಲ್ಲಾ ಗ್ಲಾಮರಸ್ ಪೊಟೋಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಜೊತೆಗೆ ವಿವಾದಗಳಿಗೆ ಕೇರಾಫ್ ಎಂಬಂತೆ ಕೆಲವೊಂದು ವಿವಾದಗಳಿಗೂ ಸಹ ಗುರಿಯಾಗುತ್ತಿರುತ್ತಾರೆ. ಆಕೆ ಟಾಲಿವುಡ್ ನಿಂದ ಕೆರಿಯರ್‍ ಶುರು ಮಾಡಿದರೂ ಸಹ ಟಾಲಿವುಡ್ ಬಗ್ಗೆ ಕಾಮೆಂಟ್ಸ್ ಮಾಡುತ್ತಿರುತ್ತಾರೆ. ಅನೇಕ ಬಾರಿ ಆಕೆ ಟಾಲಿವುಡ್ ಸಿನಿರಂಗದ ಬಗ್ಗೆ ಕೆಲವೊಂದು ಶಾಕಿಂಗ್ ಕಾಮೆಂಟ್ಸ್ ಮಾಡುವ ಮೂಲಕ ವಿವಾದಕ್ಕೆ ಕಾರಣರಾಗಿದ್ದರು.

ಇತ್ತೀಚಿಗೆ ತೆರೆಕಂಡ ಡಂಕಿ ಸಿನೆಮಾದ ಮೂಲಕ ತಾಪ್ಸಿ ಒಳ್ಳೆಯ ಸಕ್ಸಸ್ ಪಡೆದುಕೊಂಡರು. ಸದ್ಯ ತಾಪ್ಸಿ ಮದುವೆಯ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ಬಾಲಿವುಡ್ ನಲ್ಲಿ ಇತ್ತೀಚಿಗೆ ಹಿರೋಯಿನ್ ಗಳ ಮದುವೆ ನಡೆಯಿತು. ಕಿಯಾರಾ, ರಕುಲ್ ಪ್ರೀತ್ ಸಿಂಗ್ ಮದುವೆ ಸಹ ಇತ್ತೀಚಿಗಷ್ಟೆ ನಡೆಯಿತು. ಇದೀಗ ತಾಪ್ಸಿ ಸಹ ಮದುವೆಗೆ ಸಿದ್ದವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆಕೆಯ ಡೆನ್ಮಾರ್ಕ್ ಬ್ಯಾಡ್ಮಿಂಟನ್ ಕೋಚ್ ಮಥಿಯಾಸ್ ಬೋಯ್ ಎಂಬಾತನೊಂದಿಗೆ ಪ್ರೀತಿಯಲ್ಲಿದ್ದಾರೆ. ಇಷ್ಟು ದಿನ ಸೀಕ್ರೇಟ್ ಆಗಿ ಲವ್ ಟ್ರಾಕ್ ನಡೆಸಿದ್ದರು. ಇತ್ತೀಚಿಗಷ್ಟೆ ಅವರಿಬ್ಬರು ಮಿಡಿಯಾಗೆ ಸಿಕ್ಕಿದ್ದಾರೆ. ಇದೀಗ ಈ ಜೋಡಿ ಮದುವೆಗೆ ಸಿದ್ದವಾಗಿದ್ದಾರಂತೆ. ರಾಜಸ್ಥಾನದ ಉದಯಪುರದಲ್ಲಿ ಈ ಜೋಡಿಯ ಮದುವೆ ತುಂಬಾ ಅದ್ದೂರಿಯಾಗಿ ನಡೆಯಲಿದೆಯಂತೆ. ಕ್ರಿಶ್ಚಿಯನ್ ಹಾಗೂ ಸಿಕ್ ಸಂಪ್ರದಾಯದಂತೆ ಮದುವೆ ನಡೆಯಲಿದೆ ಎಂದು ಸಹ ಹೇಳಲಾಗಿತ್ತು.

ಇನ್ನೂ ಈ ಕುರಿತು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮದುವೆಯ ಬಗ್ಗೆ ರಿಯಾಕ್ಟ್ ಆಗಿದ್ದಾರೆ. ಆಂಕರ್‍ ಕೇಳಿದ ಪ್ರಶ್ನೆಗೆ ವಿಭಿನ್ನವಾಗಿ ರಿಯಾಕ್ಟ್ ಆಗಿದ್ದಾರೆ. ನನ್ನ ವೈಯುಕ್ತಿಕ ವಿಚಾರಗಳಿಗೆ ನಾನು ಯಾವಾಗಲೂ ಕ್ಲಾರಿಟಿ ಕೊಟ್ಟಿಲ್ಲ, ಮುಂದೆ ಸಹ ಕೊಡೊಲ್ಲ ಎಂದು ಹೇಳಿದ್ದಾರೆ. ತಮ್ಮ ಮದುವೆಯ ಬಗ್ಗೆ ಹರಿದಾಡುತ್ತಿರುವ ಸುದ್ದಿ ನಿಜವೇ ಅಥವಾ ಸುಳ್ಳೇ ಎಂಬುದನ್ನು ಸಸ್ಪೆನ್ಸ್ ನಲ್ಲಿ ಇಟ್ಟಿದ್ದಾರೆ. ಸದ್ಯ ತಾಪ್ಸಿ ವಾಹ್ ಲಡ್ಕಿ ಹೈ ಕಹಾನ್, ಫಿರ್‍ ಆಯಿ ಹಸಿನ್ ದಿಲ್ ರೂಬಾ, ಖೆಲ್ ಖೆಲ್ ಮೆಯಿನ್ ಎಂಬ ಸಿನೆಮಾಗಳಲ್ಲಿ ನಟಿಸುತ್ತಿದ್ದಾರೆ.