News

ಬೆಂಗಳೂರು ಮಹಿಳೆಯ ವಿಭಿನ್ನ ಜಾಹೀರಾತು, ಫ್ಲಾಟ್ ಮೇಟ್ ಬೇಕಾಗಿದ್ದಾರೆ ಎಂಬ ಜಾಹೀರಾತು ಸಖತ್ ವೈರಲ್ ……!

ತಮ್ಮ ಪ್ರಾಡಕ್ಟ್ ಗಳನ್ನು ಪ್ರಮೋಟ್ ಮಾಡಲು ವಿವಿಧ ರೀತಿಯ ಜಾಹೀರಾತುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಲ್ಲೂ ಕೆಲವರಂತೂ ಸೋಷಿಯಲ್ ಮಿಡಿಯಾದಲ್ಲಿ ಜಾಹೀರಾತುಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬರು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಜಾಹೀರಾತೊಂದನ್ನು ಹಂಚಿಕೊಂಡಿದ್ದು, ಈ ಜಾಹೀರಾತು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಆಕೆಯ ವಿನ್ಯಾಸಗೊಳಿಸಿದ ಜಾಹೀರಾತು ಎಲ್ಲರನ್ನೂ ಸೆಳೆಯುತ್ತಿದೆ.

ಬೆಂಗಳೂರಿನಲ್ಲಿ ಮನೆ ಸಿಗೋದು ಅಷ್ಟೊಂದು ಸುಲಭದ ಕೆಲಸವಲ್ಲ. ಒಂದು ವೇಳೆ ಸಿಕ್ಕರೂ ದುಬಾರಿಯಾಗಿರುತ್ತದೆ. ಇದೀಗ ಬೆಂಗಳೂರಿನ ಮಹಿಳೆಯೊಬ್ಬಳು ತನ್ನ ಫ್ಲಾಟ್ ಮೇಟ್ ಹುಡುಕಲು ತಮ್ಮ ಎಕ್ಸ್ ಖಾತೆಯಲ್ಲಿ ವಿಶೇಷ ಪೋಸ್ಟ್ ಮಾಡಿದ್ದಾರೆ. ಫ್ಲಾಟ್ ಮೇಟ್ ಬೇಕಾಗಿದ್ದಾರೆ ಎಂದು ಸುಂದರವಾಗಿ ವಿನ್ಯಾಸಗೊಳಿಸಿದ  ಜಾಹೀರಾತು ಹಂಚಿಕೊಂಡಿದ್ದಾರೆ. ಆಕೆ ಹಂಚಿಕೊಂಡಿರುವುದು ಉದಿಶಾ ಎಂಬಾಕೆ. ಆಕೆಯ ಎಕ್ಸ್ ಖಾತೆಯಲ್ಲಿ ಮನೆಯ ಕೆಲವೊಂದು ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಈ ಪೊಟೋಗಳನ್ನು ಡಿಸೈನ್ ಮಾಡಿ ನಾನು ನನ್ನ 2BHK ಮನೆಗಾಗಿ ಮಹಿಳಾ ಫ್ಲಾಟ್ ಮೇಟ್ ಗಾಗಿ ಹುಡುಕುತ್ತಿದ್ದೇನೆ ಎಂದು ಪೋಸ್ಟ್ ಮಾಡಿ ಫ್ಲಾಟ್ ಬಾಡಿಗೆ, ಠೇವಣಿ ಹಾಗೂ ಸ್ಥಳಾಂತರದ ದಿನಾಂಕವನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ.

ಇನ್ನೂ ಉದಿಶಾ ತಮ್ಮ ಜಾಹಿರಾತಿನಲ್ಲಿ ಹಂಚಿಕೊಂಡ ಪೊಟೋಗಳಿಗೆ ಕ್ಯಾಪ್ಷನ್ ಸಹ ಹಾಕಿದ್ದಾರೆ. ಆಕೆ ಹಂಚಿಕೊಂಡ ಈ ವಿಭಿನ್ನ ಜಾಹಿರಾತು ಸೋಷಿಯಲ್ ಮಿಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಈ ಪೋಸ್ಟ್ ಕಂಡ ಅನೇಕರು ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ. ಕಳೆದ ಫೆ.26 ರಂದು ಹಂಚಿಕೊಂಡ ಈ ಪೋಸ್ಟ್ ಕಡಿಮೆ ಸಮಯದಲ್ಲೇ ವೈರಲ್ ಆಗಿದೆ. ಸಾವಿರಕ್ಕೂ ಹೆಚ್ಚು ಲೈಕ್ ಗಳು, ಕಾಮೆಂಟ್ ಗಳು ಹರಿದು ಬಂದಿದೆ. ಅನೇಕರು ಆಕೆಯ ಈ ವಿಭಿನ್ನ ರೀತಿಯ ಜಾಹೀರಾತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top