ಬೀದಿ ಬದಿಯ ಬಡವರಿಗೆ ಬಹುಮಾನಗಳನ್ನು ಹಂಚಿದ ವಿಕ್ಕಿ ಅಂಡ್ ನಯನ್, ಎಲ್ಲರಿಂದ ಮೆಚ್ಚುಗೆಗೆ ಪಾತ್ರರಾದ ಸ್ಟಾರ್ ದಂಪತಿ….!

ಸೌತ್ ಸಿನಿರಂಗದ ಲೇಡಿ ಸೂಪರ್‍ ಸ್ಟಾರ್‍ ನಯನತಾರ ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ಜೂನ್ 9 ರಂದು ಅದ್ದೂರಿಯಾಗಿ ಮದುವೆಯಾದರು. ಮದುವೆಯಾದ ಬಳಿಕ ಇಬ್ಬರೂ ಸಂತೋಷದಿಂದ…

ಸೌತ್ ಸಿನಿರಂಗದ ಲೇಡಿ ಸೂಪರ್‍ ಸ್ಟಾರ್‍ ನಯನತಾರ ಹಾಗೂ ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ಜೂನ್ 9 ರಂದು ಅದ್ದೂರಿಯಾಗಿ ಮದುವೆಯಾದರು. ಮದುವೆಯಾದ ಬಳಿಕ ಇಬ್ಬರೂ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಅನೇಕ ವಿವಾದಗಳ ಮೂಲಕ ಸುದ್ದಿಯಾದ ಈ ಜೋಡಿ ಇದೀಗ ಒಳ್ಳೆಯ ಮಾನವೀಯತೆಯ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಬೀದಿ ಬದಿಯ ಬಡವರಿಗೆ ಬಹುಮಾನಗಳನ್ನು ಹಂಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಿನೆಮಾ ಸೆಲೆಬ್ರೆಟಿಗಳು ಸಾಮಾನ್ಯವಾಗಿ ರಸ್ತೆಗಳಲ್ಲಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯ ಜನರೊಂದಿಗೆ ಬೆರೆಯುವುದಿಲ್ಲ. ಕೆಲವೊಮ್ಮೆ ಸಾರ್ವಜನಿಕರವಾಗಿ ಕಾಣಿಸಿಕೊಂಡರೂ ಸಹ ಜನರು ಗುಂಪು ಗುಂಪಾಗಿ ಅವರ ಮೇಲೆ ಬೀಳುವುದು ನೋಡಿದ್ದೇವೆ. ಆದರೆ ನಯನ್ ಅಂಡ್ ವಿಕ್ಕಿ ಜೋಡಿ ಇದ್ಯಾವುದನ್ನೂ ಲೆಕ್ಕಿಸದೇ, ತಾವು ಸ್ಟಾರ್‍ ಸೆಲೆಬ್ರೆಟಿಗಳೂ ಎಂಬ ಭಾವನೆಯನ್ನು ಸಹ ದೂರ ಮಾಡಿ ಬೀದಿ ಬದಿಯ ಬಡವರಿಗೆ ಉಡುಗೊರೆಯನ್ನು ಕೊಟ್ಟಿದ್ದಾರೆ. ಹೊಸ ವರ್ಷದ ಸಂಭ್ರಮದ ಅಂಗವಾಗಿ ರಸ್ತೆ ಬದಿಯಿರುವ ಬಡವರಿಗೆ ಕೆಲವೊಂದು ಬಹುಮಾನಗಳನ್ನು ನೀಡಿದ್ದಾರೆ. ಇನ್ನೂ ಈ ಸಂಬಂಧ ಈ ವಿಡಿಯೋ ಅನ್ನು ನಯನತಾರ ಸೋಷಿಯಲ್ ಮಿಡಿಯಾದಲ್ಲಿ ವಿಡಿಯೋ ಅನ್ನು ಅಪ್ಲೋಡ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನೂ ನಯನತಾರ ಹಂಚಿಕೊಂಡ ಈ ವಿಡಿಯೋದಲ್ಲಿ ನಯನತಾರಾ ಹಾಗೂ ವಿಘ್ನೇಶ್ ಕೆಲವೊಂದು ಉಡುಗೊರೆಗಳನ್ನು ರಸ್ತೆ ಬದಿಯಿದ್ದ ಬಡವರಿಗೆ ನೀಡಿದ್ದಾರೆ. ಪೇಪರ್‍ ಬ್ಯಾಗ್ ನಲ್ಲಿ ಕೆಲವೊಂದು ಗಿಫ್ಟ್ ಗಳನ್ನು ಬಡವರಿಗೆ ನೀಡಿದ್ದಾರೆ. ಚೆನೈನ ಕೆಲವೊಂದು ಬೀದಿಗಳಲ್ಲಿ ಈ ಜೋಡಿ ಈ ಮಹತ್ತರ ಕೆಲಸ ಮಾಡಿದೆ. ಇನ್ನೂ ನಟಿ ನಯನತಾರಾ ಹಾಗೂ ವಿಘ್ನೇಶ್ ಕಳೆದ ವರ್ಷದ ಜೂನ್ ಮಾಹೆಯಲ್ಲಿ ಸಪ್ತಪದಿ ತುಳಿದರು. ಇನ್ನೂ ಕೆಲವು ದಿನಗಳ ಹಿಂದೆಯಷ್ಟೆ ಸೆರಗೋಸಿ ಪದ್ದತಿಯ ಮೂಲಕ ಅವಳಿ ಮಕ್ಕಳನ್ನು ಪಡೆದುಕೊಂಡರು. ಇನ್ನೂ ಮದುವೆಯಾದಾಗಿನಿಂದ ಈ ಜೋಡಿ ಅನೇಕ ಕಾರಣಗಳಿಂದ ವಿವಾದಕ್ಕೆ ಗುರಿಯಾದರು. ಸೆರಗೋಸಿ ಪದ್ದತಿಯ ಮೂಲಕ ಮಕ್ಕಳನ್ನು ಪಡೆದುಕೊಂಡ ಬಗ್ಗೆ ಸಹ ಅನೇಕ ವಿಮರ್ಶೆಗಳಿಗೆ ಗುರಿಯಾದರು. ವಿವಾದಗಳಿಂದ ಸುದ್ದಿಯಾದ ಈ ಜೋಡಿ ಇದೀಗ ಒಳ್ಳೆಯ ಕೆಲಸ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇನ್ನೂ ನಟಿ ನಯನತಾರ ಮದುವೆಯಾದರೂ ಸಹ ಬಿಗ್ ಬಜೆಟ್ ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚಿಗಷ್ಟೆ ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಗಾಡ್ ಫಾಧರ್‍ ಸಿನೆಮಾದಲ್ಲಿ ಹಾಗೂ ಕನೆಕ್ಟ್ ಎಂಬ ಹಾರರ್‍ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಆಕೆ ಬಾಲಿವುಡ್ ನಲ್ಲಿ ಶಾರುಖ್ ಖಾನ್ ಜೊತೆಗೆ ಜವಾನ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ.