ರಾಣಾ ನಾಯುಡು ವೆಬ್ ಸಿರೀಸ್ ನಿಂದ ಬೇಸರಗೊಂಡ ವೆಂಕಿ ಅಭಿಮಾನಿಗಳು, ಇಂತಹ ಸೀರಿಸ್ ಬೇಕಿತ್ತಾ ಎಂದ ಅಭಿಮಾನಿಗಳು…!

ತೆಲುಗು ಸಿನಿರಂಗದ ಸ್ಟಾರ್‍ ನಟರಲ್ಲಿ ವಿಕ್ಟರಿ ವೆಂಕಟೇಶ್ ಸಹ ಒಬ್ಬರಾಗಿದ್ದು, ಅನೇಕ ಕುಟುಂಭ ಆಧಾರಿತ ಸಿನೆಮಾಗಳ ಮೂಲಕ ತುಂಬಾನೆ ಫೇಂ ಸಂಪಾದಿಸಿಕೊಂಡಿದ್ದಾರೆ. ಈ ಹಿಂದೆ ಎಂದೂ ವೆಂಕಟೇಶ್ ರವರ ಬಗ್ಗೆ ಅವರ ಅಭಿಮಾನಿಗಳು ಸಿನೆಮಾ ವಿಚಾರದಲ್ಲಿ ಬೇಸರ ಗೊಂಡ ಘಟನೆಗಳು ನಡೆದಿಲ್ಲ. ಇದೀಗ ಮೊದಲ ಬಾರಿಗೆ ವೆಂಕಟೇಶ್ ಅಭಿಮಾನಿಗಳು ಬೇಸರಗೊಂಡಿದ್ದಾರೆ. ವೆಂಕಟೇಶ್ ಹಾಗೂ ರಾಣಾ ಅಭಿನಯದ ವೆಬ್ ಸೀರಿಸ್ ಕಾರಣದಿಂದ ವೆಂಕಟೇಶ್ ಮೇಲೆ ಅವರ ಅಭಿಮಾನಿಗಳು ತುಂಬಾನೆ ಬೇಸರ ಗೊಂಡಿದ್ದು, ಅಂತಹ ಪಾತ್ರಗಳು ಬೇಕಿತ್ತಾ ಎಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿಕ್ಟರಿ ವೆಂಕಟೇಶ್ ಹಾಗೂ ರಾಣಾ ಜೊತೆಯಲ್ಲಿ ನಟಿಸಿದ ರಾಣಾ ನಾಯುಡು ವೆಬ್ ಸಿರೀಸ್ ಮಾ.10 ರಿಂದ ನೆಟ್ ಫ್ಲಿಕ್ಸ್ ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಈ ವೆನ್ ಸಿರೀಸ್ ವಿಮರ್ಶಕರಿಂದ ಒಳ್ಳೆಯ ರಿವ್ಯೂ ಪಡೆದುಕೊಂಡರೂ ಸಹ ವೆಂಕಟೇಶ್ ಪಾತ್ರದ ಕಾರಣದಿಂದ ಅವರ ಫ್ಯಾನ್ಸ್ ತುಂಬಾನೆ ಬೇಸರವಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸೀರಿಸ್ ನಲ್ಲಿ ತುಂಬಾನೆ ಅಡಲ್ಟ್ ಕಂಟೆಂಟ್ ಇದೆ. ಈ ಸಿರೀಸ್ ನಲ್ಲಿ ವೆಂಕಟೇಶ್  ಪಾತ್ರದ ಮಾತುಗಳು ಅನೇಕರಿಗೆ ಇಷ್ಟವಾಗುತ್ತಿಲ್ಲ. ಅದರಲ್ಲೂ ಅಪಾರ ಸಂಖ್ಯೆಯ ಮಹಿಳಾ ಅಭಿಮಾನಿಗಳನ್ನು ಹೊಂದಿರುವ ವೆಂಕಟೇಶ್ ರವರ ಇಮೇಜ್ ಸಹ ಡ್ಯಾಮೇಜ್ ಆಗುತ್ತಿದೆ ಎಂಬ ಕಾಮೆಂಟ್ ಗಳೂ ಸಹ ಕೇಳಿಬರುತ್ತಿದೆ. ಜೊತೆಗೆ ವೆಂಕಟೇಶ್ ರವರು ಇಂತಹ ಪಾತ್ರಗಳಿಂದ ದೂರ ಇರಬೇಕೆಂಬ ಒತ್ತಾಯ ಸಹ ಹೆಚ್ಚಾಗುತ್ತಿದೆ.

ರಾಣಾ ನಾಯುಡು ಸಿರೀಸ್ ನಲ್ಲಿ ವೆಂಕಟೇಶ್ ಹಾಗೂ ರಾಣಾ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸೀರಿಸ್ ತುಂಬಾನೆ ಅಡಲ್ಟ್ ಕಂಟೆಂಟ್ ನಿಂದ ಕೂಡಿದೆ ಎನ್ನಬಹುದಾಗಿದೆ. ಕೆಲವೊಂದು ಅಸಭ್ಯಕರವಾದ ದೃಶ್ಯಗಳು, ಮಾತುಗಳು ಸಹ ಹೆಚ್ಚಾಗಿ ಕಂಡು ಬರುತ್ತವೆ. ಕುಟುಂಬದೊಂದಿಗೆ ಇಂತಹ ಸೀರಿಸ್ ನೋಡಲು ಇರುಸು ಮುರುಸು ಸಹ ಉಂಟಾಗುತ್ತದೆ ಎನ್ನಬಹುದಾಗಿದೆ. ಇನ್ನೂ ವೆಂಕಟೇಶ್ ಹಾಗೂ ರಾಣಾ ಈ ಸೀರಿಸ್ ಯಾವ ರೀತಿಯಲ್ಲಿ ಒಪ್ಪಿಕೊಂಡರು ಎಂಬ ಕಾಮೆಂಟ್ ಗಳು ಕೇಳಿಬರುತ್ತಿವೆ. ಈ ಸಿರೀಸ್ ಒಪ್ಪಿಕೊಂಡು ತಪ್ಪು ಮಾಡಿದ್ದಾರೆಂಬ ಅಭಿಪ್ರಾಯಗಳೂ ಸಹ ವ್ಯಕ್ತವಾಗುತ್ತಿವೆ. ವೆಂಕಟೇಶ್ ಇನ್ನೂ ಮುಂದೆ ಅಂತಹ ಪ್ರಾಜೆಕ್ಟ್ ಗಳನ್ನು ಆಯ್ಕೆ ಮಾಡಿಕೊಳ್ಳುವಾಗ ತುಂಬಾ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಕೆಲವರು ಕಾಮೆಂಟ್ ಸಹ ಮಾಡುತ್ತಿದ್ದಾರೆ.

ಇನ್ನೂ ಈ ಸೀರಿಸ್ ನಲ್ಲಿ ನಟಿಸಲು ರಾಣಾ ಹಾಗೂ ವೆಂಕಟೇಶ್ ಭಾರಿ ಮೊತ್ತದ ಸಂಭಾವನೆಯನ್ನು ಸಹ ಪಡೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ವೆಂಕಟೇಶ್ ಗೆ 12 ಕೋಟಿ ಹಾಗೂ ರಾಣಾ ಗೆ 8 ಕೋಟಿಯಷ್ಟು ಸಂಭಾವನೆ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನೂ ವೆಂಕಟೇಶ್ ಸೈಂಧವ್ ಎಂಬ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನೆಮಾ ಮೇಲೆ ಭಾರಿ ನಿರೀಕ್ಷೆಯನ್ನು ಸಹ ಅವರ ಅಭಿಮಾನಿಗಳು ಇಟ್ಟುಕೊಂಡಿದ್ದಾರೆ.