Film News

ರಶ್ಮಿಕಾ ಕೇವಲ ಹಾಡುಗಳಿಗೆ ಸೀಮಿತವಾದ್ರು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ ಪರುಚೂರಿ ಗೋಪಾಲಕೃಷ್ಣ…..!

ತೆಲುಗು ಸಿನಿರಂಗದ ಖ್ಯಾತ ಬರಹಗಾರ ಪರುಚೂರಿ ಬ್ರದರ್ಸ್ ಬಗ್ಗೆ ಹೆಚ್ಚಿನ ಪರಿಚಯದ ಅವಶ್ಯಕತೆಯಿಲ್ಲ. ತೆಲುಗಿನಲ್ಲಿ ಫ್ಯಾಮಿಲಿ, ಆಕ್ಷನ್ ಸೇರಿದಂತೆ ಅನೇಕ ಕಮರ್ಷಿಯಲ್ ಸಿನೆಮಾಗಳಿಗೆ ಕಥೆಯನ್ನು ಬರೆದ ಖ್ಯಾತಿ ಅವರದ್ದು. ಇನ್ನೂ ಸಿನಿರಂಗದಲ್ಲಿ ಹೊಸ ಬರಹಗಾರರು ಬಂದ ಹಿನ್ನೆಲೆಯಲ್ಲಿ ಅವರ ಕ್ರೇಜ್ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಸಣ್ಣಪುಟ್ಟ ಕಥೆಗಳನ್ನು ಬರೆಯುತ್ತಾ ಕೆರಿಯರ್‍ ಸಾಗಿಸುತ್ತಿದ್ದಾರೆ. ಇನ್ನೂ ಸುಮಾರು ದಿನಗಳಿಂದ ಪರುಚೂರಿ ಬ್ರದರ್ಸ್ ರಲ್ಲೊಬ್ಬರಾದ ಗೋಪಾಲಕೃಷ್ಣ ಸಿನೆಮಾಗಳ ರಿವ್ಯೂ ಮಾಡುತ್ತಿರುತ್ತಾರೆ. ಇದೀಗ ವಾರಸುಡು ಸಿನೆಮಾದ ರಿವ್ಯೂ ಹೇಳಿದ್ದಾರೆ.

ತಮಿಳಿನ ಸ್ಟಾರ್‍ ನಟ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಲ್ಲಿ ತೆರೆಕಂಡ ವಾರಸುಡು ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನೆಮಾದ ಬಗ್ಗೆ ಪರುಚೂರಿ ಗೋಪಾಲಕೃಷ್ಣ ಕೆಲವೊಂದು ಶಾಕಿಂಗ್ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಅದರಲ್ಲೂ ಈ ಸಿನೆಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ರಶ್ಮಿಕಾ ಪಾತ್ರದ ಬಗ್ಗೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದಾರೆ. ಈ ಸಿನೆಮಾದಲ್ಲಿ ರಶ್ಮಿಕಾ ಕೇವಲ ಹಾಡುಗಳಿಗೆ ಮಾತ್ರ ಸೀಮಿತವಾಗಿದ್ದಾರೆ ಎಂದು ಹೇಳಿದ್ದಾರೆ. ಸಿನೆಮಾದಲ್ಲಿ ಹಿರೋ ವಿಜಯ್ ಹಾಗೂ ರಶ್ಮಿಕಾ ಮಂದಣ್ಣ ಲವ್ ಟ್ರಾಕ್ ಇನ್ನೂ ಇಡಬೇಕಿತ್ತು. ಆದರೆ ಅದು ಕಡಿಮೆ ದೃಶ್ಯಗಳಿಗೆ ಸೀಮಿತವಾಗಿದೆ. ಇದೇ ಈ ಸಿನೆಮಾದ ದೊಡ್ಡ ಮೈನಸ್ ಆಗಿದೆ. ರಶ್ಮಿಕಾ ನಟನೆಗೆ ಹೆಚ್ಚು ಒತ್ತು ನೀಡಿರಲಿಲ್ಲ. ಅಷ್ಟೇಅಲ್ಲದೇ ಈ ಸಿನೆಮಾದಲ್ಲಿ ಅವಿಭಕ್ತ ಕುಟುಂಭ, ಕುತಂತ್ರಗಳಿಗೆ ಹೆಚ್ಚು ಒತ್ತು ನೀಡಲಾಗಿದೆ. ಅದನ್ನು ಕೊಂಚ ಕಡಿಮೆ ಮಾಡಿ ಹಿರೋ ಹಿರೋಯಿನ್ ನಡುವಣ ಪ್ರೇಮಕಥೆಗೆ ಒತ್ತು ನೀಡಬೇಕಿತ್ತು ಎಂದಿದ್ದಾರೆ.

ಇನ್ನೂ ಸಿನೆಮಾದಲ್ಲಿ ತಂದೆ ಪಾತ್ರ ಸಾಯುವುದನ್ನು ತೋರಿಸಲ್ಲ. ಆದರೆ ತಂದೆಯ ಚಿತಾಭಸ್ಮ ನದಿಯಲ್ಲಿ ನಿಮರ್ಜನ ಮಾಡುವುದು ತೋರಿಸಿದ್ದಾರೆ. ಅದರ ಬದಲಿಗೆ ಹಿರೋ ಹಾಗೂ ಹಿರೋಯಿನ್ ಗಳಿಗೆ ಮದುವೆ ಮಾಡಿ ತಂದೆ ಬಂದು ಅಕ್ಷತೆ ಹಾಕಿದಂತೆ ತೊರಿಸಿದ್ದರೇ ಚೆನ್ನಾಗಿರುತ್ತಿತ್ತು. ಇನ್ನೂ ಈ ಸಿನೆಮಾದಲ್ಲಿ ಹಿರೋಯಿನ್ ಪಾತ್ರ ತುಂಬಾನೆ ಕಡಿಮೆಯಿದೆ. ಹಿರೋಯಿನ್ ಪಾತ್ರಕ್ಕೆ ತುಂಬಾ ಅನ್ಯಾಯವಾಗಿದೆ. ಹಿರೋಯಿನ್ ಪಾತ್ರ ಹೆಚ್ಚಾಗಿ ಇರಬೇಕಿತ್ತು ಎಂದು ಪರುಚೂರಿ ಗೋಪಾಲಕೃಷ್ಣ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಪರುಚೂರಿ ಗೋಪಾಲಕೃಷ್ಣ ನೀಡಿದ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಅದರಲ್ಲೂ ರಶ್ಮಿಕಾ ರನ್ನು ಕೇವಲ ಹಾಡುಗಳಿಗೆ ಮಾತ್ರ ಬಳಸಿಕೊಂಡಿದ್ದಾರೆ ಎಂದು ನೀಡಿದ ಹೇಳಿಕೆಯಂದು ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.

ಇನ್ನೂ ವಾರಸುಡು ಸಿನೆಮಾ ಅವಿಭಕ್ತ ಕುಟುಂವ ವ್ಯವಸ್ಥೆ ಚೆನ್ನಾಗಿರುತ್ತದೆ ಎಂದು ಹೇಳುವ ಪ್ರಯತ್ನ ತುಂಬಾ ಚೆನ್ನಾಗಿದೆ. ನಿರ್ದೇಶಕ ವಂಶಿ ಪೈಡಿಪಲ್ಲಿ ಹಾಗೂ ಹಿರೋ ವಿಜಯ್ ರವರನ್ನು ಅಭಿನಂದಿಸಿದ್ದಾರೆ. ಒಟ್ಟಾರೆಯಾಗಿ ಸಿನೆಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಈ ಸಿನೆಮಾ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡರೂ ಸಹ 200 ಕೋಟಿಯವೆರೆಗೂ ಕಲೆಕ್ಷನ್ ಮಾಡಿರುವುದು ವಿಶೇಷ ಎನ್ನಬಹುದಾಗಿದೆ.

Most Popular

To Top