Film News

ಪವನ್ ಕಲ್ಯಾಣ್ ಬಗ್ಗೆ ಸಂಚಲನಾತ್ಮಕ ಹೇಳಿಕೆ ಕೊಟ್ಟ ಕ್ರಿಟಿಕ್ ಉಮೈರ್ ಸಂಧು, ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಪವನ್ ಫ್ಯಾನ್ಸ್….!

ಸಿನಿರಂಗದ ಸೆಲೆಬ್ರೆಟಿಗಳ ಬಗ್ಗೆ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡುತ್ತಾ ಸದಾ ವಿವಾದಗಳಿಗೆ ಕಾರಣವಾಗುವಂತಹ ಫಿಲ್ಮ ಕ್ರಿಟಿಕ್ ಉಮೈರ್‍ ಸಂಧು ಇದೀಗ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಬಗ್ಗೆ ಕಾಮೆಂಟ್ ಮಾಡಿದ್ದಾರೆ. ಪವನ್ ಕಲ್ಯಾಣ್ ಓರ್ವ ವುಮೆನೈಜರ್‍ ಎಂದು ಹೇಳುವ ಮೂಲಕ ಪವನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನೂ ಉಮೈರ್‍ ಸಂಧು ವಿರುದ್ದ ಪವನ್ ಅಭಿಮಾನಿಗಳು ಆಕ್ರೋಷಗೊಂಡಿದ್ದಾರೆ. ಆತನನ್ನು ಸೋಷಿಯಲ್ ಮಿಡಿಯಾದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ನಟ ಪವನ್ ಕಲ್ಯಾಣ್ ಸದ್ಯ ಸಿನಿಮಾಗಳ ಜೊತೆಗೆ ರಾಜಕೀಯವಾಗಿ ತನ್ನ ಕೆಲಸ ತಾನು ಮಾಡಿಕೊಳ್ಳುತ್ತಾ ಸಾಗುತ್ತಿದ್ದಾರೆ. ಸುಮಾರು 27 ವರ್ಷಗಳ ಕಾಲ ಸಿನಿರಂಗದಲ್ಲಿ ಸಿನೆಮಾಗಳನ್ನು ಮಾಡುತ್ತಾ ಭಾರಿ ಫ್ಯಾನ್ ಫಾಲೋಯಿಂಗ್ ಸಹ ಗಳಿಸಿದ್ದಾರೆ. ದಿನೇ ದಿನೇ ಅವರ ಕ್ರೇಜ್ ಸಹ ಬೆಳೆಯುತ್ತಿದೆ. ಇನ್ನೂ ಜನಸೇನಾ ಪಕ್ಷವನ್ನು ಸ್ಥಾಪಿಸಿ ಆ ಮೂಲಕ ಪ್ರಜಾ ಸೇವೆ ಮಾಡಲು ರಾಜಕೀಯದೊಳಗೆ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಪವನ್ ಕಲ್ಯಾಣ್ ರವರ ಬಗ್ಗೆ ಅನೇಕರು ವಿಮರ್ಶೆಗಳನ್ನೂ ಮಾಡುತ್ತಾ ಸಾಗುತ್ತಿದ್ದಾರೆ. ಈಗಾಗಲೇ ಪವನ್ ಕಲ್ಯಾಣ್ ಮೂರು ಮದುವೆಯಾಗಿದ್ದಾರೆ ಎಂಬ ಕಾರಣದಿಂದ ಆತನ ವಿರುದ್ದ ಅನೇಕರು ವಿವಿಧ ರೀತಿಯ ವಿಮರ್ಶೆಗಳನ್ನು ಮಾಡುತ್ತಿದ್ದಾರೆ. ಈ ಹಿಂದೆ ಅನ್ ಸ್ಟಾಪುಬಲ್-2 ಸೀಸನ್ ನಲ್ಲೂ ಪವನ್ ಕಲ್ಯಾಣ್ ಸ್ಟ್ರಾಂಗ್ ಕೌಂಟರ್‍ ಸಹ ನೀಡಿದ್ದರು.

ಇದೀಗ ಓವರ್‍ ಸೀಸ್ ಸೆನ್ಸಾರ್‍ ಬೋರ್ಡ್ ಸದಸ್ಯ ಹಾಗೂ ಫಿಲಂ ಕ್ರಿಟಿಕ್ ಪವನ್ ಕಲ್ಯಾಣ್ ಬಗ್ಗೆ ಸಂಚಲನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಪವನ್ ಕಲ್ಯಾಣ್ ಓರ್ವ ಡೈ ಹಾರ್ಡ್ ವುಮೆನೈಜರ್‍ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಪವನ್ ಕಲ್ಯಾಣ್ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ನೀಡಿದ್ದು ಪವನ್ ಅಭಿಮಾನಿಗಳನ್ನು ಕೆರಳಿಸಿದೆ. ಉಮೈರ್‍ ಸಂಧು ವಿರುದ್ದ ಅವರ ಅಭಿಮಾನಿಗಳು ಆಕ್ರೋಷ ಹೊರಹಾಕುತ್ತಿದ್ದಾರೆ. ತಾವು ಪ್ರಾಣದಂತೆ ಅಭಿಮಾನಿಸುವ ಹಿರೋ ಬಗ್ಗೆ ತನಗೆ ಇಷ್ಟಬಂದಂತೆ ಹೇಳಿಕೆಗಳನ್ನು ನೀಡಿದ್ದು ಏನು ಸರಿಯಿಲ್ಲ ಎಂದು ಉಮೈರ್‍ ಸಂಧು ರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕೂಡಲೇ ಆತ ಕ್ಷಮೆ ಕೋರಬೇಕೆಂದು ಆಗ್ರಹಿಸುತ್ತಿದ್ದಾರೆ.

ಇನ್ನೂ ಕೆಲವು ದಿನಗಳ ಹಿಂದೆ ಸಹ ಟಾಲಿವುಡ್ ಸ್ಟಾರ್‍ ಪ್ರಭಾಸ್ ಹಾಗೂ ಕೃತಿ ಸನನ್ ಮದುವೆಯ ಬಗ್ಗೆ ಸಹ ಟ್ವೀಟ್ ಮಾಡಿ ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸಿದ್ದರು. ಜೊತೆಗೆ ಮಹೇಶ್ ಬಾಬು ರವರ ಬಗ್ಗೆ ಸಹ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದರು. ಇದೀಗ ಪವನ್ ಕಲ್ಯಾಣ್ ಬಗ್ಗೆ ಮಾತನಾಡಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಶೇರ್‍ ಮಾಡುವುದನ್ನು ಬಿಡಿ ಎಂದು ಎಚ್ಚರಿಕೆ ಸಹ ನೀಡುತ್ತಿದ್ದಾರೆ. ಸದ್ಯ ಪವನ್ ಕಲ್ಯಾಣ್ ನಾಲ್ಕು ಸಿನೆಮಾಗಳಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಜೊತೆಗೆ ರಾಜಕೀಯದಲ್ಲೂ ಸಹ ಬ್ಯುಸಿಯಾಗಿದ್ದಾರೆ.

Most Popular

To Top