Film News

ವಿವಾದಕ್ಕೆ ಗುರಿಯಾದ ಪೊನ್ನಿಯನ್ ಸೆಲ್ವನ್-2, ಎ.ಆರ್.ರೆಹಮಾನ್ ಟ್ಯೂನ್ ಕದ್ದಿದ್ದಾರೆ ಎಂಬ ಗಂಭೀರ ಆರೋಪ….!

ಖ್ಯಾತ ನಿದೇರ್ಶಕ ಮಣಿರತ್ನಂ ರವರ ಕನಸಿನ ಪ್ರಾಜೆಕ್ಟ್ ಆದ ಪೊನ್ನಿಯನ್ ಸೆಲ್ವನ್ ಸಿನೆಮಾ ಒಳ್ಳೆಯ ರೆಸ್ಪಾನ್ಸ್ ಪಡೆದುಕೊಂಡಿದೆ. ಬೇರೆ ಭಾಷೆಗಳಲ್ಲಿ ಈ ಸಿನೆಮಾ ಅಷ್ಟೊಂದು ಸಕ್ಸಸ್ ಕಾಣದೇ ಇದ್ದರೂ ಸಹ ಕಾಲಿವುಡ್ ನಲ್ಲಿ ಮಾತ್ರ ಒಳ್ಳೆಯ ಸಕ್ಸಸ್ ಕಂಡಿದೆ. ಪೊನ್ನಿಯನ್ ಸೆಲ್ವನ್ ಸಿನೆಮಾವನ್ನು ಮಣಿರತ್ನಂ ತುಂಬಾ ಪ್ರತಿಷ್ಟಾತ್ಮಕವಾಗಿ ತೆಗೆದುಕೊಂಡು ತೆರೆಗೆ ತಂದಿದ್ದಾರೆ. ಇದೀಗ ಪೊನ್ನಿಯನ್ ಸೆಲ್ವನ್ ಸಿನೆಮಾ ಮ್ಯೂಸಿಕ್ ಡೈರೆಕ್ಟರ್‍ ಎ.ಆರ್‍.ರೆಹಮಾನ್ ರವರು ಟ್ಯೂನ್ ಕದ್ದಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿದೆ.

ಪೊನ್ನಿಯನ್ ಸೆಲ್ವನ್-2 ಸಿನೆಮಾ ಇದೇ ಏ.28 ರಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಸಿನೆಮಾ ಬಿಡುಗಡೆಯಾದ ದಿನದಿಂದಲೇ ಪಾಸಿಟೀವ್ ಟಾಕ್ ಪಡೆದುಕೊಂಡಿದೆ. ದೊಡ್ಡ ತಾರಾಬಳಗವೇ ಈ ಸಿನೆಮಾದಲ್ಲಿದ್ದು, ಬಿಡುಗಡೆಯಾದ ನಾಲ್ಕು ದಿನದಲ್ಲೆ ನೂರು ಕ್ಲಬ್ ಸೇರಿದೆ. ಜೊತೆಗೆ ವಿಶ್ವದಾದ್ಯಂತ ಸುಮಾರು ಇನ್ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗಿದೆ. ಸಕ್ಸಸ್ ಪುಲ್ ಪ್ರದರ್ಶನ ಆಗುತ್ತಿರುವ ಪೊನ್ನಿಯನ್ ಸೆಲ್ವನ್-2 ಸಿನೆಮಾ ಇದೀಗ ಕಾಪಿರೈಟ್ಸ್ ಆರೋಪಕ್ಕೆ ಗುರಿಯಾಗಿದೆ. ಈ ಸಿನೆಮಾದ ಸಂಗೀತ ನಿರ್ದೇಶಕ ಎ.ಆರ್‍.ರೆಹಮಾನ್ ನೀಡಿದ ಒಂದು ಹಾಡು ಕಾಪಿರೈಟ್ಸ್ ಆರೋಪಕ್ಕೆ ಕಾರಣವಾಗಿದೆ. ಸುದ್ದಿ ಸಂಸ್ಥೆಯೊಂದು ಮಾಡಿದ ವರದಿಯಂತೆ ಉಸ್ತಾದ್ ವಸಿಫುದ್ದಿನ್ ದಾಗರ್‍ ಎಂಬ ಗಾಯಕ ಈ ಆರೋಪಗಳನ್ನು ಮಾಡಿದ್ದಾರಂತೆ.

ಪೊನ್ನಿಯನ್ ಸೆಲ್ವನ್-2 ಸಿನೆಮಾದಲ್ಲಿನ ವೀರ ರಾಜಾ ವೀರ ಎಂಬ ಹಾಡು ತನ್ನ ತಂದೆ ಹಾಗೂ ಮಾವ ಕಂಪೋಸ್ ಮಾಡಿದ್ದಾರೆ. ಈ ಟ್ಯೂನ್ ಎ.ಆರ್‍.ರೆಹಮಾನ್ ಕದ್ದಿದ್ದಾರೆ ಎಂದು ಉಸ್ತಾದ್ ವಸಿಪುದ್ದಿನ್ ದಾಗರ್‍ ಗಂಭೀರ ಆರೋಪ ಮಾಡಿದ್ದಾರಂತೆ. ಇನ್ನೂ ಈ ಸುದ್ದಿ ವೈರಲ್ ಆಗುತ್ತಿದ್ದಂತೆ ಪೊನ್ನಿಯನ್ ಸೆಲ್ವನ್ ಟೀಂ ಕೂಡಲೇ ರಿಯಾಕ್ಟ್ ಆಗಿದ್ದು, ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಈ ಸಿನೆಮಾದ ವೀರ ರಾಜಾ ವೀರ ಹಾಡು ಯಾವುದೇ ಹಾಡಿನ ಕಾಪಿ ಅಲ್ಲ ಎಂದು ಸ್ಟ್ರಾಂಗ್ ಆಗಿಯೇ ರಿಯಾಕ್ಟ್ ಆಗಿದ್ದಾರೆ. ಜೊತೆಗೆ ವಸಿಪುದ್ದಿನ್ ಬೇಕೆಂತಲೇ ಈ ರೀತಿಯ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಪೊನ್ನಿಯನ್ ಸೆಲ್ವನ್ ಟೀಂ ತಿಳಿಸಿದೆ.

ಇನ್ನೂ ವೀರ ರಾಜಾ ವೀರ ಎಂಬ ಹಾಡು 13ನೇ ಶತಮಾನದ ನಾರಾಯಣ ಪಂಡಿತಚಾರ್ಯನ್ ಮಾಡಿದ ಸಂಪ್ರದಾಯಿಕ ಟ್ಯೂನ್ ಆಗಿದೆ.  ಅನುಮತಿಯಿಲ್ಲದೇ ಯಾವ ರೀತಿ ಆ ಹಾಡನ್ನು ತೆಗೆದುಕೊಳ್ಳುತ್ತೀರಾ ಎಂದು ಎ.ಆರ್‍.ರೆಹಮಾನ್ ರವರಿಗೆ ವಸೀಪುದ್ದೀನ್ ಪತ್ರ ಸಹ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಈ ವಿವಾದ ಎಲ್ಲಿ ಅಂತ್ಯವಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top