Film News

ತೆಲುಗು ಸ್ಟಾರ್ ನಟನ ಮಗಳೊಂದಿಗೆ ಮೆಗಾ ಪ್ರಿನ್ಸ್ ವರುಣ್ ತೇಜ್ ಮದುವೆಯಂತೆ, ವೈರಲ್ ಆದ ಕ್ರೇಜಿ ನ್ಯೂಸ್….!

ಸಿನಿಮಾ ಸೆಲೆಬ್ರೆಟಿಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿ ಹೊರಬಂದರೂ ಕಡಿಮೆ ಸಮಯದಲ್ಲೇ ಎಲ್ಲಾ ಕಡೆ ಬಿರುಗಾಳಿಯಂತೆ ಹರಿದಾಡುತ್ತದೆ. ಈ ಹಾದಿಯಲ್ಲೇ ಮೆಗಾ ಕುಟುಂಬದ ಪ್ರಿನ್ಸ್ ವರುಣ್ ತೇಜ್ ರವರ ಮದುವೆ ವಿಚಾರವೊಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸ್ಟಾರ್‍ ನಟರೊಬ್ಬರ ಮಗಳನ್ನು ವರುಣ್ ತೇಜ್ ವಿವಾಹವಾಗಲಿದ್ದಾರೆ ಎಂಬ ಸುದ್ದಿ ವೈರಲ್ ಆಗುತ್ತಿದ್ದು, ಇದು ಎಷ್ಟರ ಮಟ್ಟಿಗೆ ನಿಜ ಅಥವಾ ಸುಳ್ಳು ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ.

ತೆಲುಗು ಸಿನಿರಂಗದಲ್ಲಿ ಇತ್ತೀಚಿಗೆ ಮದುವೆಗಳು ಭರ್ಜರಿಯಾಗಿ ನಡೆಯುತ್ತಿವೆ. ಅನೇಕ ಸ್ಟಾರ್‍ ಗಳು ಈಗಾಗಲೇ ಹಸಮಣೆ ಏರುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ನಿಖಿಲ್, ನಿತಿನ್ ಸೇರಿದಂತೆ ಯಂಗ್ ಹಿರೋ ನಾಗಶೌರ್ಯ ಸಹ ಮದುವೆಯಾದರು. ಇನ್ನೂ ಸಿನಿರಂಗದಲ್ಲಿ ಅನೇಕ ಸ್ಟಾರ್‍ ಗಳ ಮದುವೆಗಳು ನಡೆಯಬೇಕಿದೆ. ಮದುವೆಯಾಗದ ನಟರಲ್ಲಿ ಮೋಸ್ಟ್ ಎಲಿಜಿಬಲ್ ಬ್ಯಾಚಲರ್‍ ವರುಣ್ ತೇಜ್ ಸಹ ಒಬ್ಬರಾಗಿದ್ದಾರೆ. ಇದೀಗ ವರುಣ್ ತೇಜ್ ಶೀಘ್ರದಲ್ಲೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಅನೇಕ ಬಾರಿ ವರುಣ್ ತೇಜ್ ಮದುವೆಯ ಬಗ್ಗೆ ಅನೇಕ ಸುದ್ದಿಗಳು ಹರಿದಾಡಿತ್ತು. ನಟಿ ಲಾವಣ್ಯ ತ್ರಿಪಾಠಿ ಜೊತೆಗೆ ಸಹ ಅಫೈರ್‍ ನಡೆಯುತ್ತಿದೆ ಎಂದು ಸಹ ರೂಮರ್‍ ಗಳು ಕೇಳಿಬರುತ್ತಿತ್ತು. ಇದೀಗ ಮತ್ತೊಂದು ಸುದ್ದಿ ಕೇಳಿಬರುತ್ತಿದೆ.

ಇನ್ನೂ ನಾಗಬಾಬು ಪುತ್ರ ವರುಣ್ ತೇಜ್ ಗೆ ಮದುವೆ ಮಾಡಲು ಕುಟುಂಬಸ್ಥರು ಸಹ ಪ್ರಯತ್ನಗಳನ್ನು ನಡೆಸುತ್ತಿದ್ದಾರಂತೆ. ಅನೇಕ ಕಡೆ ಸಂಬಂಧಗಳನ್ನು ಸಹ ನೋಡಿದ್ದರಂತೆ. ಆದರೆ ನಾಗಬಾಬು ತಮ್ಮ ಕುಟುಂಬಕ್ಕೆ ಹತ್ತಿರದವರ ಕುಟುಂಬದಿಂದ ಸೊಸೆಯನ್ನು ಕರೆತರಲು ಪ್ಲಾನ್ ಮಾಡಿದ್ದರಂತೆ. ಈ ಹಾದಿಯಲ್ಲೇ ದಗ್ಗುಬಾಟಿ ಕುಟುಂಬದೊಂದಿಗೆ ಸಂಬಂಧ ಬೆಳೆಸಿಕೊಳ್ಳಲಿದ್ದಾರಂಯೆ. ವಿಕ್ಟರಿ ವೆಂಕಟೇಶ್ ರವರ ಕಿರಿಯ ಪುತ್ರಿ ಹಯಾ ವಾಹಿನಿ ಜೊತೆಗೆ ವರುಣ್ ತೇಜ್ ಮದುವೆ ನಡೆಸಲು ಪ್ರಯತ್ನಗಳು ನಡೆಯುತ್ತಿವೆಯಂತೆ. ಇನ್ನೂ ಈಗಾಗಲೇ ವೆಂಕಟೇಶ್ ಹಾಗು ನಾಗಬಾಬು ಸಹ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸದ್ಯ ಈ ಸುದ್ದಿ ಟಾಲಿವುಡ್ ವಲಯದಲ್ಲಿ ದೊಡ್ಡ ಮಟ್ಟದಲ್ಲೇ ಹರಿದಾಡುತ್ತಿದೆ.

ಇನ್ನೂ ಈ ಹಿಂದೆ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ನಡುವೆ ಅಪೈರ್‍ ನಡೆಯುತ್ತಿದೆ ಶೀಘ್ರದಲ್ಲೇ ಮದುವೆ ಮಾಡಿಕೊಳ್ಳಲಿದ್ದಾರೆ ಎಂಬ ರೂಮರ್‍ ಗಳು ಜೋರಾಗಿ ಹರಿದಾಡುತ್ತಿದ್ದ ಸಮಯದಲ್ಲಿ ನಾಗಬಾಬು ವರುಣ್ ತೇಜ್ ಗೆ ಸ್ಟ್ರಾಂಗ್ ವಾರ್ನಿಂಗ್ ಸಹ ಕೊಟ್ಟಿದ್ದರಂತೆ. ಇದೀಗ ವೆಂಕಟೇಶ್ ಮಗಳ ಜೊತೆಗೆ ನಾಗಬಾಬು ಮಗನ ಮದುವೆ ನಡೆಯಲಿದೆ ಎಂಬ ರೂಮರ್‍ ಬಗ್ಗೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

Most Popular

To Top