ಮದುವೆಯಾದ ಬಳಿಕ ಎಮೋಷನಲ್ ಪೋಸ್ಟ್ ಹಂಚಿಕೊಂಡ ಆತಿಯಾ ಶೆಟ್ಟಿ, ನಿಮ್ಮ ಆರ್ಶಿವಾದ ಬೇಕು ಎಂದ ಸ್ಟಾರ್ ಕಿಡ್….!

Follow Us :

ಸುಮಾರು ವರ್ಷಗಳ ಕಾಲ ಪ್ರೇಮ ಪಯಣ ಸಾಗಿಸಿದ ಟೀಂ ಇಂಡಿಯಾ ಆಟಗಾರ ಕೆ.ಎಲ್. ರಾಹುಲ್ ಹಾಗೂ ಬಾಲಿವುಡ್ ಸ್ಟಾರ್‍ ನಟ ಸುನೀಲ್ ಶೆಟ್ಟಿ ಮಗಳಾದ ಆತಿಯಾ ಶೆಟ್ಟಿ ಮದುವೆ ಅದ್ದೂರಿಯಾಗಿ ನೆರವೇರಿದೆ. ಅನೇಕ ಗಣ್ಯರ ಸಮ್ಮುಖದಲ್ಲಿ ಈ ಜೋಡಿ ಮದುವೆ ವೈಭವವಾಗಿ ನೆರವೇರಿದೆ. ಇನ್ನೂ ಮದುವೆಯಾದ ಬಳಿಕ ಆತಿಯಾ ಶೆಟ್ಟಿ ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ. ಆಕೆ ಮದುವೆಯ ಪೊಟೋಗಳೊಂದಿಗೆ ಎಮೋಷನಲ್ ಪೋಸ್ಟ್ ಹಂಚಿಕೊಂಡಿದ್ದಾರೆ.

ನಮ್ಮ ದೇಶದಲ್ಲಿ ಅತ್ಯಂತ ಶ್ರೀಮಂತ ಉದ್ಯಮಗಳಲ್ಲಿ ಕ್ರಿಕೆಟ್ ಹಾಗೂ ಸಿನೆಮಾ ರಂಗಗಳೂ ಸಹ ಸೇರಿದೆ. ಈಗಾಗಲೇ ಕ್ರಿಕೆಟಿಗರು ಹಾಗೂ ಸಿನಿರಂಗದ ಅನೇಕರು ಮದುವೆಯಾಗಿದ್ದಾರೆ. ಅದರಂತೆ ಬಾಲಿವುಡ್ ಸ್ಟಾರ್‍ ನಟ ಸುನೀಲ್ ಶೆಟ್ಟಿ ಪುತ್ರಿ ಆತಿಯಾ ಶೆಟ್ಟಿ ಹಾಗೂ ಖ್ಯಾತ ಕ್ರಿಕೆಟಿಗ ಕೆ.ಎಲ್. ರಾಹುಲ್ ಸುಮಾರು ವರ್ಷಗಳಿಂದ ಪ್ರೇಮ ಪಯಣ ಸಾಗಿಸುತ್ತಿದ್ದರು. ಇವರು ಪ್ರೀತಿಸುತ್ತಿರುವ ವಿಚಾರವನ್ನು ಸಹ ಸೋಷಿಯಲ್ ಮಿಡಿಯಾ ಮೂಲಕವೇ ಬಹಿರಂಗಪಡಿಸಿದ್ದರು. ಇದೀಗ ಸಂಪ್ರದಾಯದಂತೆ ಈ ಜೋಡಿ ಸಪ್ತಪದಿ ತುಳಿದಿದೆ. ಈ ಸಂಬಂಧ ಆತಿಯಾ ಶೆಟ್ಟಿ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ನೂತನ ವಧು ವರರಿಗೆ ಅನೇಕ ಗಣ್ಯರಿಂದ ಶುಭಾಷಯಗಳು ಸುರಿಮಳೆಯಾಗುತ್ತಿದೆ.

ಇನ್ನೂ ಆತಿಯಾ ಶೆಟ್ಟಿ ತನ್ನ ಇನ್ಸ್ಟಾ ಖಾತೆಯಲ್ಲಿ ಎಮೋಷನಲ್ ಪೋಸ್ಟ್ ಮಾಡಿದ್ದಾರೆ. ನಾನು ಹೇಗೆ ಪ್ರೀತಿಸಬೇಕು ಎಂಬುದನ್ನು ಕಲಿಯುತ್ತೇನೆ. ಈ ದಿನ ನಮಗೆ ಅತ್ಯಂತ ಬೆಲೆಬಾಳುವ ಹಾಗೂ ಪ್ರಮುಖ ದಿನವಾಗಿದೆ. ಎಲ್ಲರ ಸಮಕ್ಷಮದಲ್ಲಿ ನಾವು ಒಂದಾಗಿದ್ದೇವೆ ಇದು ನಮ್ಮ ಜೀವನದಲ್ಲಿ ಮರೆಯಲಾಗದಂತಹ ಸಂತೋಷವನ್ನು ನೀಡಿದೆ. ನಿಮ್ಮ ಕೃತಜ್ಞತೆಗಳು, ಪ್ರೀತಿ, ಆರ್ಶಿವಾದ ನಮ್ಮ ಪ್ರಯಾಣದಲ್ಲಿ ಜೊತೆಯಾಗಿ ಇರಬೇಕು ಎಂದು ಪೋಸ್ಟ್ ಮಾಡಿದ್ದಾರೆ. ಇನ್ನೂ ಆಕೆಯ ಪೋಸ್ಟ್ ಗೆ ಟೀಂ ಇಂಡಿಯಾದ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ, ಬಾಲಿವುಡ್ ಸೆಲೆಬ್ರೆಟಿಗಳಾದ ಆಲಿಯಾ ಭಟ್, ಕೃತಿ ಸನನ್, ಕಾರ್ತಿಕ್ ಆರ್ಯನ್, ಅನನ್ಯಾ ಪಾಂಡೆ, ಭೂಮಿ ಪಡ್ನೇಕರ್‍, ಕರಣ್ ಜೋಹರ್‍ ಸೇರಿದಂತೆ ಅನೇಕರು ನವ ದಂಪತಿಗೆ ಶುಭಾಷಯಗಳನ್ನು ಕೋರಿದ್ದಾರೆ.

ಇನ್ನೂ ರಾಹುಲ್ ಹಾಗೂ ಆತಿಯಾ ಮದುವೆ ಸುನೀಲ್ ಶೆಟ್ಟಿಯವರ ಖಂಡಾಲಾ ಫಾರ್ಮ ಹೌಸ್ ನಲ್ಲಿ ಅದ್ದೂರಿಯಾಗಿ ನಡೆಯಿತು. ಈ ಮದುವೆ ಸಮಾರಂಭದಲ್ಲಿ ಸುನೀಲ್ ಶೆಟ್ಟಿ ಹಾಗೂ ರಾಹುಲ್ ಕುಟುಂಬಸ್ಥರು ಭಾಗಿಯಾಗಿದ್ದರು.ಇನ್ನೂ ರಾಹುಲ್ ಹಾಗೂ ಆತಿಯಾ ಸಹ ತುಂಬಾ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆತಿಯಾ ಮದುವೆಯ ಪೊಟೋಗಳನ್ನು ಹಂಚಿಕೊಂಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.