ವರುಣ್ ತೇಜ್ ಬಗ್ಗೆ ಮನಸ್ಸಿನಲ್ಲಿನ ಅಭಿಪ್ರಾಯವನ್ನು ಹೊರಹಾಕಿದ ಲಾವಣ್ಯ ತ್ರಿಪಾಠಿ, ವರುಣ್ ಮೋಸ್ಟ್ ಹ್ಯಾಂಡ್ಸಮ್ ಹಿರೋ ಎಂದ ನಟಿ….!

Follow Us :

ತೆಲುಗು ಸಿನಿರಂಗದ ಮೆಗಾ ಕುಟುಂಬದ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ರವರ ಡೇಟಿಂಗ್ ಬಗ್ಗೆ ರೂಮರ್‍ ಹರಿದಾಡುತಿದೆ. ಸುಮಾರು ದಿನಗಳಿಂದ ಇವರಿಬ್ಬರು ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿದೆ. ಈ ಬಗ್ಗೆ ಅನೇಕ ಬಾರಿ ಈ ಜೋಡಿ ಸ್ಪಷ್ಟನೆ ನೀಡಿದ್ದರೂ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ನಟಿ ಲಾವಣ್ಯ ತ್ರಿಪಾಠಿ ವರುಣ್ ತೇಜ್ ಕುರಿತಂತೆ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಲಾವಣ್ಯ ಹೇಳಿಕೆಗಳು ಇದೀಗ ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಸಿನಿರಂಗದಲ್ಲಿ ಇಂತಹ ರೂಮರ್‍ ಗಳು ಬೇಜಾನ್ ಸುದ್ದಿಯಾಗುತ್ತಿರುತ್ತದೆ. ಮದುವೆ, ಬ್ರೇಕ್ ಅಪ್, ಮರು ಮದುವೆ ಈ ವಿಚಾರಗಳು ಸಿನಿರಂಗದಲ್ಲಿ ಸಾಮಾನ್ಯವಾಗಿರುತ್ತದೆ. ಈ ಹಾದಿಯಲ್ಲೇ ವರುಣ್ ಹಾಗೂ ಲಾವಣ್ಯ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಜೋರಾಗಿಯೇ ಹರಿದಾಡುತ್ತಿದೆ. ಈಗಾಗಲೇ ಅವರಿಬ್ಬರೂ ಸೀಕ್ರೇಟ್ ಆಗಿ ಎಂಗೇಜ್ ಮೆಂಟ್ ಸಹ ಮಾಡಿಕೊಂಡಿದ್ದಾರೆ ಎಂದು ಪ್ರಚಾರ ನಡೆದಿತ್ತು. ಅಷ್ಟೇಅಲ್ಲದೇ ನಿಹಾರಿಕಾ ಮದುವೆಯಲ್ಲಿ ಸಿನಿರಂಗದಿಂದ ಕೇವಲ ಲಾವಣ್ಯ ತ್ರಿಪಾಠಿ ಮಾತ್ರ ಹಾಜರಾಗಿದ್ದರು. ಈ ಕಾರಣದಿಂದ ಈ ಜೋಡಿಯ ಬಗ್ಗೆ ರೂಮರ್‍ ಗಳು ಮತಷ್ಟು ಹೆಚ್ಚಾಗಿತ್ತು. ಇನ್ನೂ ಈ ಬಗ್ಗೆ ಲಾವಣ್ಯ ತ್ರಿಪಾಠಿ ಸಹ ರಿಯಾಕ್ಟ್ ಆಗಿದ್ದರು. ಅದೆಲ್ಲಾ ಸುಳ್ಳು ಸುದ್ದಿಗಳು, ಯಾವುದೇ ಸತ್ಯಾಂಶ ಇಲ್ಲ ಎಂದು ತಿಳಿಸಿದ್ದರು. ಆದರೆ ಇದೀಗ ವರುಣ್ ಬಗ್ಗೆ ತನ್ನ ಕ್ರಷ್ ಬಗ್ಗೆ ಹೊರಹಾಕಿದ್ದಾರೆ. ವರುಣ್ ಮೋಸ್ಟ್ ಹ್ಯಾಂಡ್ಸಮ್ ಎಂದು ಹೇಳಿದ್ದು ಇದೀಗ ಮತ್ತೊಮ್ಮೆ ರೂಮರ್‍ ಹುಟ್ಟಿಕೊಂಡಿದೆ ಎನ್ನಬಹುದು.

ಲಾವಣ್ಯ ತ್ರಿಪಾಠಿ ಆಂಕರ್‍ ಸುಮಾ ಹೋಸ್ಟ್ ಮಾಡುವ ಸುಮಾ ಅಡ್ಡಾ ಎಂಬ ಟಾಕ್ ಶೋ ನಲ್ಲಿ ಭಾಗಿಯಾಗಿದ್ದರು. ಈ ಶೋ ನಲ್ಲೇ ಲಾವಣ್ಯ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಶೋನಲ್ಲಿ ಲಾವಣ್ಯ ರನ್ನು ಆಂಕರ್‍ ಸುಮಾ ಪ್ರಶ್ನೆ ಮಾಡಿದ್ದಾರೆ. ಮೋಸ್ಟ್ ಹ್ಯಾಂಡ್ಸಮ್ ಹಿರೋ ಯಾರು ಎಂದು ಕೇಳಿದ್ದಾರೆ. ಇದಕ್ಕೆ ಎರಡು ಆಪ್ಷನ್ ಸಹ ನೀಡಿದ್ದಾರೆ. ನಾನಿ ಅಥವಾ ವರುಣ್ ತೇಜ್ ಇಬ್ಬರಲ್ಲಿ ಯಾರು ಹ್ಯಾಂಡ್ಸಮ್ ಹೇಳು ಎಂದು ಲಾವಣ್ಯರನ್ನು ಕೇಳಿದ್ದಾರೆ ಸುಮಾ. ಅದಕ್ಕೆ ಕೂಡಲೇ ಉತ್ತರಿಸಿದ ಲಾವಣ್ಯ ವರುಣ್ ತೇಜ್, ವರುಣ್ ತೇಜ್ ಮೋಸ್ಟ್ ಹ್ಯಾಂಡ್ಸಮ್ ಹಿರೋ ಎಂದು ಹೇಳಿದ್ದಾರೆ. ಇನ್ನೂಲಾವಣ್ಯ ತನ್ನ ಮನಸ್ಸಿನಲ್ಲಿನ ವಿಚಾರವನ್ನು ಹೊರಹಾಕಿದ್ದಾರೆ. ಲಾವಣ್ಯ ಹಾಗೂ ವರುಣ್ ತೇಜ್ ನಡುವೆ ಲವ್ ಟ್ರಾ ಕ್ ನಡೆಯುತ್ತಿದೆ. ಈ ಕಾರಣದಿಂದಲೇ ಲಾವಣ್ಯ ಈ ಉತ್ತರ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ಇನ್ನೂ ಸುಮಾರು ದಿನಗಳಿಂದ ವರುಣ್ ಹಾಗೂ ಲಾವಣ್ಯ ತ್ರಿಪಾಠಿ ನಡುವೆ ಅಫೈರ್‍ ನಡೆಯುತ್ತಿದೆ ಎಂದು ರೂಮರ್‍ ಗಳು ಕೇಳಿಬರುತ್ತಿವೆ. ಅವರಿಬ್ಬರೂ ಮಿಸ್ಟರ್‍ ಹಾಗೂ ಅಂತರಿಕ್ಷಂ ಎಂಬ ಸಿನೆಮಾದಲ್ಲಿ ನಟಿಸಿದ್ದರು. ಈ ಎರಡೂ ಸಿನೆಮಾಗಳು ಅಂದುಕೊಂಡಷ್ಟು ಸಕ್ಸಸ್ ಕಾಣದೇ ಇದ್ದರೂ ಅವರ ನಡುವೆ ಪ್ರೀತಿ ಹುಟ್ಟಿದೆ ಎಂಬ ರೂಮರ್‍ ಗಳು ಹುಟ್ಟಿಕೊಂಡವು. ಇನ್ನೂ ವರುಣ್ ತೇಜ್ ತಂದೆ ನಾಗಬಾಬು ಸಹ ಶೀಘ್ರದಲ್ಲೇ ವರುಣ್ ತೇಜ್ ಮದುವೆ ನಡೆಯಲಿದೆ ಎಂದು ಹೇಳಿದ್ದಾರೆ.