ಸ್ಟಾರ್ ನಟಿ ಅನುಷ್ಕಾ ಶೆಟ್ಟಿ ಗೆಟಪ್ ನೋಡಿ ಶಾಕ್ ಆದ ನೆಟ್ಟಿಗರು, ತುಂಬಾ ದಪ್ಪವಾಗಿರುವ ಗೆಟಪ್ ನಲ್ಲಿ ಕಾಣಿಸಿಕೊಂಡ ದೇವಸೇನ…!

ಇತ್ತೀಚಿಗೆ ಅನೇಕ ನಟಿಯರು ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿರುತ್ತಾರೆ. ಆದರೆ ಕೆಲವು ನಟಿಯರು ಸೋಷಿಯಲ್ ಮಿಡಿಯಾದ ಕಡೆ ಹೆಚ್ಚು ಗಮನ ಹರಿಸುವುದಿಲ್ಲ. ಈ ಸಾಲಿಗೆ ಸ್ಟಾರ್‍ ನಟಿ ಅನುಷ್ಕಾಶೆಟ್ಟಿ ಸಹ ಸೇರುತ್ತಾರೆ. ಇನ್ನೂ ಅನುಷ್ಕಾ ದೊಡ್ಡ ಪರದೆಯ ಮೇಲೆ ಕಾಣಿಸಿಕೊಂಡು ಸುಮಾರು ತಿಂಗಳುಗಳೇ ಕಳೆದಿದೆ. ಕೊನೆಯದಾಗಿ ಆಕೆ ನಿಶ್ಯಬ್ದಂ ಎಂಬ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಮಹಾಶಿವರಾತ್ರಿ ಹಬ್ಬದ ಸಮಯದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದು, ಆಕೆಯ ಗೆಟಪ್ ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದ್ಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸೌತ್ ಸಿನಿರಂಗದಲ್ಲಿ ಸೂಪರ್‍ ಸ್ಟಾರ್‍ ಆಗಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಈಕೆ ಸಿನಿಮಾಗಳಲ್ಲಿ ಕಾಣಿಸಿಕೊಂಡು ಸುಮಾರು ತಿಂಗಳುಗಳೇ ಕಳೆದಿದೆ. ಬಾಹುಬಲಿ ಸೀರಿಸ್ ಬಳಿಕ ಅನುಷ್ಕಾ ಭಾಗಮತಿ, ನಿಶ್ಯಬ್ದಂ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನೂ ಇತ್ತೀಚಿಗೆ ಆಕೆ ದಪ್ಪ ಆಗಿದ್ದಾರೆ. ಈ ಕಾರಣದಿಂದ ಆಕೆ ಸಿನೆಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿಲ್ಲ ಎಂದೂ ಸಹ ಹೇಳಲಾಗುತ್ತಿದೆ. ಇದೀಗ ಅನುಷ್ಕಾಶೆಟ್ಟಿ ಯುವಿ ಕ್ರಿಯೇಷನ್ ಬ್ಯಾನರ್‍ ನಟಿ ಯಂಗ್ ಹಿರೋ ನವೀನ್ ಪೊಲಿಶೆಟ್ಟಿ ಜೊತೆ ಸಿನೆಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಇತ್ತಿಚಿಗಷ್ಟೆ ಈ ಸಿನೆಮಾದ ಪೋಸ್ಟರ್‍ ಸಹ ಬಿಡುಗಡೆಯಾಗಿತ್ತು. ಈ ಸಿನೆಮಾದಲ್ಲಿ ಅನುಷ್ಕಾ ಛೆಫ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನೂ ಅನುಷ್ಕಾ ಹೆಚ್ಚಾಗಿ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವುದಿಲ್ಲ. ಜೊತೆಗೆ ಹೊರಗಡೆ ಸಹ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಅಭಿಮಾನಿಗಳ ಮುಂದೆ ಬಂದು ಸುಮಾರು ತಿಂಗಳುಗಳೇ ಕಳೆದಿದೆ.

ಇನ್ನೂ ನಟಿ ಅನುಷ್ಕಾ ಮಹಾಶಿವರಾತ್ರಿ ಅಂಗವಾಗಿ ಬೆಂಗಳೂರಿನ ಶಿವನ ದೇವಾಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಿರುವ ಅನುಷ್ಕಾ ರನ್ನು ನೋಡಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸುಮಾರು ದಿನಗಳ ಬಳಿಕ ಅನುಷ್ಕಾ ರವರನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅನುಷ್ಕಾ ತುಂಬಾ ದಪ್ಪ ಆಗಿದ್ದಾರೆ. ಟ್ರೆಡಿಷನಲ್ ವೈಟ್ ಚೂಡಿದಾರ್‍ ನಲ್ಲಿ ಭಕ್ತಿ ಶ್ರದ್ದೆಯಿಂದ ಕಾಣಿಸಿಕೊಂಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು, ವಿಡಿಯೋಗಳು ಸೊಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ಇನ್ನೂ ಅನುಷ್ಕಾ ಸೌಂದರ್ಯ ಕೊಂಚ ಕೂಡ ಕಡಿಮೆಯಾಗಿಲ್ಲ. ಆದರೆ ಆಕೆ ದಪ್ಪವಾಗಿದ್ದಾರೆ.

ಇನ್ನೂ ಅನುಷ್ಕಾ ಬಾಹುಬಲಿ ಸಿನೆಮಾದ ಬಳಿಕ ದೇಹದ ತೂಕ ಹೆಚ್ಚಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಇದಕ್ಕಾಗಿ ಆಕೆ ವಿದೇಶದಲ್ಲಿ ಚಿಕಿತ್ಸೆ ಕೂಡ ಪಡೆದುಕೊಂಡರು ಎಂದು ಹೇಳಲಾಗಿತ್ತು. ಇದೀಗ ಸುಮಾರು ದಿನಗಳ ಬಳಿಕ ಅನುಷ್ಕಾ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿದ್ದು ಆಕೆಯ ಅಭಿಮಾನಿಗಳು ಖುಷಿಯಾಗಿದ್ದಾರೆ. ಇನ್ನೂ ಆಕೆಯನ್ನು ದೊಡ್ಡ ಪರದೆಯ ಮೇಲೆ ನೋಡಲು ಅಭಿಮಾನಿಗಳು ಕಾದು ಕುಳಿತಿದ್ದಾರೆ.