Film News

ಮೊದಲ ಬ್ರೇಕಪ್ ಬಗ್ಗೆ ವಿಚಾರ ಹಂಚಿಕೊಂಡ ಹನ್ಸಿಕಾ, ನಾನು ಅಂತವಳಲ್ಲ ಎಂದು ಶಾಕಿಂಗ್ ಕಾಮೆಂಟ್ಸ್ ವೈರಲ್…!

ಮೊದಲನೇ ಸಿನೆಮಾದ ಮೂಲಕವೇ ದೊಡ್ಡ ಕ್ರೇಜ್ ದಕ್ಕಿಸಿಕೊಂಡ ಟಾಪ್ ನಟಿಯರ ಸಾಲಿಗೆ ಹನ್ಸಿಕಾ ಮೊಟ್ವಾನಿ ಸಹ ಸೇರುತ್ತಾರೆ. ಅಭಿನಯ, ಗ್ಲಾಮರ್‍ ನೊಂದಿಗೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಂಡ ಈಕೆ ಸ್ಟಾರ್‍ ನಟರ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ. ಇನ್ನೂ ಇತ್ತಿಚಿಗೆ ಹನ್ಸಿಕಾ ಆಂಗ್ಲ ಮಾದ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಆಕೆ ತನ್ನ ಮೊದಲ ಪ್ರೀತಿ, ಬ್ರೇಕಪ್ ಕುರಿತಂತೆ ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾರೆ.

ನಟಿ ಹನ್ಸಿಕಾ ಮೊಟ್ವಾನಿ ಹವಾ ಎಂಬ ಹಿಂದಿ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಬಳಿಕ ಸಾಲು ಸಾಲು ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡರು. ಅದರಲ್ಲೂ ಆಕೆ ದೇಶಮುದುರು ಎಂಬ ತೆಲುಗು ಸಿನೆಮಾದ ಮೂಲಕ ತೆಲುಗು ಸಿನಿರಂಗದಲ್ಲಿ ಆಪಲ್ ಬ್ಯೂಟಿ ಎಂದೇ ಫೇಮಸ್ ಆದರು. ಅಂದಿನಿಂದ ಆಕೆಯ ಹವಾ ಶುರುವಾಯಿತು ಎಂದೇ ಹೇಳಬಹುದಾಗಿದೆ. ಅಂದಿನಿಂದ ಇಲ್ಲಿಯವರೆಗೂ ಆಕೆಯ ಕ್ರೇಜ್ ಕಡಿಮೆಯಾಗಿಲ್ಲ ಎನ್ನಬಹುದಾಗಿದೆ. ತೆಲುಗು ಸಿನಿರಂಗದ ಸ್ಟಾರ್‍ ನಟರಾದ ಎನ್.ಟಿ.ಆರ್‍, ಅಲ್ಲು ಅರ್ಜುನ್, ರವಿತೇಜ, ನಿತಿನ್ ಸೇರಿದಂತೆ ಅನೇಕ ನಟರೊಂದಿಗೆ ನಟಿಸಿ ಸ್ಟಾರ್‍ ನಟಿಯಾಗಿ ಮುನ್ನುಗ್ಗುತ್ತಿದ್ದಾರೆ. ಇನ್ನೂ ಸಿನಿರಂಗದಲ್ಲಿ ಅವಕಾಶಗಳು ಕಡಿಮೆಯಾಗುತ್ತಿದ್ದಂತೆ ವೆಬ್ ಸೀರಿಸ್ ಗಳಲ್ಲೂ ಬ್ಯುಸಿಯಾದರು. ಇನ್ನೂ ಕಳೆದ ವರ್ಷವಷ್ಟೆ ಆಕೆ ತನ್ನ ಬ್ಯುಸಿನೆಸ್ ಪಾರ್ಟನರ್‍ ಸೊಹೈಲ್ ರನ್ನು ಮದುವೆಯಾದರು. ಡಿಸೆಂಬರ್‍ 4, 2022 ರಂದು ಜೈಪುರದ ಪ್ಯಾಲೆಸ್ ನಲ್ಲಿ ಅದ್ದೂರಿಯಾಗಿ ಸೊಹೈಲ್ ರನ್ನು ಮದುವೆಯಾದರು.

ಇನ್ನೂ ಹನ್ಸಿಕಾ ಹಾಗೂ ಸೊಹೈಲ್ ಮದುವೆಯ ವಿಡಿಯೋ ಲವ್ ಷಾದಿ ಡ್ರಾಮಾ ಎಂಬ ಟೈಟಲ್ ನಡಿ ಡಿಸ್ನಿ ಪ್ಲಸ್ ಹಾಟ್ ಸ್ಟಾರ್‍ ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ಈ ಹಾದಿಯಲ್ಲೇ ಆಕೆ ಆಂಗ್ರ ಮಾದ್ಯಮವೊಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಆಕೆ ತನ್ನ ಮೊದಲ ಪ್ರೀತಿ, ಬ್ರೇಕಪ್ ಹಾಗೂ ಸೊಹೈಲ್ ಜೊತೆಗೆ ಮದುವೆ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ಹಿಂದೆ ಹನ್ಸಿಕಾ ಹಾಗೂ ಶಿಂಬು ಪ್ರೇಮ ವಿಚಾರ ಕೇಳಿಬಂದಿತ್ತು. ಇದೀಗ ತನ್ನ ಬ್ರೇಕಪ್ ಬಗ್ಗೆ ಮಾತನಾಡಿದ್ದಾರೆ. ನನಗೆ ಸುಮಾರು ವರ್ಷಗಳು ಬೇಕಾಯಿತು, ಬೇರೊಬ್ಬರಿಗೆ ಒಪ್ಪಿಗೆ ನೀಡಲು. ಬ್ರೇಕಪ್ ಬಳಿಕ ನಾನು ಹೊಸ ವ್ಯಕ್ತಿಯ ಪ್ರೀತಿಯನ್ನು ಒಪ್ಪಿಕೊಳ್ಳಲು ಏಳೆಂಟು ವರ್ಷಗಳು ಬೇಕಾಗಿತ್ತು. ನನಗೆ ಪ್ರೀತಿಯ ಮೇಲೆ ನಂಬಿಕೆ ಇದೆ. ಆದರೆ ನಾನು ರೊಮ್ಯಾಂಟಿಕ್ ವ್ಯಕ್ತಿಯಲ್ಲ. ಮನಸ್ಸಿನಲ್ಲಿನ ಭಾವನೆಗಳನ್ನು ಬೇಗ ಹೊರಹಾಕುವುದಿಲ್ಲ. ನನ್ನ ಭವಿಷ್ಯತ್ತಿನಲ್ಲಿ ಇರುವಂತಹ ವ್ಯಕ್ತಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳಲು ತುಂಬಾನೆ ಸಮಯ ತೆಗೆದುಕೊಂಡೆ ಎಂದು ಹೇಳಿದ್ದಾರೆ.

ಇನ್ನೂ ಸೊಹೈಲ್ ಬಗ್ಗೆ ಸಹ ಹನ್ಸಿಕಾ ಹೇಳಿದ್ದಾರೆ. ನಾನು ಸೊಹೈಲ್ ‌ಪ್ರೀತಿಯನ್ನು ತುಂಬಾನೆ ನಂಬುತ್ತೇನೆ. ಸೊಹೈಲ್ ನನ್ನ ಪ್ರೀತಿಗಾಗಿ ಅನೇಕ ವರ್ಷಗಳು ಎದುರು ನೋಡಿದರು. ಆ ದೇವರು ನಮಗೆ ಹೊಸ ದಾರಿ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಇನ್ನೂ ಹನ್ಸಿಕಾ ನೀಡಿದ ಈ ಹೇಳಿಕೆಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

Most Popular

To Top