ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮಕ್ಕೆ ಸಮಯ ಫಿಕ್ಸ್, ವರುಣ್ ಲಾವಣ್ಯ ಮದುವೆ ಮೂಹೂರ್ತ ಫಿಕ್ಸ್, ಎಲ್ಲಿ ಯಾವಾಗ ಗೊತ್ತಾ?

Follow Us :

ಸುಮಾರು ವರ್ಷಗಳ ಕಾಲ ಪ್ರೀತಿಸಿ ಕಳೆದ ಜೂನ್ 9 ರಂದು ನಿಶ್ಚಿತಾರ್ಥ ಮಾಡಿಕೊಂಡ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ಶೀಘ್ರದಲ್ಲೇ ನೆರವೇರಲಿದೆ. ಅನೇಕ ವರ್ಷಗಳ ಕಾಲ ಸೀಕ್ರೇಟ್ ಆಗಿ ಪ್ರೇಮಾಯಣ ನಡೆಸಿದ ಲಾವಣ್ಯ ಹಾಗೂ ವರುಣ್ ತೇಜ್ ರವರ ಬಳಿ ತಮ್ಮ ಪ್ರೀತಿಯ ಬಗ್ಗೆ ಅನೇಕ ಬಾರಿ ಕೇಳಿದರೂ ಎಲ್ಲವೂ ರೂಮರ್‍ ಗಳು ಎಂದು ಹೇಳುತ್ತಿದ್ದರು. ಇದೀಗ ಅವರು ನಿಶ್ಚಿತಾರ್ಥ ಸಹ ನೆರವೇರಿದ್ದು, ಇದೀಗ ಮದುವೆ ದಿನಾಂಕ, ಸ್ಥಳ ನಿಗಧಿಯಾಗಿದೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ.

ಮೆಗಾ ಕುಟುಂಬದಲ್ಲಿ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ರವರು ಶೀಘ್ರದಲ್ಲೇ ಸಪ್ತಪದಿ ತುಳಿಯುವ ಮೂಲಕ ಒಂದಾಗಲಿದ್ದಾರೆ. ಕಳೆದ ಜೂನ್ ಮಾಹೆಯಲ್ಲಿ ಅವರ ನಿಶ್ಚಿತಾರ್ಥ ಸಹ ಅದ್ದೂರಿಯಾಗಿ ಕುಟುಂಬಸ್ಥರು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ಅದ್ದೂರಿಯಾಗಿ ನಡೆಯಿತು. ಇನ್ನೂ ಈ ನಿಶ್ಚಿತಾರ್ಥ ನಡೆದು ಒಂದು ತಿಂಗಳು ಕಳೆದಿದ್ದು, ಮದುವೆ ಯಾವಾಗ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಅಭಿಮಾನಿಗಳು ಕಾತುರದಿಂದ ಕಾಯತ್ತಿರುವ ಅವರ ಮದುವೆ ದಿನಾಂಕ ಹಾಗೂ ಸ್ಥಳ ಫಿಕ್ಸ್ ಆಗಿದೆ ಎಂಬ ಸುದ್ದಿಯೊಂದು ಕೇಳಿಬರುತ್ತಿದೆ. ನಿಹಾರಿಕಾ ವಿಚ್ಚೇದನ ಕಾರಣದಿಂದ ಮೂಹೂರ್ತ ನಿಗಧಿ ತಡವಾಗಿತ್ತು ಎಂದು ಹೇಳಾಗುತ್ತಿತ್ತು. ಇದೀಗ ಮದುವೆಯ ಡೇಟ್, ವೆನ್ಯೂ ಫಿಕ್ಸ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿದೆ.

ಇನ್ನೂ ಸಿನಿವಲಯದಲ್ಲಿ ಕೇಳಿಬರುತ್ತಿರುವ ಸುದ್ದಿಯಂತೆ ವರುಣ್ ತೇಜ್ ಹಾಗೂ ಲಾವಣ್ಯ ಮದುವೆ ಆಗಸ್ಟ್ 24 ರಂದು ಇಟಲಿಯಲ್ಲಿ ನಡೆಯಲಿದೆಯಂತೆ. ಈ ಮದುವೆ ಡೆಸ್ಟಿನೇಷನ್ ವೆಡ್ಡಿಂಗ್ ಎಂಬಂತೆ ನಡೆಯಲಿದೆಯಂತೆ. ಈ ಮದುವೆ ಸಂಭ್ರಮದಲ್ಲೂ ಸಹ ಮೆಗಾ ಕುಟುಂಬ, ಅಲ್ಲು ಕುಟುಂಬ ಸೇರಿದಂತೆ ತುಂಬಾ ಕ್ಲೋಜ್ ಫ್ರೇಂಡ್ಸ್ ಮಾತ್ರ ಹಾಜರಾಗಲಿದ್ದಾರಂತೆ. ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ಮಾತ್ರ ಗೊತ್ತಿಲ್ಲ ಆದರೆ ಸುದ್ದಿ ಮಾತ್ರ ಬಿರುಗಾಳಿಯಂತೆ ಹರಿದಾಡುತ್ತಿದೆ. ಇನ್ನೂ ಈ ಬಗ್ಗೆ ಮೆಗಾ ಕುಟುಂಬ ಯಾವ ರೀತಿಯಲ್ಲಿ ರಿಯಾಕ್ಟ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನೂ ವರುಣ್ ಹಾಗೂ ಲಾವಣ್ಯ ಮಿಸ್ಟರ್‍ ಎಂಬ ಸಿನೆಮಾದ ಸಮಯದಲ್ಲೇ ಅವರಿಬ್ಬರ ನಡುವೆ ಪ್ರೇಮಾಂಕುರ ಏರ್ಪಟ್ಟಿತ್ತಂತೆ. ಸುಮಾರು ವರ್ಷಗಳ ಕಾಲ ಸೀಕ್ರೇಟ್ ಆಗಿ ಪ್ರೇಮ ಪಯಣ ಸಾಗಿಸಿದ್ದರು. ಮಿಸ್ಟರ್‍ ಸಿನೆಮಾ ಶೂಟಿಂಗ್ ಗಾಗಿ ಇಟಲಿಗೆ ಹೋದಾಗ ಅವರಿಬ್ಬರ ನಡುವೆ ಪ್ರೀತಿ ಹುಟ್ಟಿದೆಯಂತೆ. ಈ ಕಾರಣದಿಂದಲೇ ಇಟಲಿಯಲ್ಲೇ ಅವರಿಬ್ಬರು ಮದುವೆಯಾಗಬೇಕೆಂದು ತೀರ್ಮಾನ ಮಾಡಿದ್ದಾರಂತೆ. ಈ ಬಗ್ಗೆ ಮೆಗಾ ಕುಟುಂಬದಿಂದ ಶೀಘ್ರದಲ್ಲೇ ಅಪ್ಡೇಟ್ ಸಹ ಬರಲಿದೆ ಎಂದು ಹೇಳಲಾಗುತ್ತಿದೆ.