Film News

ಥಮನ್ ನೀನು ನನ್ನಲ್ಲಿ ಅರ್ಧ ಭಾಗ ಎಂದ ತಮನ್ನಾ, ವೈರಲ್ ಆದ ಕಾಮೆಂಟ್ಸ್….!

ಸಿನಿರಂಗದ ಸೆಲೆಬ್ರೆಟಿಗಳು ಆಗಾಗ ಅವರು ಮಾಡುವ ಕಾಮೆಂಟ್ಸ್ ಗಳು ಸಖತ್ ವೈರಲ್ ಆಗುತ್ತಿರುತ್ತವೆ ಜೊತೆಗೆ ಕೆಲವೊಂದು ಹೇಳಿಕೆಗಳು ವಿಮರ್ಶೆ, ಚರ್ಚೆಗೆ ಎಡೆ ಮಾಡಿಕೊಡುತ್ತಿರು‌ತ್ತವೆ. ಇದೀಗ ಮಿಲ್ಕಿ ಬ್ಯೂಟಿ ತಮನ್ನಾ ಸಹ ಕೆಲವೊಂದು ಕಾಮೆಂಟ್ಸ್ ಮಾಡಿದ್ದು, ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಮ್ಯೂಜಿಕ್ ಡೈರೆಕ್ಟರ್‍ ತಮನ್ ಬಗ್ಗೆ ತಮನ್ನಾ ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ನೀನು ನನಲ್ಲಿ ಅರ್ಧ ಭಾಗ ಎಂದು ಕಾಮೆಂಟ್ಸ್ ಮಾಡಿದ್ದಾರೆ. ಅದೂ ಎಲ್ಲರ ಮುಂದೆ ತಮನ್ನಾ ಈ ಹೇಳಿಕೆ ಕೊಟ್ಟ ಹಿನ್ನೆಲೆಯಲ್ಲಿ ಮತಷ್ಟು ಸದ್ದು ಮಾಡುತ್ತಿದೆ.

ಸೌತ್ ಸಿನಿರಂಗದಲ್ಲಿ ಸುಮಾರು ವರ್ಷಗಳ ಕಾಲ ಆಳಿದಂತಹ ನಟಿಯರಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಸಹ ಒಬ್ಬರಾಗಿದ್ದಾರೆ. ನೃತ್ಯದ ಮೂಲಕವೇ ಭಾರಿ ಅವಕಾಶಗಳನ್ನು ಪಡೆದುಕೊಂಡು ಬಹುತೇಕ ಎಲ್ಲಾ ನಟರೊಂದಿಗೆ ನಟಿಸಿ ಫೇಂ ಪಡೆದುಕೊಂಡರು. ಇದೀಗ ತಮನ್ನಾ ಭೋಳಾ ಶಂಕರ್‍ ಸಿನೆಮಾದಲ್ಲಿ ನಟಿಸುತ್ತಿದ್ದು, ಈ ಸಿನೆಮಾದಲ್ಲಿ ಆಕೆಯ ಹೆಸರು ಅಂದರೇ ಮಿಲ್ಕಿ ಬ್ಯೂಟಿ ಎಂಬ ಪದವನ್ನಿಟ್ಟು ಹಾಡೊಂದನ್ನು ಕಂಪೋಸ್ ಮಾಡಿದ್ದಾರೆ. ಈ ಹಾಡಿನಲ್ಲಿ ಆಕೆ ಮೆಗಾಸ್ಟಾರ್‍ ಚಿರಂಜೀವಿಯವರ ಜೊತೆಗೆ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ್ದಾರೆ. ಈ ಹಾಡು ಇತ್ತೀಚಿಗಷ್ಟೆ ಬಿಡುಗಡೆಯಾಗಲಿದೆ. ಚಿರು ಹಾಗೂ ಮಿಲ್ಕಿ ಬ್ಯೂಟಿ ತಮನ್ನಾ ಈ ಹಾಡಿನ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ. ಜೊತೆಗೆ ಯೂಟ್ಯೂಬ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಇನ್ನೂ ಈ ಹಾಡನ್ನು ಸ್ಟಾರ್‍ ಮ್ಯೂಸಿಕ್ ಡೈರೆಕ್ಟರ್‍ ಥಮನ್ ಬಿಡುಗಡೆ ಮಾಡಿದ್ದರು. ಈ ಹಾಡಿನ ರಿಲೀಸ್ ನಿಮಿತ್ತ ಏರ್ಪಡಿಸಿದ್ದ ಈವೆಂಟ್ ನಲ್ಲಿ ತಮನ್ನಾ ಮಾತನಾಡುತ್ತಾ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ಸ್ ಮಾಡಿದ್ದಾರೆ. ಇನ್ನೂ ಹಿರೋಯಿನ್ ಆಗಿ ತಮನ್ನಾ ಕೆರಿಯರ್‍ ಆರಂಭಿಸಿದಾಗಲೇ ಆಕೆಯನ್ನು ಮಿಲ್ಕಿ ಬ್ಯೂಟಿ ಎಂದು ಕರೆಯಲಾಗುತ್ತಿತ್ತು. ನನ್ನ ಕಲರ್‍ ನೋಡಿ ಎಲ್ಲರೂ ನನ್ನನ್ನು ಹಾಗೇ ಕರೆಯುತ್ತಿದ್ದರು ಎಂದುಕೊಂಡಿದ್ದೆ. ಆದರೆ ಕೇವಲ ಕಲರ್‍ ನೋಡಿ ಹಾಗೆ ಕರೆದಿಲ್ಲ. ಪ್ರೇಕ್ಷಕರು ನನ್ನ ಮೇಲಿನ ಪ್ರೀತಿಯ ಆ ರೀತಿ ಕರೆಯುತ್ತಾರೆ. ಅದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಆ ಪ್ರೀತಿಯನ್ನು ಇಂದಿಗೂ ಸಹ ಅನುಭವಿಸುತ್ತಿದ್ದೇನೆ. ಅದರಲ್ಲೂ ಚಿರಂಜೀವಿಯವರ ಜೊತೆಗೆ ನಟಿಸಿದ್ದು, ನನ್ನ ಹೆಸರಿನಲ್ಲಿ ಬರೆದ ಹಾಡಿಗೆ ಚಿರುರವರ ಜೊತೆಗೆ ಸ್ಟೆಪ್ಸ್ ಹಾಕಿದ್ದು ತುಂಬಾ ಸಂತೋಷವಾಗಿದೆ ಎಂದು ತಮನ್ನಾ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಮ್ಯೂಜಿಕ್ ಡೈರೆಕ್ಟರ್‍ ಥಮನ್ ರವನ್ನು ಸಹ ಹಾಡಿ ಹೊಗಳಿದ್ದಾರೆ. ತಮನ್ ಗೆ ನಾನು ಪ್ರತಿಸಾರಿ ಥ್ಯಾಂಕ್ಸ್ ಹೇಳುತ್ತೇನೆ. ಆತ ನನಗೆ ಥ್ಯಾಂಕ್ಸ್ ಹೇಳುತ್ತಾನೆ ಏಕೆಂದರೇ ಆತ ನನ್ನಲ್ಲಿ ಅರ್ಧ ನೀನು. ಶೂಟೀಂಗ್ ಸೆಟ್ ನಲ್ಲಿ ಚಿರಂಜೀವಿ ರವರು ನನ್ನನ್ನು ತಮನ್ ತಮನ್ ಎಂದು ಕರೆಯುತ್ತಿರುತ್ತಾರೆ. ಆ ಕಾರಣದಿಂದ ನೀನು ಸಹ ಸೆಟ್ ನಲ್ಲಿದ್ದೀಯಾ ಎಂಬ ಭಾವನೆ ಮೂಡುತ್ತಿರುತ್ತದೆ. ನೀನು ಇಲ್ಲದೇ ಇದ್ದರೇ ಎಲ್ಲರ ಲೈಫ್ ಇನ್ ಕಂಪ್ಲೀಟ್ ಎನ್ನಿಸುತ್ತದೆ, ಅದಕ್ಕೆ ಕಾರಣ ನಿನ್ನ ಹಾಡುಗಳ ಮೂಲಕ ಎಲ್ಲರನ್ನೂ ಪ್ರಭಾವಿತರನ್ನಾಗಿ ಮಾಡುತ್ತೀಯಾ ಎಂದು ತಮನ್ನಾ ಕಾಮೆಂಟ್ಸ್ ಮಾಡಿದ್ದಾರೆ. ಸದ್ಯ ಆಕೆಯ ಕಾಮೆಂಟ್ ಗಳು ಸಖತ್ ವೈರಲ್ ಆಗುತ್ತಿವೆ.

Most Popular

To Top