Film News

ಮೆಗಾ ಕುಟುಂಬದಲ್ಲಿ ಶೀಘ್ರದಲ್ಲೆ ಶುಭಕಾರ್ಯ, ಲಾವಣ್ಯ ವರುಣ್ ತೇಜ್ ಎಂಗೇಜ್ ಮೆಂಟ್ ಫಿಕ್ಸ್ ಅಂತೆ…..!

ಮೆಗಾ ಕುಟುಂಬದ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ರವರ ಡೇಟಿಂಗ್ ಬಗ್ಗೆ ರೂಮರ್‍ ಗಳು ಹರಿದಾಡುತ್ತಲೇ ಇದೆ. ಸುಮಾರು ಕಾಲದಿಂದ ಇವರಿಬ್ಬರು ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿದೆ. ಈ ಬಗ್ಗೆ ಅನೇಕ ಬಾರಿ ಈ ಜೋಡಿ ಸ್ಪಷ್ಟನೆ ನೀಡಿದ್ದರೂ ರೂಮರ್‍ ಗಳು ಮಾತ್ರ ನಿಂತಿಲ್ಲ. ಅನೇಕ ಪಾರ್ಟಿಗಳಲ್ಲಿ ಅವರಿಬ್ಬರು ಜೋಡಿಯಾಗಿ ಕಾಣಿಸಿಕೊಂಡಿದ್ದರು. ಈ ಕಾರಣದಿಂದ ರೂಮರ್‍ ಗಳು ಮತಷ್ಟು ಹರಿದಾಡುತ್ತಿದೆ. ಇದೀಗ ಈ ಜೋಡಿಯ ಎಂಗೇಜ್ ಮೆಂಟ್ ಫಿಕ್ಸ್ ಆಗಿದೆ ಎಂಬ ರೂಮರ್‍ ಒಂದು ಕೇಳಿಬರುತ್ತಿದೆ.

ನಟಿ ಲಾವಣ್ಯ ಹಾಗೂ ವರುಣ್ ಈ ಹಿಂದೆ ಮಿಸ್ಟರ್‍, ಅಂತರಿಕ್ಷಂ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳ ಶೂಟಿಂಗ್ ಸಮಯದಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿತ್ತು. ಜೊತೆಗೆ ಕೆಲವು ವರ್ಷಗಳ ಹಿಂದೆ ನಡೆದ ವರುಣ್ ತಂಗಿ ನಿಹಾರಿಕಾ ಮದುವೆಯಲ್ಲೂ ಲಾವಣ್ಯ ಕಾಣಿಸಿಕೊಂಡಿದ್ದರು. ರಾಜಾಸ್ಥಾನದಲ್ಲಿ ನಿಹಾರಿಕಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮೆಗಾ ಕುಟುಂಬದ ಜೊತೆಗೆ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಾಗಿದ್ದರು. ಸಿನಿರಂಗದ ಅನೇಕ ಪ್ರಮುಖರಿಗೆ ಈ ಮದುವೆ ಸಮಾರಂಭದಲ್ಲಿ ಆಹ್ವಾನ ಇಲ್ಲದೇ ಇದ್ದರೂ ಲಾವಣ್ಯ ಹಾಜರಾಗಿದ್ದು ವರುಣ್ ಲಾವಣ್ಯ ಲವ್ ರೂಮರ್‍ ಗೆ ಮತಷ್ಟು ಬಲ ತಂದಿತ್ತು. ಇದೀಗ ಮತ್ತೊಮ್ಮೆ ಅವರ ಡೇಟಿಂಗ್ ಬಗ್ಗೆ ರೂಮರ್‍ ಗಳು ಹರಿದಾಡುತ್ತಿದ್ದು, ಈ ರೂಮರ್‍ ಗಳು ಅವರು ತಳ್ಳಿಹಾಕುತ್ತಲೇ ಇದ್ದಾರೆ.

ಇದೀಗ ಮತ್ತೊಂದು ರೂಮರ್‍ ಕೇಳಿಬರುತ್ತಿದೆ. ಶೀಘ್ರದಲ್ಲೇ ಮೆಗಾ ಕುಟುಂಬದಲ್ಲಿ ಮದುವೆಯ ಸದ್ದು ಕೇಳಿಬರಲಿದೆಯಂತೆ. ನಟ ವರುಣ್ ತೇಜ್ ಶೀಘ್ರದಲ್ಲೇ ಬ್ಯಾಚಲರ್‍ ಲೈಫ್ ಗೆ ಗುಡ್ ಬೈ ಹೇಳಲಿದ್ದಾರಂತೆ. ಲಾವಣ್ಯ ಹಾಗೂ ವರುಣ್ ತೇಜ್ ನಡುವೆ ನಡೆಯುತ್ತಿರುವ ಡೇಟಿಂಗ್ ರೂಮರ್‍ ಗೆ ಚೆಕ್ ಇಡಲಿದ್ದಾರಂತೆ. ಅಂದರೆ ಇಬ್ಬರೂ ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರಂತೆ. ಮುಂದಿನ ತಿಂಗಳು ಅಂದರೇ ಜೂನ್ ಮಾಹೆಯಲ್ಲಿ ವರುಣ್ ತೇಜ್ ಹಾಗೂ ಲಾವಣ್ಯ ರವರ ಎಂಗೇಜ್ ಮೆಂಟ್ ಆಗಲಿದೆ ಎನ್ನಲಾಗುತ್ತಿದೆ. ಇನ್ನೂ ಈ ಕಾರ್ಯಕ್ರಮದಲ್ಲಿ ಮೆಗಾ ಕುಟುಂಬದ ಅತೀ ಹತ್ತಿರದ ಬಂಧುಗಳ ಸಮ್ಮುಖದಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.

ಇನ್ನೂ ಜೂನ್ ಮಾಹೆಯಲ್ಲಿಯೇ ವರುಣ್ ಹಾಗೂ ಲಾವಣ್ಯ ತಮ್ಮ ರಿಲೇಷನ್ ಶೀಪ್ ಬಗ್ಗೆ ಅಧಿಕೃತವಾಗಿ ಬಹಿರಂಗ ಪಡಿಸಲಿದ್ದಾರಂತೆ. ಇದೇ ವರ್ಷದ ಅಂತ್ಯದಲ್ಲಿ ಅವರ ಮದುವೆ ಸಹ ನಡೆಯಲಿದೆ ಎನ್ನಲಾಗುತ್ತಿದೆ. ಇನ್ನೂ ಈ ರೂಮರ್‍ ನಲ್ಲಿ ಎಷ್ಟು ನಿಜವಿದೆಯೋ ತಿಳಿಯದು ಸುದ್ದಿ ಮಾತ್ರ ವೈರಲ್ ಆಗುತ್ತಿದೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬರಲಿದೆ ಎಂದು ಹೇಳಲಾಗುತ್ತಿದೆ.

Most Popular

To Top