Film News

ರೂಮರ್ ಗಳಿಗೆ ಚೆಕ್ ಇಡುತ್ತಾ ಮದುವೆ ಡೇಟ್ ಅನೌನ್ಸ್ ಮಾಡಿದ ಶರ್ವಾನಂದ್…..!

ತೆಲುಗು ಯಂಗ್ ಹಿರೋ ಶರ್ವಾನಂದ್ ಹಾಗೂ ರಕ್ಷಿತಾರೆಡ್ಡಿ ಎಂಗೇಜ್ ಮೆಂಡ್ ಕಳೆದ ಜನವರಿ 2023 ರಲ್ಲಿ ನಡೆಯಿತು. ಎಂಗೇಜ್ ಮೆಂಟ್ ಆಗಿ ತಿಂಗಳುಗಳು ಕಳೆದರೂ ಸಹ ಇನ್ನೂ ಮದುವೆಯ ಬಗ್ಗೆ ದಿನಾಂಕ ಘೋಷಣೆಯಾಗದೇ ಇರುವುದರಿಂದ ಈ ಜೋಡಿಯ ಎಂಗೇಜ್ ಮೆಂಟ್ ಮುರಿದು ಬಿದಿದ್ದೆ ಎಂಬ ರೂಮರ್‍ ಗಳು ಹರಿದಾಡಿದವು. ಇನ್ನೂ ಈ ರೂಮರ್‍ ಗಳು ಹೆಚ್ಚಾಗುತ್ತಿದ್ದಂತೆ ಎಲ್ಲಾ ರೂಮರ್‍ ಗಳಿಗೆ ಚೆಕ್ ಇಡುವಂತೆ ಶರ್ವಾನಂದ್ ತಮ್ಮ ಮದುವೆ ದಿನಾಂಕವನ್ನು ಘೋಷಣೆ ಮಾಡಿದ್ದಾರೆ.

ಕಳೆದ 2023 ಜನವರಿ ಮಾಹೆಯಲ್ಲಿ ಶರ್ವಾನಂದ್ ಹಾಗೂ ತೆಲಂಗಾಣ ಹೈಕೋರ್ಟ್ ನ್ಯಾಯವಾಧಿ ಮಧುಸೂದನ್ ರೆಡ್ಡಿ ಪುತ್ರಿ ರಕ್ಷಿತಾ ರೆಡ್ಡಿಯ ಜೊತೆಗೆ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿತ್ತು. ಹೈದರಾಬಾದ್ ನಲ್ಲಿ ಅದ್ದೂರಿಯಾಗಿ ಈ ಜೋಡಿಯ ನಿಶ್ಚಿತಾರ್ಥ ನಡೆಯಿತು. ರಕ್ಷಿತಾರೆಡ್ಡಿ ಅಮೇರಿಕಾದಲ್ಲಿ ಸಾಫ್ಟ್ ವೇರ್‍ ಇಂಜನಿಯರ್‍ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ತೆಲುಗು ಸಿನಿರಂಗದ ಸ್ಟಾರ್‍ ಸೆಲೆಬ್ರೆಟಿಗಳಾದ ಮೆಗಾಸ್ಟಾರ್‍ ಚಿರಂಜೀವಿ, ನಾಗಾರ್ಜುನ, ರಾಮಚರಣ್, ಉಪಾಸನಾ, ನಾಗಚೈತನ್ಯ, ಅಖಿಲ್, ಅಮಲಾ, ಸಿದ್ದಾರ್ಥ್, ಅದಿತಿರಾವ್ ಹೈಧರಿ ಸೇರಿದಂತೆ ಅನೇಕ ಸಿನಿರಂಗದ ಗಣ್ಯರು ಆಗಮಿಸಿದ್ದರು. ಇನ್ನೂ ಮದುವೆ ನಿಶ್ಚಿತಾರ್ಥ ನಡೆದು ತಿಂಗಳುಗಳು ಕಳೆದರೂ ಮದುವೆ ಬಗ್ಗೆ ಯಾವುದೇ ಅಪ್ಡೇಟ್ ಸಿಗದ ಕಾರಣದಿಂದ ಅವರ ನಿಶ್ಚಿತಾರ್ಥ ರದ್ದಾಗಿದೆ ಎಂಬ ರೂಮರ್‍ ಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡಿದವು.

ಶರ್ವಾನಂದ್ ಅಂಡ್ ರಕ್ಷಿತಾ ಎಂಗೇಜ್ ಮೆಂಟ್ ನಡೆದು ನಾಲ್ಕು ತಿಂಗಳು ಕಳೆದಿದ್ದು, ಮದುವೆ ಬಗ್ಗೆ ಯಾವುದೇ ಅಪ್ಡೇಟ್ ಇಲ್ಲದ ಕಾರಣ ಅವರಿಬ್ಬರು ಬೇರೆಯಾಗಿದ್ದಾರೆ ಎಂಬ ರೂಮರ್‍ ಹರಿದಾಡಿತ್ತು. ಇದೀಗ ಆ ರೂಮರ್‍ ಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಶರ್ವಾನಂದ್ ಹಾಗೂ ರಕ್ಷಿತಾ ಇಬ್ಬರೂ ಉಂಬಾ ಸಂತೋಷದಿಂದ ಇದ್ದಾರೆ. ಶರ್ವಾನಂದ್ ಗೆ ಸಿನೆಮಾಗಳ ಬ್ಯುಸಿಯಿರುವ ಕಾರಣ ಮದುವೆ ತಡವಾಗಿದೆ ಎಂದು ಹೇಳಲಾಗಿತ್ತು. ಇದೀಗ ತಮ್ಮ ಮದುವೆ ದಿನಾಂಕದ ಬಗ್ಗೆ ಅಪ್ಡೇಟ್ ನೀಡುವ ಮೂಲಕ ಎಲ್ಲಾ ರೂಮರ್‍ ಗಳಿಗೆ ಚೆಕ್ ಇಟ್ಟಿದ್ದಾರೆ. ಇದೇ ಜೂನ್ 3ನೇ ತಾರೀಖಿನಂದು ಶರ್ವಾನಂದ್ ಹಾಗೂ ರಕ್ಷಿತಾ ರೆಡ್ಡಿ ಮದುವೆ ರಾಜಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಲಿದೆ. ರಾಜಸ್ಥಾನದ ಜೈಪೂರ್‍ ದಲ್ಲಿರುವ ಲೀಲಾ ಪ್ಯಾಲೆಸ್ ನಲ್ಲಿ ಜೂನ್ 2, 3 ದಿನಾಂಕಗಳಂದು ಅವರ ಮದುವೆ ತುಂಬಾ ಗ್ರಾಂಡ್ ಆಗಿ ನಡೆಯಲಿದೆ.

ಇನ್ನೂ ಈಗಾಗಲೇ ಮದುವೆ ಕೆಲಸಗಳು ಸಹ ಶುರುವಾಗಿದೆಯಂತೆ. ಲಗ್ನಪತ್ರಿಕೆ ಸಹ ಸಿದ್ದವಾಗಿದೆಯಂತೆ. ಜೂನ್ 2 ರಂದು ಮೆಹಂದಿ, 3 ರಂದು ಶರ್ವಾನಂದ್ ಹಾಗೂ ರಕ್ಷಿತಾ ಸಪ್ತಪದಿ ತುಳಿಯಲಿದ್ದಾರೆ. ಇನ್ನೂ ಈ ಜೋಡಿಯ ಮದುವೆಗೆ ಸಿನೆಮಾ ಸೆಲೆಬ್ರೆಟಿಗಳು ಸೇರಿದಂತೆ ಇಬ್ಬರ ಕುಟುಂಬದವರು ಹಾಗೂ ಬಂಧು ಮಿತ್ರರು ಭಾಗಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಶರ್ವಾನಂದ್ ಹಾಗೂ ರಕ್ಷಿತಾ ನಿಶ್ವಿತಾರ್ಥ ಮುರಿದು ಬಿದಿದ್ದೆ ಎಂಬ ರೂಮರ್‍ ಗೆ ಚೆಕ್ ಇಟ್ಟಂತಾಗಿದೆ.

Most Popular

To Top