Film News

ತಿರುಪತಿಯಲ್ಲೇ ಮದುವೆಯಾಗುತ್ತೇನೆ ಬಿಡಿ ಎಂದ ಪ್ರಭಾಸ್, ಮದುವೆಯ ಬಗ್ಗೆ ಫನ್ನಿ ಕಾಮೆಂಟ್ ಮಾಡಿದ ಪ್ರಭಾಸ್….!

ಬಾಹುಬಲಿ ಸಿನೆಮಾದ ಮೂಲಕ ವರ್ಲ್ಡ್ ವೈಡ್ ಫೇಂ ಪಡೆದುಕೊಂಡ ಯಂಗ್ ರೆಬೆಲ್ ಸ್ಟಾರ್‍ ಪ್ರಭಾಸ್ ರವರ ಮದುವೆಯ ಬಗ್ಗೆ ಆಗಾಗ ಪ್ರಶ್ನೆಗಳು ಕೇಳಿಬರುತ್ತಲೇ ಇದೆ. ಇದೀಗ ಮತ್ತೊಮ್ಮೆ ಪ್ರಭಾಸ್ ಮದುವೆಯ ಬಗ್ಗೆ ಅಭಿಮಾನಿಗಳು ಕೇಳಿದ್ದು ಅದಕ್ಕೆ ಪ್ರಭಾಸ್ ನೀಡಿದ ಉತ್ತರಕ್ಕೆ ಅಭಿಮಾನಿಗಳು ಕುಪ್ಪಳಿಸಿ ನಕ್ಕಿದ್ದಾರೆ. ಈ ಸನ್ನಿವೇಶಗಳು ಇತ್ತಿಚಿಗೆ ನಡೆದ ಆದಿಪುರುಷ್ ಸಿನೆಮಾದ ಪ್ರೀ ರಿಲೀಸ್ ಈವೆಂಟ್ ನಲ್ಲಿ. ತಿರುಪತಿಯಲ್ಲಿ ನಡೆದ ಈ ಪ್ರೀ ರಿಲೀಸ್ ಈವೆಂಟ್ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಪ್ರಭಾಸ್ ಅನೇಕ ವಿಚಾರಗಳನ್ನು ಸಹ ಹಂಚಿಕೊಂಡಿದ್ದಾರೆ.

ಭಾರಿ ಬಜೆಟ್ ನೊಂದಿಗೆ ಸೆಟ್ಟೇರಿದ ಆದಿಪುರುಷ್ ಸಿನೆಮಾ ಇದೇ ಜೂನ್ 16 ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ತೆರೆಕಾಣಲಿದೆ. ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳೂ ಸಹ ಭರದಿಂದ ಸಾಗುತ್ತಿವೆ. ನಿನ್ನೆಯಷ್ಟೆ ಆಧ್ಯಾತ್ಮಿಕ ನಗರ ತಿರುಪತಿಯಲ್ಲಿ ಆದಿಪುರುಷ್ ತಂಡ ಭಾರಿ ಪ್ರಿ ರಿಲೀಸ್ ಈವೆಂಟ್ ಆಯೋಜನೆ ಮಾಡಿತ್ತು. ಈ ವೇಳೆ ಪ್ರಭಾಸ್, ಕೃತಿ ಸನನ್, ಓಂ ರಾವತ್ ಸಹ ಹಾಜರಾಗಿದ್ದರು. ಇನ್ನೂ ಪ್ರಭಾಸ್ ಮಾತುಗಳಿಗಾಗಿ ಫ್ಯಾನ್ಸ್ ಈಗರ್‍ ಆಗಿ ಕಾಯುತ್ತಿದ್ದರು. ಬಳಿಕ ಪ್ರಭಾಸ್ ಜೈ ಶ್ರೀರಾಮ್ ಎಂದು ತನ್ನ ಮಾತುಗಳನ್ನು ಆರಂಭಿಸಿದರು. ಆತ ಮಾತನಾಡುತ್ತಾ ಅನೇಕ ವಿಚಾರಗಳನ್ನು ಹಂಚಿಕೊಂಡರು. ಜೊತೆಗೆ ತಮ್ಮ ಮದುವೆಯ ಬಗ್ಗೆ ಸಹ ಫನ್ನಿಯಾಗಿ ಕಾಮೆಂಟ್ ಮಾಡಿದರು.

ಇನ್ನೂ ಪ್ರಭಾಸ್ ಮಾತನಾಡುತ್ತಾ, ಓಂ ರಾವತ್ ಹಾಗೂ ತಂಡಕ್ಕೆ ಕಳೆದ ಎಂಟು ತಿಂಗಳುಗಳಿಂದ ನಿದ್ದೆಯಿಲ್ಲ. ಓಂ ರಾವತ್ ಒಂದು ಗಂಟೆ ನಿದ್ದೆ ಮಾಡಿ ದೊಡ್ಡ ಯುದ್ದವನ್ನೆ ಮಾಡಿದ್ದಾರೆ. ಆದಿಪುರುಷ್ ಸಿನೆಮಾ ಕೇವಲ ಸಿನೆಮಾ ಅಲ್ಲ ಎಂದಿದ್ದಾರೆ. ಈ ಹಿಂದೆ ಮೆಗಾಸ್ಟಾರ್‍ ಚಿರಂಜೀವಿಯವರೂ ಸಹ ಆಶ್ಚರ್ಯದಿಂದ ಕೇಳಿದರು. ಏನು ರಾಮಾಯಣ ಸಿನೆಮಾ ಮಾಡುತ್ತಿದ್ದೀಯಾ ಎಂದು ಅದಕ್ಕೆ ನಾನು ಹೌದು ಸರ್‍ ಎಂದೆ ಅಂತಹ ಅದೃಷ್ಟ ಯಾರಿಗೂ ಸಿಗುವುದಿಲ್ಲ ಎಂದು ಹೇಳಿದ್ದರು. ಅಭಿಮಾನಿಗಳಿಗಾಗಿ ಓಂ ರಾವತ್ ತುಂಬಾನೆ ಕಷ್ಟಪಟ್ಟಿದ್ದಾರೆ. ಅವರ ಮುಖಗಳನ್ನು ನೋಡಿ ನಿದ್ದೆಯಿಲ್ಲದೇ ಹೇಗಾಗಿದೆ ಎಂದಿದ್ದಾರೆ. ಈ ವೇಳೆ ವೇದಿಕೆಯ ಮುಂಭಾಗದಿಂದ ಮದುವೆ ಮದುವೆ ಎಂದು ಅಭಿಮಾನಿಗಳು ಸದ್ದು ಮಾಡಿದರು. ಪ್ರಭಾಸ್ ಈ ವೇಳೆ ನೀಡಿದ ಉತ್ತರಕ್ಕೆ ಎಲ್ಲರೂ ನಕ್ಕು ನಲಿದರು. ತಿರುಪತಿಯಲ್ಲೇ ಮದುವೆಯಾಗುತ್ತೇನೆ ಬಿಡಿ ಎಂದು ಪ್ರಭಾಸ್ ಹೇಳಿ ಎಲ್ಲರನ್ನೂ ನಗುವಂತೆ ಮಾಡಿದರು.

ಇನ್ನೂ ಕೃತಿ ಸನನ್ ರವರನ್ನು ಸಹ ಪ್ರಭಾಸ್ ಮನಸಾರೆ ಹೊಗಳಿದರು. ಜೊತೆಗೆ ವರ್ಷಕ್ಕೆ ಎರಡು ಸಿನೆಮಾಗಳನ್ನು ಮಾಡುತ್ತೇನೆ. ಇನ್ನೂ ಮುಂದೆ ಕಡಿಮೆ ಮಾತಾಡುತ್ತೇನೆ ಎಂದು ಹೇಳಿದರು. ಕೊನೆಯದಾಗಿ ಜೈ ಶ್ರೀರಾಮ್ ಎಂದು ತಮ್ಮ ಭಾಷಣವನ್ನು ಮುಗಿಸಿದರು. ಒಟ್ಟಿನಲ್ಲಿ ಪ್ರಭಾಸ್ ಯಾವಾಗ ಮದುವೆಯಾಗಲಿದ್ದಾರೆ ಎಂಬುದು ಅಭಿಮಾನಿಗಳಲ್ಲಿ ಕಾಡುತ್ತಲೇ ಇದೆ.

Most Popular

To Top