ಗ್ರಾಂಡ್ ಆಗಿ ಶುರುವಾದ ವರುಣ್ ಲಾವಣ್ಯ ಮದುವೆ, ರಾಯಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡ ಜೋಡಿ, ಪಾರ್ಟಿಯಲ್ಲಿ ಹಲ್ ಚಲ್ ಸೃಷ್ಟಿಸಿದ ಮೆಗಾ ಫ್ಯಾಮಿಲಿ……!

ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದ್ದು, ಮೆಗಾ ಕುಟುಂಬ ಹಾಗೂ ಲಾವಣ್ಯ ಕುಟುಂಬ ಇಟಲಿಯಲ್ಲಿ ಬೀಡು ಬಿಟ್ಟಿದೆ. ನ.1 ರಂದು ಈ ಜೋಡಿಯ ಮದುವೆ ನೆರವೇರಲಿದೆ. ಇದೀಗ ಇಟಲಿಯಲ್ಲಿ ಮದುವೆ ಸಂಭ್ರಮದ ನಿಮಿತ್ತ ಕಾಕ್…

ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ ಶುರುವಾಗಿದ್ದು, ಮೆಗಾ ಕುಟುಂಬ ಹಾಗೂ ಲಾವಣ್ಯ ಕುಟುಂಬ ಇಟಲಿಯಲ್ಲಿ ಬೀಡು ಬಿಟ್ಟಿದೆ. ನ.1 ರಂದು ಈ ಜೋಡಿಯ ಮದುವೆ ನೆರವೇರಲಿದೆ. ಇದೀಗ ಇಟಲಿಯಲ್ಲಿ ಮದುವೆ ಸಂಭ್ರಮದ ನಿಮಿತ್ತ ಕಾಕ್ ಟೈಲ್ ಪಾರ್ಟಿಯನ್ನು ಆಯೋಜಿಸಿದ್ದು, ಈ ಪಾರ್ಟಿಯಲ್ಲಿ ಮೆಗಾ ಫ್ಯಾಮಿಲಿ ಹಲ್ ಚಲ್ ಸೃಷ್ಟಿಸಿದ್ದಾರೆ. ಜೊತೆಗೆ ಲಾವಣ್ಯ ಹಾಗೂ ವರುಣ್ ರಾಯಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.

ಮೆಗಾ ಕುಟುಂಬದ ನಾಗಬಾಬು ರವರ ಪುತ್ರ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ನಡುವೆ ಅನೇಕ ವರ್ಷಗಳ ಕಾಲ ಲವ್ ಟ್ರಾಕ್ ನಡೆದಿದ್ದು, ಕೆಲವು ದಿನಗಳ ಹಿಂದೆಯಷ್ಟೆ ಈ ಜೋಡಿಯ ಎಂಗೇಜ್ ಮೆಂಟ್ ನಡೆದಿತ್ತು. ತಮ್ಮ ಪ್ರೀತಿ ಇಟಲಿಯಲ್ಲಿ ಹುಟ್ಟಿದ ಕಾರಣದಿಂದಾಗಿ ಅಲ್ಲಿಯೇ ಮದುವೆಯಾಗಲು ಸಹ ತೀರ್ಮಾನಿಸಿದ್ದಾರೆ. ನ.1 ರಂದು ಇಟಲಿಯಲ್ಲಿ ಈ ಜೋಡಿಯ ಮದುವೆ ಗ್ರಾಂಡ್ ಆಗಿ ನಡೆಯಲಿದೆ. ಈಗಾಗಲೇ ಮೆಗಾ ಕುಟುಂಬದ ಚಿರಂಜೀವಿ, ಸುರೇಖ, ರಾಮ್ ಚರಣ್, ಉಪಾಸನಾ, ಚಿರಂಜೀವಿ ಪುತ್ರಿಯರು, ಪವನ್ ಕಲ್ಯಾಣ್ ಕುಟುಂಬ, ನಿಹಾರಿಕಾ, ನಾಗಬಾಬು, ಸಾಯಿಧರಮ್ ತೇಜ್, ವೈಷ್ಣವ್ ತೇಜ್, ಅಲ್ಲು ಕುಟುಂಬದಿಂದ ಬನ್ನಿ, ಸ್ನೇಹಾರೆಡ್ಡಿ, ಶಿರಿಷ್, ಬಾಬಿ, ಅಲ್ಲು ಅರವಿಂದ್ ಸೇರಿದಂತೆ ಹಲವರು ಇಟಲಿಯಲ್ಲಿ ಲ್ಯಾಂಡ್ ಆಗಿದ್ದಾರೆ.

ಎರಡು ದಿನಗಳ ಮುಂಚೆಯೇ ಇಟಲಿಯಲ್ಲಿ ಮದುವೆಯ ಸಂಭ್ರಮ ಶುರುವಾಗಿದೆ. ಕಾಕ್ ಟೈಲ್ ಪಾರ್ಟಿಯ ಮೂಲಕ ಮದುವೆ ಸಂಭ್ರಮ ಶುರು ಮಾಡಿದ್ದಾರೆ. ಇದೀಗ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ. ವರುಣ್ ತೇಜ್ ಹಾಗೂ ಲಾವಣ್ಯ ರಾಯಲ್ ಲುಕ್ಸ್ ನಲ್ಲಿ ಕಾಣಿಸಿಕೊಂಡಿದ್ದಾರೆ. ವರುಣ್ ವೈಟ್ ಬ್ಲೇಜರ್‍, ಬ್ಲಾಕ್ ಪ್ಯಾಂಟ್ ಧರಿಸಿದ್ದು, ಲಾವಣ್ಯ ವೈಟ್ ಕಲರ್‍ ಡ್ರೆಸ್ ನಲ್ಲಿ ಮಿಂಚಿದ್ದಾರೆ. ಬ್ಲಾಕ್ ಅಂಡ್ ವೈಟ್ ಡ್ರೆಸ್ ಕಾಂಬಿನೇಷನ್ ಫಾಲೋ ಆಗುತ್ತಿದ್ದಾರೆ. ರಾಮ್ ಚರಣ್ ವೈಟ್ ಶರ್ಟ್ ಬ್ಲಾಕ್ ಪ್ಯಾಂಟ್, ಉಪಾಸನಾ ಬ್ಲಾಕ್ ಧರಿಸಿದ್ದಾರೆ. ಅದೇ ಮಾದರಿಯಲ್ಲಿ ಅಲ್ಲು ಅರ್ಜುನ್ ಸಹ ಬ್ಲಾಕ್ ಡ್ರೆಸ್, ಸ್ನೇಹಾರೆಡ್ಡಿ ವೈಟ್ ಡ್ರೆಸ್ ಧರಿಸಿದ್ದಾರೆ. ಜೊತೆಗೆ ಕಾಕ್ ಟೈಲ್ ಪಾರ್ಟಿಯನ್ನು ಸಹ ಎಂಜಾಯ್ ಮಾಡಿದ್ದಾರೆ.

ಇನ್ನೂ ನ.1 ರಂದು ಮದ್ಯಾಹ್ನ 2.48 ನಿಮಿಷಕ್ಕೆ ವರುಣ್ ಹಾಗೂ ಲಾವಣ್ಯ ಮದುವೆ ನಡೆಯಲಿದೆ. ಮದುವೆಯಲ್ಲಿ ಮೆಗಾ ಕುಟುಂಬದ ಸದಸ್ಯರು, ಲಾವಣ್ಯ ಕುಟುಂಬದ ಸದಸ್ಯರು, ಹತ್ತಿರದ ಸಂಬಂಧಿಗಳು, ಸ್ನೇಹಿತರು ಮಾತ್ರ ಭಾಗಿಯಾಗಲಿದ್ದಾರೆ. ಬಳಿಕ ನ.5 ರಂದು ಹೈದರಾಬಾದ್ ನಲ್ಲಿ ರಿಸೆಪ್ಷನ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಈ ರಿಸೆಪ್ಷನ್ ನಲ್ಲಿ ರಾಜಕೀಯ ಮುಖಂಡರು, ಸಿನೆಮಾ ಸೆಲೆಬ್ರೆಟಿಗಳು ಈ ರಿಸೆಪ್ಷನ್ ನಲ್ಲಿ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ.