ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬುಗೆ ಜಾಮೀನು ಮಂಜೂರು, ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು….!

ಬಹುಕೋಟಿ ಕೌಶಲ್ಯಾಭಿವೃದ್ದಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ರವರನ್ನು ಬಂಧನ ಮಾಡಲಾಗಿತ್ತು. ಇದೀಗ ಆಂಧ್ರಪ್ರದೇಶದ ಹೈಕೋರ್ಟ್ ಚಂದ್ರಬಾಬು ರವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು…

ಬಹುಕೋಟಿ ಕೌಶಲ್ಯಾಭಿವೃದ್ದಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂದ್ರ ಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ರವರನ್ನು ಬಂಧನ ಮಾಡಲಾಗಿತ್ತು. ಇದೀಗ ಆಂಧ್ರಪ್ರದೇಶದ ಹೈಕೋರ್ಟ್ ಚಂದ್ರಬಾಬು ರವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಅಭಿಮಾನಿಗಳು ಸಂಭ್ರಮಾಚರಿಸಿದ್ದಾರೆ.

ಆಂಧ್ರಪ್ರದೇಶದ ಮಾಜಿ ಸಿಎಂ ತೆಲುಗು ದೇಶಂ ಪಾರ್ಟಿಯ ಮುಖ್ಯಸ್ಥ ಚಂದ್ರಬಾಬು ನಾಯ್ಡು ರವರನ್ನು ಬಹುಕೋಟಿ ಕೌಶಲ್ಯಾಭಿವೃದ್ದಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧ ಮಾಡಲಾಗಿತ್ತು. ಚಂದ್ರಬಾಬು ನಾಯ್ಡು ಬಂಧನ ಆಂಧ್ರ ಪ್ರದೇಶದ ರಾಜಕಾರಣದಲ್ಲಿ ಭಾರಿ ಸಂಚಲನ ಸೃಷ್ಟಿ ಮಾಡಿತ್ತು. ಈ ನಡುವೆ ಜನಸೇನಾ ಹಾಗೂ ಟಿಡಿಪಿ ಮೈತ್ರಿಯಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಸಹ ಘೋಷಣೆ ಮಾಡಲಾಯಿತು. ಜೊತೆಗೆ ರಾಜ್ಯದ ಅನೇಕ ಕಡೆ ಚಂದ್ರಬಾಬು ನಾಯ್ಡು ರವರ ಬಂಧನದ ವಿರುದ್ದ ದೊಡ್ಡ ಮಟ್ಟದಲ್ಲೇ ಪ್ರತಿಭಟನೆ ಮಾಡಲಾಗಿತ್ತು.

ಇನ್ನೂ ಕಳೆದ ಅ.18ರಂದು ಜೈಲಿನಲ್ಲಿದ್ದ ಚಂದ್ರಬಾಬು ನಾಯ್ಡು ರವರನ್ನು ಅವರ ಕುಟುಂಬದ ಸದಸ್ಯರು ಹಾಗೂ ಟಿಡಿಪಿ ಮುಖಂಡರು ಭೇಟಿಯಾಗಿದ್ದರು. ಈ ವೇಳೆ ಅವರು ಅನಾರೋಗ್ಯದಿಂದ ಇರುವುದನ್ನು ಕಂಡು ಕಳವಳ ವ್ಯಕ್ತಪಡಿಸಿದ್ದರು. ವೈದ್ಯಕೀಯ ಆರೈಕೆಯ ಅಗತ್ಯವಿರುವ ನಿರ್ದಿಷ್ಟ ಕಾಯಿಲೆಗಳಿಂದ ಬಳಲುತ್ತಿರುವ ಕಾರಣದಿಂದ ಅವರ ಆರೋಗ್ಯ ಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಜಾಮೀನು ನೀಡಲಾಗಿದೆ ಎಂದು ಹೇಳಲಾಗಿದೆ.