News

ದೊಡ್ಡ ಸಂಘರ್ಷ ತಪ್ಪಿಸಿದ ಸರ್ಕಲ್ ಇನ್ ಸ್ಪೆಕ್ಟರ್, ಪಿಡಿಒರನ್ನು ತರಾಟೆಗೆ ತೆಗೆದುಕೊಂಡ ಪೊಲೀಸ್, ವೈರಲ್ ಆದ ವಿಡಿಯೋ…..!

ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಪುಚ್ಚೆ ಮೊಗರು ಎಂಬಲ್ಲಿ ನಡೆದ ಘಟನೆಯ ಸಂಬಂಧ ವಿಡಿಯೋ ಒಂದು ಸೊಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ದೊಡ್ಡ ಮಟ್ಟದಲ್ಲಿ ನಡೆಯಬಹುದಾದ ಧಾರ್ಮಿಕ ಸಂಘರ್ಷವೊಂದನ್ನು ದಿಟ್ಟ ಪೊಲೀಸ್ ಅಧಿಕಾರಿಯೊಬ್ಬರು ತಪ್ಪಿಸಿದ್ದಾರೆ. ಪೊಲೀಸ್ ಅಧಿಕಾರಿಯ ಈ ಕೆಲಸಕ್ಕೆ ಭಾರಿ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

ಇತ್ತೀಚಿಗೆ ಸಣ್ಣ-ಪುಟ್ಟ ವಿಚಾರಗಳಿಂದ ದೊಡ್ಡ ಮಟ್ಟದ ಗಲಭೆ-ದೊಂಬಿಗಳು ನಡೆಯಲು ಕಾರಣವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಪುಚ್ಚೆ ಮೊಗರುಬ ಎಂಬ ಪ್ರದೇಶದಲ್ಲಿ ಹಿಂದೂಗಳ ಧಾರ್ಮಿಕ ಕಟ್ಟೆಯಲ್ಲಿ ಕೆಲ ದುಷ್ಕರ್ಮಿಗಳು ಅಕ್ರಮವಾಗಿ ಮುಸ್ಲೀಂರು ಹಸಿರು ಬಣ್ಣದ ಧ್ವಜ ಹಾಕಿದ್ದಾರೆ. ಈ ಕಾರಣದಿಂದ ಸ್ಥಳಕ್ಕೆ ತೆರಳಿದ ಪೊಲೀಸ್ ಅಧಿಕಾರಿ ಸಂದೇಶ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದಾರೆ. ಧ್ವಜ ತೆರವುಗೊಳಿಸಿ ನಡೆಯಬಹುದಾದ ಸಂಘರ್ಷವನ್ನು ಸರ್ಕಲ್ ಇನ್ಸ್‌ಪೆಕ್ಟರ್‍ ಸಂದೇಶ್ ಕ್ರಮ ವಹಿಸಿದ್ದಾರೆ.

ಹಿಂದೂಗಳ ಧಾರ್ಮಿಕ ಕಟ್ಟೆಯ ಬಳಿ ಹಸಿರು ಧ್ವಜ ಹಾಕಲು ಪಂಚಾಯತಿಯಿಂದ ಅನುಮತಿ ನೀಡಿದ್ದೀರಾ ಎಂದು ಸ್ಥಳೀಯ ಪಿಡಿಒ ಗೂ ಸಹ ಪ್ರಶ್ನೆ ಕೇಳಿದ್ದಾರೆ ಪೊಲೀಸ್ ಅಧಿಕಾರಿ. ಆದರೆ ಅದಕ್ಕೆ ಅನುಮತಿ ಇಲ್ಲ ಎಂದು ಪಿಡಿಒ ಉತ್ತರ ನೀಡಿದ್ದಾರೆ. ಅದರಿಂದ ಆಕ್ರೋಷಗೊಂಡ ಪೊಲೀಸ್ ಇನ್ಸ್‌ಪೆಕ್ಟರ್‍ ಸಂದೇಶ್ ಅನುಮತಿ ಇಲ್ಲದೇ ಧ್ವಜವನ್ನು ಹಾಕಲು ಅನುಮತಿ ನೀಡಿದ್ದಾದರೂ ಏಕೆ ಎಂದು ಪಿಡಿಒ ಮೇಲೆ ಆಕ್ರೋಷಗೊಂಡಿದ್ದಾರೆ. ಬಳಿಕ ಆ ಕಟ್ಟೆಯಿಂದ ಅಕ್ರಮವಾಗಿ ಇಟ್ಟಿದ್ದ ಧ್ವಜವನ್ನು ತೆರವುಗೊಳಿಸಿದ್ದಾರೆ. ಇನ್ನೂ ಇನ್ಸ್ ಪೆಕ್ಟರ್‍ ರವರ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ಸಹ ವ್ಯಕ್ತಪಡಿಸುತ್ತಿದ್ದಾರೆ.

Most Popular

To Top