Film News

ಅದ್ದೂರಿಯಾಗಿ ನಡೆದ ವರುಣ್ ಲಾವಣ್ಯ ಎಂಗೇಜ್ ಮೆಂಟ್, ವೈರಲ್ ಆದ ಪೊಟೋಸ್….!

ಸುಮಾರು ವರ್ಷಗಳಿಂದ ಸಿಕ್ರೇಟ್ ಆಗಿ ಪ್ರೇಮ ಪಯಣ ಸಾಗಿಸುತ್ತಿದ್ದ ಮೆಗಾ ಕುಟುಂಬದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ನಿಶ್ಚಿತಾರ್ಥ ಅದ್ದೂರಿಯಾಗಿ ನೆರವೇರಿದ್ದು, ಅಧಿಕೃತವಾಗಿ ತಮ್ಮ ಸಂಬಂಧದ ಬಗ್ಗೆ ಘೋಷಣೆ ಮಾಡಿಕೊಂಡಿದ್ದಾರೆ. ಮೆಗಾ ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಕಾರ್ಯಕ್ರಮ ನೆರವೇರಿದ್ದು, ಮೆಗಾ ಕುಟುಂಬದ ಸದಸ್ಯರು ಮಿಂಚಿದ್ದಾರೆ. ಇನ್ನೂ ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸುಮಾರು ನಾಲ್ಕೈದು ದಿನಗಳಿಂದ ಮೆಗಾ ಪ್ರಿನ್ಸ್ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಎಂಗೇಜ್ ಮೆಂಟ್ ಬಗ್ಗೆ ಸುದ್ದಿಗಳು ಹರಿದಾಡಿದವು. ಮೊದಲಿಗೆ ಯಾರೂ ಸಹ ಈ ಸುದ್ದಿಯನ್ನು ನಂಬಿರಲಿಲ್ಲ. ಈ ಹಿಂದೆ ಅನೇಕ ಬಾರಿ ಇದೇ ರೀತಿಯ ಗಾಸಿಫ್ ಗಳು ಹರಿದಾಡಿದ ಹಿನ್ನೆಲೆಯಲ್ಲಿ ಯಾರೂ ಸಹ ಇದನ್ನು ನಿಜ ಎಂದು ನಂಬಿರಲಿಲ್ಲ. ಜೂ.9 ರಂದು ಈ ಜೋಡಿಯ ಎಂಗೇಜ್ ಮೆಂಟ್ ನಡೆಯಲಿದೆ ಎಂಬ ಸುದ್ದಿಗಳಿಗೆ ಕಳೆದೆರಡು ದಿನಗಳ ಹಿಂದೆ ವರುಣ್ ಟೀಂ ಎಂಗೇಜ್ ಮೆಂಟ್ ಆಮಂತ್ರಣದ ಪೊಸ್ಟ್ ಮಾಡಿತ್ತು. ಆಗ ಎಲ್ಲರಿಗೂ ಅವರ ಎಂಗೇಜ್ ಮೆಂಟ್ ಬಗ್ಗೆ ನಂಬಿಕೆಬಂತು. ಮೊದಲಿಗೆ ಇಬ್ಬರ ಡೇಟಿಂಗ್ ಬಗ್ಗೆ ಅನೇಕ ರೂಮರ್‍ ಗಳು ಬಂದರೂ ಅದರ ಬಗ್ಗೆ ಪ್ರಶ್ನೆ ಮಾಡಿದಾಗ ಇಬ್ಬರೂ ಅದೆಲ್ಲಾ ಸುಳ್ಳು ಎಂದು ಹೇಳಿದ್ದರು. ಈ ಕಾರಣದಿಂದ ಯಾರೂ ಈ ಸುದ್ದಿಗಳನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಇದೀಗ ಕಳೆದೆರಡು ದಿನಗಳಿಂದ ಕೇಳಿಬರುತ್ತಿರುವ ಸುದ್ದಿಯಂತೆ ವರುಣ್ ಹಾಗೂ ಲಾವಣ್ಯ ಎಂಗೇಜ್ ಮೆಂಟ್ ನಡೆದಿದೆ. ಹೈದರಾಬಾದ್ ನ ಮನಿಕೊಂಡ ದಲ್ಲಿರುವ ನಾಗಬಾಬು ಮನೆಯಲ್ಲಿ ಅದ್ದೂರಿಯಾಗಿ ಅವರ ಎಂಗೇಜ್ ಮೆಂಟ್ ನಡೆದಿದೆ. ಕೆಲವೇ ಬಂಧುಮಿತ್ರರು ಹಾಗೂ ಸ್ನೇಹಿತರ ಸಮಕ್ಷಮದಲ್ಲಿ ಈ ಕಾರ್ಯಕ್ರಮ ನೆರವೇರಿದೆ. ಸುಮಾರು ದಿನಗಳ ಬಳಿಕ ಮೆಗಾ ಕುಟುಂಬದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ನಡೆದಿದೆ. ಮೆಗಾ ಕುಟುಂಬದ ಸದಸ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಎಲ್ಲರೂ ಒಂದೇ ಕಡೆ ಸೇರಿ ಸಖತ್ ಎಂಜಾಯ್ ಮಾಡಿದ್ದಾರೆ. ಈ ಸಂಬಂಧ ಕೆಲವೊಂದು ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಈ ವೇಳೆ ಮೆಗಾ ಕುಟುಂಬದ ಚಿರಂಜೀವಿ, ನಾಗಬಾಬು ಅವರ ತಾಯಿ ಅಂಜನಾ ದೇವಿ, ಪವನ್ ಕಲ್ಯಾಣ್, ರಾಮ್ ಚರಣ್, ಅಲ್ಲು ಅರ್ಜುನ್, ಅಲ್ಲು ಸಿರೀಶ್, ಅಲ್ಲು ಬಾಬಿ, ಸಾಯಿ ಧರಮ್ ತೇಜ್, ವೈಷ್ಣವ್ ತೇಜ್, ಸುಸ್ಮಿತಾ, ಶ್ರೀಜಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು. ಇನ್ನೂ ಮದುವೆ ದಿನಾಂಕ ಇನ್ನೂ ಘೋಷಣೆ ಯಾಗಿಲ್ಲ. ಈ ಪೊಟೋಗಳನ್ನು ವರುಣ್ ತೇಜ್ ಮೈ ಲವ್ ಎಂದು ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

Most Popular

To Top