ಆದಿಪುರುಷ್ ಸಿನೆಮಾದ ಮೇಲೆ ಫೈರಿಂಗ್ ಲೇಡಿ ಕಸ್ತೂರಿ ವಿಮರ್ಶೆ, ಪ್ರಭಾಸ್ ರಾಮನಂತೆ ಇದ್ದಾನೆಯೇ ಎಂದ ನಟಿ….!

Follow Us :

ಗೃಹಲಕ್ಷ್ಮಿ ಎಂಬ ತೆಲುಗು ಸೀರಿಯಲ್ ಮೂಲಕ ದೊಡ್ಡ ಅಭಿಮಾನಿ ಬಳಗ ಸಾಧಿಸಿಕೊಂಡ ಕಸ್ತೂರಿ ಇಂಡಸ್ಟ್ರಿಯಲ್ಲಿ ಫೈರ್‍ ಬ್ರಾಂಡ್ ಎಂದು ಹೇಳಲಾಗುತ್ತದೆ. ಯಾವುದೇ ವಿಚಾರವಿದ್ದರೂ ಸಹ ಆಕೆ ನೇರವಾಗಿಯೇ ತಮ್ಮ ಅಭಿಪ್ರಾಯವನ್ನು ಹೇಳಿಬಿಡುತ್ತಾರೆ. ಇದೀಗ ಪ್ಯಾನ್ ಇಂಡಿಯಾ ಸ್ಟಾರ್‍ ಪ್ರಭಾಸ್ ರವರ ಆದಿಪುರುಷ್ ಸಿನೆಮಾದ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ್ದಾರೆ. ಪ್ರಭಾಸ್ ಶ್ರೀರಾಮನಂತೆ ಕಾಣಿಸುತ್ತಾರಾ ಎಂದು ವಿಮರ್ಶೆ ಮಾಡಿದ್ದು, ಹಾಟ್ ಟಾಪಿಕ್ ಆಗಿದೆ.

ಆದಿಪುರುಷ್ ಸಿನೆಮಾ ಪ್ರಾರಂಭ ಮಾಡಿದ ಗಳಿಗೆ ಚೆನ್ನಾಗಿಲ್ಲ ಎಂದೇ ಹೇಳಬಹುದಾಗಿದೆ. ಟೀಸರ್‍ ಬಿಡುಗಡೆಯಾದಾಗಿನಿಂದ ವಿಮರ್ಶೆಗಳಿಗೆ ತುತ್ತಾಗುತ್ತಲೇ ಇದೆ. ಕಳೆದ ವರ್ಷ ಅಕ್ಟೋಬರ್‍ ಮಾಹೆಯಲ್ಲಿ ಆದಿಪುರುಷ್ ಟೀಸರ್‍ ಬಿಡುಗಡೆ ಮಾಡಲಾಗಿತ್ತು. ರಾವಣಾಸುರನ ಗೆಟಪ್ ಗೆ ಭಾರಿ ವಿಮರ್ಶೆಗಳು ಎದುರಾದವು. ರಾವಣಾಸುರ ದೊಡ್ಡ ಶಿವ ಭಕ್ತ ಆತನನ್ನು ನಿಮಗೆ ಇಷ್ಟಬಂದಂತೆ ತೋರಿಸಿದ್ದೀರಾ ಎಂದು ಅನೇಕರು ಆಗ್ರಹ ವ್ಯಕ್ತಪಡಿಸಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ತಿರುಮಲದಲ್ಲಿ ದೊಡ್ಡ ಮಟ್ಟದಲ್ಲಿ ಪ್ರಿ ರಿಲೀಸ್ ಈವೆಂಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ಆಲಯದ ಪ್ರಾಂಗಣದಲ್ಲಿ ಆದಿಪುರುಷ್ ನಿರ್ದೇಶಕ ಓಂ ರಾವತ್ ಕೃತಿ ಸನನ್ ರನ್ನು ತಬ್ಬಿಕೊಂಡು ಮುತ್ತಿಟ್ಟಿದ್ದು ಮತ್ತೊಂದು ವಿವಾದಕ್ಕೆ ಗುರಿಯಾಗಿತ್ತು. ಪವಿತ್ರವಾದ ಸ್ಥಳದಲ್ಲಿ ಈ ಕೆಲಸ ಬೇಕಿತ್ತಾ ಎಂದು ಅನೇಕರು ಭಾರಿ ವಿಮರ್ಶೆ ಮಾಡಿದರು.

ಇದೀಗ ಸೀನಿಯರ್‍ ನಟಿ ಕಸ್ತೂರಿ ಆದಿಪುರುಷ್ ಸಿನೆಮಾದ ಮೇಲೆ ಭಾರಿ ವಿಮರ್ಶೆ ಮಾಡಿದ್ದಾರೆ. ಪ್ರಭಾಸ್ ಈ ಸಿನೆಮಾದಲ್ಲಿ ಶ್ರೀರಾಮನಂತೆ ಕಾಣಿಸುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಈ ಹಿಂದೆ ಸೌತ್ ನಲ್ಲಿ ಅನೇಕರು ಶ್ರೀರಾಮನ ಪಾತ್ರದಲ್ಲಿ ನಟಿಸಿದ್ದಾರೆ. ಎಲ್ಲರೂ ಶ್ರೀರಾಮನಂತೆ ಕಾಣಿಸಿಕೊಂಡಿದ್ದಾರೆ. ಆದರೆ ಆದಿಪುರುಷ್ ಸಿನೆಮಾದಲ್ಲಿ ಪ್ರಭಾಸ್ ರಾಮನಂತೆ ಕಾಣುತ್ತಿಲ್ಲ ಬದಲಿಗೆ ಕರ್ಣನಂತೆ ಕಾಣಿಸುತ್ತಿದ್ದಾನೆ, ರಾಮ, ಲಕ್ಷಣ ಪಾತ್ರಗಳಿಗೆ ಮೀಸೆಗಳು ಏತಕೆ ಎಂದು ಪ್ರಶ್ನೆ ಮಾಡಿದ್ದಾರೆ. ಇದೀಗ ಕಸ್ತೂರಿ ಮಾಡಿದಂತಹ ಕಾಮೆಂಟ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಭಾರಿ ಬಜೆಟ್ ನಿಂದ ಆದಿಪುರುಷ್ ಸಿನೆಮಾ ನಿರ್ಮಾಣವಾಗಿದ್ದು, ಜೂನ್ 16 ರಂದು ವಿಶ್ವದಾದ್ಯಂತ ರಿಲೀಸ್ ಆಗಲಿದೆ. ದೊಡ್ಡ ಮಟ್ಟದಲ್ಲೇ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳನ್ನು ಸಹ ಜೋರಾಗಿಯೇ ನಡೆಸುತ್ತಿದ್ದಾರೆ. ಈ ಸಿನೆಮಾದಲ್ಲಿ ರಾಮನಾಗಿ ಪ್ರಭಾಸ್ ಸೀತೆಯಾಗಿ ಕೃತಿ ಸನನ್ ನಟಿಸಿದ್ದು, ಬಾಲಿವುಡ್ ಸ್ಟಾರ್‍ ನಟ ಸೈಫ್ ಅಲಿ ಖಾನ್ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಓಂ ರಾವತ್ ಈ ಸಿನೆಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.