Film News

ಮತ್ತೊಮ್ಮೆ ನಿತ್ಯಾ ಮೆನನ್ ಮದುವೆ ಸುದ್ದಿ, ಆಕೆ ಮದುವೆಯಾಗೋದು ಆ ನಟನನ್ನಂತೆ….!

ಸೌತ್ ಸಿನಿರಂಗದಲ್ಲಿ ಬ್ಯಾಕ್ ಟು ಬ್ಯಾಕ್ ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಿತ್ಯಾ ಮೆನನ್ ಅನೇಕ ಹಿಟ್ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಕಟ್ಟಿಕೊಂಡಿದ್ದಾರೆ. ಸಿನಿರಂಗದಲ್ಲಿ ತನ್ನದೇ ಆದ ಕ್ರೇಜ್ ಸಂಪಾದಿಸಿಕೊಂಡ ಈಕೆ ನಟಿಸುವಂತಹ ಸಿನೆಮಾಗಳೂ ಸಹ ತುಂಬಾನೆ ವಿಭಿನ್ನವಾಗಿರುತ್ತವೆ ಎಂದು ಹೇಳಬಹುದಾಗಿದೆ. ಸುಮಾರು ದಿನಗಳಿಂದ ನಿತ್ಯಾ ಮೆನನ್ ಮದುವೆಯ ಬಗ್ಗೆ ಅನೇಕ ರೂಮರ್‍ ಗಳು ಕೇಳಿಬರುತ್ತಿದ್ದು, ಇದೀಗ ಮತ್ತೊಂದು ಗಾಸಿಫ್ ಕೇಳಿಬರುತ್ತಿದೆ. ಆಕೆ ನಟನೊಬ್ಬನನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಮಲಯಾಳಂ ಮೂಲದ ನಟಿ ನಿತ್ಯಮೆನನ್ ಬಲವಾದ ಕಥೆಯುಳ್ಳ ಅನೇಕ ಸಿನೆಮಾಗಳಲ್ಲಿ ನಟಿಸಿ ಸೌತ್ ಸಿನಿರಂಗದಲ್ಲಿ ಬೇಡಿಕೆಯುಳ್ಳ ನಟಿಯಾಗಿದ್ದಾರೆ. ಪವನ್ ಕಲ್ಯಾಣ್ ನಟನೆಯ ಭಿಮ್ಲಾನಾಯಕ್ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಈ ಸಿನೆಮಾದಲ್ಲಿ ಆಕೆ ತುಂಬಾನೆ ಅದ್ಬುತವಾಗಿ ನಟಿಸುವ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಇತ್ತೀಚಿಗಷ್ಟೆ ಆಕೆ 19(1)(a) ಸಿನೆಮಾದಲ್ಲಿ ವಿಭಿನ್ನಪಾತ್ರದಲ್ಲಿ ನಟಿಸಿದ್ದರು. ಈ ಸಿನೆಮಾದಲ್ಲೂ ಸಹ ನಿತ್ಯಾ ತಮ್ಮ ಅದ್ಬುತವಾದ ನಟನೆಯ ಮೂಲಕ ಒಳ್ಳೆಯ ಮನರಂಜನೆ ನೀಡಿದ್ದರು. ಜೊತೆಗೆ ಆಕೆ ತಮಿಳಿನಲ್ಲಿ ಸ್ಟಾರ್‍ ನಟ ಧನುಷ್ ಜೊತೆಗೆ ಸಹ ತಿರು ಎಂಬ ಸಿನೆಮಾದಲ್ಲಿ ನಟಿಸಿ ಸಕ್ಸಸ್ ಕಂಡುಕೊಂಡರು. ಆ ಮೂಲಕ ಸಕ್ಸಸ್ ಪುಲ್ ಜರ್ನಿಯನ್ನು ಸಾಗಿಸುತ್ತಾ ಸ್ಟಾರ್‍ ನಟಿಯಾಗಿದ್ದಾರೆ.

ಕೇರಳದ ಮೂಲದ ನಟಿ ನಿತ್ಯಾ ಮೆನನ್ ಕರ್ನಾಟಕದಲ್ಲಿ ಜನಿಸಿದ್ದು, ಬಾಲ್ಯದಿಂದಲೇ ನಟನೆಯ ಮೇಲೆ ಆಸಕ್ತಿ ಹೊಂದಿದ್ದಾರೆ. ಮೊದಲಿಗೆ ಕನ್ನಡ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟು ಸೌತ್ ಸಿನೆಮಾಗಳಲ್ಲಿ ನಟಿಸಿ ಸ್ಟಾರ್‍ ನಟಿಯಾದರು. ಸದ್ಯ ಆಕೆಗೆ ಕ್ರೇಜ್ ಕೊಂಚ ಕಡಿಮೆಯಾಗಿದ್ದು, ಇದೀಗ ಮದುವೆಗೆ ಸಿದ್ದರಾಗಿದ್ದಾರಂತೆ. ಸಿನಿರಂಗಕ್ಕೆ ಸೇರಿದ ಹೀರೋ ಒಬ್ಬರನ್ನು ಮದುವೆಯಾಗಲಿದ್ದಾರಂತೆ. ಅದೂ ಮಲಯಾಳಂ ಮೂಲದ ನಟನಂತೆ. ಸುಮಾರು ದಿನಗಳಿಂದ ಆ ನಟನೊಂದಿಗೆ ಡೇಟಿಂಗ್ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿ ಮದುವೆಯಾಗಲಿದ್ದಾರಂತೆ. ಸದ್ಯ ಈ ವಿಚಾರ ಜೋರಾಗಿಯೇ ಹರಿದಾಡುತ್ತಿದ್ದು, ಈ ಸುದ್ದಿಯಲ್ಲಿ ಸತ್ಯಾಂಶ ಎಷ್ಟಿದೆ ಎಂಬುದು ಇನಷ್ಟೆ ತಿಳಿದು ಬರಬೇಕಿದೆ.

ನಟಿ ನಿತ್ಯಾ ಮೆನನ್ ಅಲಾ ಮೊದಲೈಂದಿ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ಆಕೆ ಇಷ್ಕ್, ಜಬರ್ದಸ್ತ್, ರುದ್ರಮದೇವಿ, ಭೀಮ್ಲಾ ನಾಯಕ್ ಸೇರಿದಂತೆ ಅನೇಕ ಸೂಪರ್‍ ಹಿಟ್ ಸಿನೆಮಾಗಳಲ್ಲಿ ನಟಿಸಿದ್ದಾರೆ. ಜೊತೆಗೆ ಕನ್ನಡದಲ್ಲಿ ಮೈನಾ ಸಿನೆಮಾದ ಮೂಲಕ ಆಕೆ ಮತಷ್ಟು ಫೇಂ ಪಡೆದುಕೊಂಡರು.

Most Popular

To Top