ಅಂತೂ ಇಂತೂ ವರುಣ್ ತೇಜ್ ಎಂಗೇಜ್ ಮೆಂಟ್ ಫಿಕ್ಸ್? ಮೆಗಾ ಕುಟುಂಬದಲ್ಲಿ ಮದುವೆ ಸಂಭ್ರಮ….!

Follow Us :

ಟಾಲಿವುಡ್ ಮೆಗಾ ಕುಟುಂಬದ ವರುಣ್ ತೇಜ್ ಹಾಗೂ ನಟಿ ಲಾವಣ್ಯ ತ್ರಿಪಾಠಿ ರವರ ಡೇಟಿಂಗ್ ಬಗ್ಗೆ ರೂಮರ್‍ ಹರಿದಾಡುತಿದೆ. ಸುಮಾರು ದಿನಗಳಿಂದ ಇವರಿಬ್ಬರು ಪ್ರೇಮ ಪಯಣ ಸಾಗಿಸುತ್ತಿದ್ದಾರೆ ಎಂಬ ರೂಮರ್‍ ಗಳು ಜೋರಾಗಿಯೇ ಹರಿದಾಡುತ್ತಿದೆ. ಈ ಬಗ್ಗೆ ಅನೇಕ ಬಾರಿ ಈ ಜೋಡಿ ಸ್ಪಷ್ಟನೆ ನೀಡಿದ್ದರೂ ರೂಮರ್‍ ಗಳು ಮಾತ್ರ ನಿಂತಿಲ್ಲ. ಇದೀಗ ಅವರಿಬ್ಬರ ಮದುವೆಗೆ ಕಾಲ ಕೂಡಿಬಂದಿದೆ ಎಂದು ಹೇಳಲಾಗುತ್ತಿದೆ. ಖ್ಯಾತ ಮಿಡಿಯಾ ಸಂಸ್ಥೆಯೊಂದು ಪ್ರಕಟಿಸಿದ ವರದಿಯಂತೆ ಲಾವಣ್ಯ ಹಾಗೂ ವರುಣ್ ಎಂಗೇಜ್ ಮೆಂಟ್ ಇದೇ ಜೂ.9 ರಂದು ನಡೆಯಲಿದೆಯಂತೆ. ಈ ಸುದ್ದಿ ಇದೀಗ ಸೋಷಿಯಲ್ ಮಿಡಿಯಾ ಸೇರಿದಂತೆ ಸಿನಿವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

ಸುಮಾರು ದಿನಗಳಿಂದ ಲಾವಣ್ಯ ತ್ರಿಪಾಠಿ ಹಾಗೂ ವರುಣ್ ತೇಜ್ ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಲೇ ಇದೆ. ಜೊತೆಗೆ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಹ ಕೇಳಿಬರುತ್ತಲೇ ಇದೆ. ಇದೀಗ ಮತ್ತೊಂದು ಸುದ್ದಿ ಸಖತ್ ಸದ್ದು ಮಾಡುತ್ತಿದೆ. ಜೂನ್ 9 ರಂದು ಅವರ ನಿಶ್ಚಿತಾರ್ಥ ನಡೆಯಲಿದೆಯಂತೆ. ಇದಕ್ಕಾಗಿ ಈಗಾಗಲೇ ಎಲ್ಲಾ ಸಿದ್ದತೆಗಳೂ ಸಹ ನಡೆಯುತ್ತಿವೆಯಂತೆ. ವಧು ವರರ ವಸ್ತ್ರಗಳು, ಆಭರಣಗಳನ್ನೂ ಸಹ ಖ್ಯಾತ ಡಿಸೈನರ್‍ ಗಳು ಸಿದ್ದ ಮಾಡುತ್ತಿದ್ದಾರಂತೆ. ಈ ಕಾರ್ಯಕ್ರಮಕ್ಕೆ ಮೆಗಾ ಕುಟುಂಬ ಹಾಜರಾಗಲಿದೆಯಂತೆ. ಇನ್ನೂ ನಿಹಾರಿಕಾ ಮದುವೆಯ ಬಳಿಕ ಮೆಗಾ ಕುಟುಂಬದ ಹಿರೋಗಳೆಲ್ಲಾ ಒಂದು ಕಡೆ ಸೇರಲಿದ್ದಾರಂತೆ. ಇನ್ನೂ ಈ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಕೇವಲ ಹತ್ತಿರದ ಸ್ನೇಹಿತರು ಹಾಗೂ ಕುಟುಂಬಸ್ಥರು ಮಾತ್ರ ಭಾಗಿಯಾಗಲಿದ್ದಾರಂತೆ. ಆದರೆ  ಮದುವೆ ಮಾತ್ರ ಎಲ್ಲರನ್ನೂ ಆಹ್ವಾನಿಸಿ ದೊಡ್ಡ ಮಟ್ಟದಲ್ಲಿ ಮಾಡಲಿದ್ದಾರಂತೆ. ಈ ಸುದ್ದಿಯನ್ನು ಬಾಲಿವುಡ್ ಪಿಂಕ್ ವಿಲ್ಲಾ ಎಂಬ ಸುದ್ದಿ ಸಂಸ್ಥೆ ಸುದ್ದಿಯನ್ನು ಪ್ರಕಟಿಸಿದೆ.

ಲಾವಣ್ಯ ಹಾಗೂ ವರುಣ್ ಈ ಹಿಂದೆ ಮಿಸ್ಟರ್‍, ಅಂತರಿಕ್ಷಂ ಸಿನೆಮಾಗಳಲ್ಲಿ ನಟಿಸಿದ್ದರು. ಈ ಸಿನೆಮಾಗಳ ಶೂಟಿಂಗ್ ಸಮಯದಲ್ಲೇ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ಹೇಳಲಾಗುತ್ತಿತ್ತು. ಜೊತೆಗೆ ಕೆಲವು ವರ್ಷಗಳ ಹಿಂದೆ ನಡೆದ ವರುಣ್ ತಂಗಿ ನಿಹಾರಿಕಾ ಮದುವೆಯಲ್ಲೂ ಲಾವಣ್ಯ ಕಾಣಿಸಿಕೊಂಡಿದ್ದರು. ರಾಜಾಸ್ಥಾನದಲ್ಲಿ ನಿಹಾರಿಕಾ ಮದುವೆ ಅದ್ದೂರಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಮೆಗಾ ಕುಟುಂಬದ ಜೊತೆಗೆ ಹತ್ತಿರದ ಸಂಬಂಧಿಗಳು ಮಾತ್ರ ಹಾಜರಾಗಿದ್ದರು. ಸಿನಿರಂಗದ ಅನೇಕ ಪ್ರಮುಖರಿಗೆ ಈ ಮದುವೆ ಸಮಾರಂಭದಲ್ಲಿ ಆಹ್ವಾನ ಇಲ್ಲದೇ ಇದ್ದರೂ ಲಾವಣ್ಯ ಹಾಜರಾಗಿದ್ದು ವರುಣ್ ಲಾವಣ್ಯ ಲವ್ ರೂಮರ್‍ ಗೆ ಮತಷ್ಟು ಬಲ ತಂದಿತ್ತು. ಅಂತೂ ಇಂತೂ ಈ ಜೋಡಿಯ ಮದುವೆಗೆ ಕಾಲ ಕೂಡಿಬಂದಿದೆ ಎಂದು ಹೇಳಲಾಗುತ್ತಿದ್ದು, ಮೆಗಾ ಅಭಿಮಾನಿಗಳು ಪುಲ್ ಖುಷಿಯಾಗಿದ್ದಾರೆ.

ಇನ್ನೂ ಲಾವಣ್ಯ ತ್ರಿಪಾಠಿ ಕೊನೆಯದಾಗಿ ಪುಲಿ ಮೇಕ ಎಂಬ ವೆಬ್ ಸಿರೀಸ್ ನಲ್ಲಿ ಕಾಣಿಸಿಕೊಂಡಿದ್ದರು. ಈ ಸಿರೀಸ್ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ತಂದುಕೊಡಲಿಲ್ಲ. ಇನ್ನೂ ಲಾವಣ್ಯ ಸದ್ಯ ಫೇಡ್ ಔಟ್ ದಿಸೆಯಲ್ಲಿದ್ದಾರೆ ಎಂದು ಹೇಳಬಹುದು. ಇನ್ನೂ ವರುಣ್ ತೇಹ್ ಗಾಂಡೀವಧಾರಿ ಅರ್ಜುನ ಎಂಬ ಸಿನೆಮಾದಲ್ಲಿ ನಟಿಸಿದ್ದಾರೆ. ಇದೀಗ ಅವರಿಬ್ಬರ ಮದುವೆಯ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಬಿರುಗಾಳಿಯಂತೆ ಹರಿದಾಡುತ್ತಿದೆ.