ವರಾಹ ರೂಪಂ ಹಾಡಿನ ಕಾಪಿರೈಟ್ಸ್ ಪ್ರಕರಣ ರದ್ದು, ಕಾಂತಾರ ಸಿನೆಮಾದ ವರಾಹ ರೂಪಂ ಹಾಡಿನ ಬಗ್ಗೆ ದಾಖಲಾಗಿದ್ದ ಪ್ರಕರಣ….!

Follow Us :

ಸ್ಯಾಂಡಲ್ ವುಡ್ ನಲ್ಲಿ ಕೆಲವು ತಿಂಗಳುಗಳ ಹಿಂದೆಯಷ್ಟೆ ಬಿಡುಗಡೆಯಾದ ರಿಷಭ್ ಶೆಟ್ಟಿ ಅಭಿನಯದ ಕಾಂತಾರಾ ಸಿನೆಮಾ ಸೆನ್ಷೇಷನಲ್ ಹಿಟ್ ಆಗಿದ್ದು, ಸೆನ್ಷೇಷನ್ ಕ್ರಿಯೇಟ್ ಮಾಡಿದ್ದಾರೆ. ಈ ಸಿನೆಮಾಗೆ ದೊಡ್ಡ ದೊಡ್ಡ ಸ್ಟಾರ್‍ ನಟರೇ ರಿಷಬ್ ಶೆಟ್ಟಿ ಕಾಂತಾರಾ ಸಿನೆಮಾಗೆ ಫಿದಾ ಆಗಿದ್ದರು. ಬಾಹುಬಲಿ ಪ್ರಭಾಸ್ ಸಹ ಈ ಸಿನೆಮಾವನ್ನು ಅನೇಕ ಬಾರಿ ನೋಡ ಮೆಚ್ಚಿಕೊಂಡಿದ್ದಾರೆ. ಈ ಹಿಂದೆ ಈ ಸಿನೆಮಾದಲ್ಲಿನ ವರಾಹ ರೂಪಂ ಹಾಡಿನ ಹಕ್ಕು ಸ್ವಾಮ್ಯ ಉಲ್ಲಂಘನೆ ಯಾಗಿದೆ ಎಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣವನ್ನು ಇದೀಗ ಕೇರಳ ಹೈಕೋರ್ಟ್ ರದ್ದು ಮಾಡಿದೆ ಎಂದು ತಿಳಿದುಬಂದಿದೆ.

ಸ್ಯಾಂಡಲ್ ವುಡ್ ಸಿನಿರಂಗದಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಸೆನ್ಷೇಷನ್ ಕ್ರಿಯೇಟ್ ಮಾಡಿದ ಸಿನೆಮಾಗಳಲ್ಲಿ ಕಾಂತಾರಾ ಸಹ ಒಂದಾಗಿದೆ. ಈ ಸಿನೆಮಾವನ್ನು ರಿಷಭ್ ಶೆಟ್ಟಿ ರವರೇ ನಿರ್ದೇಶನ ಮಾಡಿದ್ದಾರೆ. ಈ ಸಿನೆಮಾವನ್ನು ಕನ್ನಡ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್ ಬ್ಯಾನರ್‍ ನಟಿ ಕೇವಲ ಹದಿನಾರು ಕೋಟಿ ಬಜೆಟ್ ನಲ್ಲಿ ನಿರ್ಮಾಣ ಮಾಡಲಾಗಿದೆ. ಸೆಪ್ಟೆಂಬರ್‍ 31 ರಂದು ಈ ಸಿನೆಮಾ ಕನ್ನಡದಲ್ಲಿ ಅದ್ದೂರಿಯಾಗಿ ತೆರೆಕಂಡಿತ್ತು. ಬಳಿಕ ಬೇರೆ ಭಾಷೆಗಳಲ್ಲೂ ಸಹ ಈ ಸಿನೆಮಾ  ಬಿಡುಗಡೆಯಾಗಿ ಭಾರಿ ಸಕ್ಸಸ್ ಕಂಡುಕೊಂಡಿದೆ. ಈ ಸಿನೆಮಾದಲ್ಲಿನ ವರಾಹ ರೂಪಂ ಸಿನೆಮಾದ ಹಾಡಿನ ಹಕ್ಕುಸ್ವಾಮ್ಯ ಉಲ್ಲಂಘನೆ ಪ್ರಕರಣ ಹಲವು ತಿಂಗಳುಗಳಿಂದ ಕೇರಳ ಹೈಕೋರ್ಟಿನಲ್ಲಿ ನಡೆಯುತ್ತಿತ್ತು. ಇದೀಗ ಈ ಪ್ರಕರಣ ರದ್ದಾಗಿದೆ ಎನ್ನಲಾಗಿದೆ.

ಕಾಂತಾರ ಸಿನೆಮಾ ತಂಡದ ಪರವಾಗಿ ಈ ಪ್ರಕರಣವನ್ನು ವಿಜಯ್ ವಿ ಪೌಲ್ ಎಂಬುವವರು ವಾದ ಮಂಡಿಸುತ್ತಿದ್ದರು. ಮಾತೃಭೂಮಿ ಪಬ್ಲಿಷರ್ಸ್ ಪ್ರಕರಣ ದಾಖಲು ಮಾಡಿದ್ದರು. ಇದೀಗ ಎರಡೂ ವಾದಿ ಪ್ರತಿವಾದಿಗಳ ನಡುವೆ ಸಂಧಾನವನ್ನು ಕೋರ್ಟ್ ಗಮನಕ್ಕೆ ತಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ರದ್ದು ಮಾಡುವಂತೆ ಮನವಿ ಮಾಡಿದ್ದರು. ಈ ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ಪ್ರಕರಣ ರದ್ದು ಮಾಡಿದೆ. ಇದೀಗ ವರಾಹಂ ರೂಪಂ ಹಾಡಿನ ವಿವಾದ ಬಗೆಹರಿದಿದ್ದು ಸುಖಾಂತ್ಯ ಕಂಡಿದೆ.