News

ಡಿ.23ರ ಬಳಿಕ ತಿರುಪತಿಗೆ ಹೋಗುವವರು ಈ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ….!

ತಿರುಮಲ ತಿಮ್ಮಪ್ಪನಿಗೆ ಕೋಟ್ಯಂತರ ಭಕ್ತಾದಿಗಳಿದ್ದು, ಪ್ರತಿನಿತ್ಯ ತಿಮ್ಮಪ್ಪನ ದರ್ಶನಕ್ಕೆ ಸಾವಿರಾರು ಭಕ್ತರು ಹೋಗುತ್ತಿರುತ್ತಾರೆ. ಅದರಲ್ಲೂ ಡಿ.23 ರಿಂದ ಜ.1 ರವರೆಗೂ 10 ದಿನಗಳ ಕಾಲ ತಿರುಮಲದಲ್ಲಿ ವೈಕುಂಠ ದ್ವಾರದ ಮೂಲಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಈ ಅವಧಿಯಲ್ಲಿ ತಿಮ್ಮಪ್ಪನ ದರ್ಶನಕ್ಕೆ ತೆರಳುವಂತಹ ಭಕ್ತರು ಈ ಎಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕವಾಗಿದೆ ಎನ್ನಬಹುದು.

ಡಿ.23 ರಿಂದ ಜ.1 ರವರೆಗೆ ಒಟ್ಟು 10 ದಿನಗಳ ಕಾಲ ವೈಕುಂಠ ದ್ವಾರ ನಿರ್ಮಾಣ ಮಾಡಿ ಅದರ ಮೂಲಕ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ವೈಕುಂಠ ದ್ವಾರ ದರ್ಶನಕ್ಕೆ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಸಹ ಇದೆ. ಡಿ.22 ರಿಂದ ಭಕ್ತರ ಅನುಕೂಲಕ್ಕಾಗಿ ತಿರುಪತಿ ಹಾಗೂ ತಿರುಮಲದ 10 ಕೇಂದ್ರದಲ್ಲಿ 4.25 ಲಕ್ಷ ಟೋಕನ್ ನೀಡಲಾಗುತ್ತದೆ. ದಿನಕ್ಕೆ 42500 ರಂತೆ ಒಟ್ಟು 4.25 ಲಕ್ಷ ಟೋಕನ್ ಗಳನ್ನು ಹತ್ತು ದಿನಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ. ಆದ್ದರಿಂದ ಲಕ್ಷಾಂತರ ಮಂದಿ ಈ ಸಮಯದಲ್ಲಿ ತಿರುಮಲಕ್ಕೆ ಭೇಟಿ ನೀಡಲಿದ್ದಾರೆ ತಿರುಮಲಕ್ಕೆ ಹೋಗುವ ಮೊದಲು ಅಲ್ಲಿ ಪರಿಸ್ಥಿತಿಗಳನ್ನು ಅರಿತು ಪ್ರಯಾಣ ಬಳಿಸದರೇ ಉತ್ತಮ ಎನ್ನಲಾಗಿದೆ.

ಇನ್ನೂ ಅನೇಕರು ವೈಕುಂಠ ದ್ವಾರ ದರ್ಶನಕ್ಕೆ ಕುಟುಂಬ ಸಮೇತ ಭೇಟಿ ನೀಡುತ್ತಿರುತ್ತಾರೆ. ಇನ್ನೂ ಈ ಸಮಯದಲ್ಲಿ ಮಳೆ, ಅಥವಾ ಚಳಿಯಿರುವ ಬಗ್ಗೆ ಎಚ್ಚರಿಕೆ ಪಡೆದುಕೊಳ್ಳಬೇಕಿದೆ. ಅದರಲ್ಲೂ ಈಗಾಗಲೇ ಚಳಿಗಾಲ ಸಹ ಆರಂಭವಾಗಿದ್ದು, ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಆದ್ದರಿಂದ ವೈಕುಂಠ ದ್ವಾರ ದರ್ಶನಕ್ಕೆ ಹೋಗುವಂತಹ ಭಕ್ತಾದಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಹೋದರೇ ಉತ್ತಮವಾಗಿರುತ್ತದೆ ಎಂದು ಹೇಳಬಹುದಾಗಿದೆ.

Most Popular

To Top