ಬಿಸಿಲಿನ ಧಗ ಧಗ, ತಿರುಮಲದಲ್ಲಿ ಕಾಲಿಗೆ ಗೋಣಿಚೀಲ ಕಟ್ಟಿಕೊಂಡು ನಡೆದ ಭಕ್ತರು….!

Follow Us :

ಕಲಿಯುಗದ ಪ್ರತ್ಯಕ್ಷ ದೈವ ಎಂದೇ ಕರೆಯಲಾಗುವ ತಿರುಮಲ ತಿರುಪತಿ ದೇವಾಸ್ಥಾನಕ್ಕೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಭಕ್ತರು ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದುಕೊಳ್ಳುತ್ತಿರುತ್ತಾರೆ. ಸದ್ಯ ದೇಶದ ಅನೇಕ ಕಡೆ ಬಿಸಿಲಿನ ತೀವ್ರತೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ ಎನ್ನಬಹುದು. ತಿರುಮಲದಲ್ಲೂ ಸಹ ಬಿಸಿಲಿನ ತಾಪ ಹೆಚ್ಚಾಗಿದ್ದು, ಭಕ್ತರು ಕಾಲುಗಳಿಗೆ ಗೋಣಿಚೀಲ ಕಟ್ಟಿಕೊಂಡು ನಡೆಯುತ್ತಿರುವುದು ಕಂಡು ಬಂದಿದೆ.

ತಿರುಮಲದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಭಕ್ತರು ತತ್ತರಿಸಿ ಹೋಗಿದ್ದಾರೆ. ಅದರಲ್ಲೂ ಪಾದಾಚಾರಿ ಮಾರ್ಗದಲ್ಲಿ ನಡೆಯಲು ತುಂಬಾನೆ ಕಷ್ಟಕರವಾಗಿದೆ. ತಂಪು ಬಣ್ಣ ಕೆಲವಡೆ ಹಾಕದೇ ಇರುವುದರಿಂದ ಭಕ್ತರು ತುಂಬಾನೆ ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮ ಪಾದಗಳನ್ನು ಬಿಸಿಲಿನಿಂದ ರಕ್ಷಣೆ ಮಾಡಿಕೊಳ್ಳಲು ಕೆಲ ಭಕ್ತರು ಲಡ್ಡು ಪ್ರಸಾದ ವಿತರಿಸಲು ಬಳಸುವಂತಹ ಗೋಣಿ ಚೀಲವನ್ನು ಕಾಲಿಗೆ ಹಾಕಿಕೊಂಡು ನಡೆಯುತ್ತಿದ್ದಾರೆ. ಇನ್ನೂ ಮುಂದಿನ ದಿನಗಳಲ್ಲಿ ಬಿಸಿಲಿನ ತಾಪ ಮತಷ್ಟು ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಸಹ ಎಚ್ಚರಿಕೆ ನೀಡಿದ್ದು, ಕೂಡಲೇ ಟಿಟಿಡಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು, ನೆಲದ ಮೇಲೆ ತಂಪು ಬಣ್ಣ ಹಾಕಿ ಪರಿಹಾರ ಕ್ರಮ ಕೈಗೊಳ್ಳುವಂತೆ ಭಕ್ತರು ಆಗ್ರಹಿಸಿದ್ದಾರೆ.

ಇನ್ನೂ ದೇಶದ ಅನೇಕ ಕಡೆ ಬಿಸಿಲಿನ ತಾಪ ಹೆಚ್ಚಾಗುತ್ತಿದೆ. ಮಳೆ ಇಲ್ಲದೇ ಜನ ಜಾನುವಾರುಗಳು ತತ್ತರಿಸಿ ಹೋಗಿದ್ದಾರೆ. ಹವಾಮಾನ ಬದಲಾವಣೆಯಿಂದ ಹಗಲಿನಲ್ಲಿ ತಾಪಮಾನ ಹೆಚ್ಚಾಗಿದೆ. ಬಿಸಿಲಿನ ತೀವ್ರತೆಯ ಕಾರಣ ಏಪ್ರಿಲ್ ನಿಂದ ಜೂನ್ ಮಾಹೆಯವರೆಗೆ ಮಳೆಯ ತೀವ್ರತೆ ಹೆಚ್ಚಾಗಿರುತ್ತದೆ ಎಂದು ಐಎಂಡಿ ಸೂಚನೆ ನೀಡಿದೆ. ಶೀಘ್ರದಲ್ಲೇ ಉತ್ತರ ಆಂಧ್ರ ಹಾಗೂ ರಾಯಲಸೀಮಾದ ಹಲವು ಭಾಗಗಳಲ್ಲಿ ಸುಮಾರು 12 ದಿನಗಳ ಕಾಲ ಹಾಗೂ ಇತರೆ ಪ್ರದೇಶದಲ್ಲಿ 6-8 ದಿನಗಳ ಕಾಲ ಮಳೆಯಾಗುವ ನಿರೀಕ್ಷೆಯಿದೆ ಎನ್ನಲಾಗಿದೆ.