Film News

ನನ್ನ ಪತಿಯ ದೇಹದ ತೂಕದ ಕಾರಣದಿಂದ ಆ ಸಮಯದಲ್ಲಿ ತುಂಬಾನೆ ಅತ್ತಿದ್ದೇನೆ, ವೈರಲ್ ಆದ ಮಹಾಲಕ್ಷ್ಮೀ ಕಾಮೆಂಟ್ಸ್……!

ಸೌತ್ ಇಂಡಸ್ಟ್ರಿಯಲ್ಲಿ ಇತ್ತೀಚಿಗೆ ತುಂಬಾನೆ ಸದ್ದು ಮಾಡಿದ ಮದುವೆ ಎಂದರೇ ಅದು ಮಹಾಲಕ್ಷ್ಮೀ ರವೀಂದರ್‍ ಮದುವೆ ಎಂದು ಹೇಳಬಹುದು. ಸ್ಟಾರ್‍ ಸೆಲೆಬ್ರೆಟಿಗಳ ಮದುವೆಗಿಂತಲೂ ಈ ಜೋಡಿಯ ಮದುವೆ ಎಲ್ಲಾ ಕಡೆ ಸಖತ್ ಸೌಂಡ್ ಮಾಡಿತ್ತು. ಇಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಮದುವೆಯಾದಾಗಿನಿಂದ ಸಂತೋಷದಿಂದ ಜೀವನ ಸಾಗಿಸುತ್ತಿದ್ದಾರೆ. ಈ ಜೋಡಿಯ ಬಗ್ಗೆ ಸದಾ ಟ್ರೋಲ್ ನಡೆಯುತ್ತಲೇ ಇರುತ್ತದೆ. ಇದೀಗ ಆಕೆ ಕೆಲವೊಂದು ಕಾಮೆಂಟ್ ಗಳನ್ನು ಮಾಡಿದ್ದು, ಅವು ವೈರಲ್ ಆಗುತ್ತಿವೆ.

ಕಾಲಿವುಡ್ ನಿರ್ಮಾಪಕ ರವಿಂದರ್‍ ಹಾಗೂ ಮಹಾಲಕ್ಷ್ಮೀ ತಮ್ಮ ಮೊದಲ ಪತಿ ಹಾಗೂ ಪತ್ನಿಗೆ ವಿಚ್ಚೇದನ ನೀಡಿ ಕೆಲವು ದಿನಗಳ ಕಾಲ ಇಬ್ಬರೂ ಪ್ರೀತಿಸಿ ಅದ್ದೂರಿಯಾಗಿ ಸಪ್ತಪದಿ ತುಳಿದರು. ಅವರಿಬ್ಬರ ಮದುವೆ ವಿಚಾರ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿದ್ದೇ ತಡ ಪ್ರತಿನಿತ್ಯ ಅವರನ್ನು ಟ್ರೋಲ್ ಮಾಡುತ್ತಲೇ ಇದ್ದರು. ಮೊದಲಿಗೆ ಮಹಾಲಕ್ಷ್ಮೀ ಸಹ ತಮ್ಮನ್ನ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಂಡಿದ್ದರು. ಆದರೂ ಸಹ ಟ್ರೋಲ್ ಗಳು ನಿಲ್ಲದ ಕಾರಣ ಯಾವ ಟ್ರೋಲ್ ಗಳನ್ನು ಸಹ ಕಿವಿಗೆ ಹಾಕಿಕೊಳ್ಳದೇ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದರು. ಕೆಲವು ದಿನಗಳ ಹಿಂದೆಯಷ್ಟೆ ರವಿಂದರ್‍ ಚೀಟಿಂಗ್ ಕೇಸ್ ನಲ್ಲಿ ಜೈಲಿಗೆ ಹೋಗಿದ್ದರು. ಈ ನಡುವೆ ಈ ಜೋಡಿಯ ಮಧ್ಯೆ ವಿಬೇದಗಳು ಹುಟ್ಟಿಕೊಂಡಿದೆ. ವಿಚ್ಚೇದನ ಪಡೆದುಕೊಳ್ಳಲಿದ್ದಾರೆ ಎಂಬ ರೂಮರ್‍ ಗಳು ಸಹ ವೈರಲ್ ಆಗಿತ್ತು.

ಇನ್ನೂ ಆಗಾಗ ಈ ಜೋಡಿ ಕೆಲವೊಂದು ಸಂದರ್ಶನಗಳಲ್ಲಿ ಭಾಗಿಯಾಗುತ್ತಾ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಮಾತನಾಡಿದ ಆಕೆ ನನ್ನ ಮದುವೆ ಸಮಯದಲ್ಲಿ ಅನೇಕರು ಟ್ರೋಲ್ ಮಾಡಿದ್ದರು. ಆದರೆ ಅವೆಲ್ಲವನ್ನೂ ನಾವು ಕಿವಿಗೆ ಹಾಕಿಕೊಳ್ಳುವುದೇ ಇಲ್ಲ. ನನ್ನ ಪತಿ ರವಿಂದರ್‍ ಹೆಚ್ಚು ತೂಕ ಇರುವ ಕಾರಣದಿಂದ ಆತನಿಗಾಗಿ ನಾನು ಸಹ ತೂಕ ಹೆಚ್ಚಿಸಿಕೊಳ್ಳುತ್ತಿದ್ದೇನೆ. ಜೊತೆಗೆ ರವಿಂದರ್ ತೂಕ ಕಡಿಮೆ ಮಾಡಿಕೊಳ್ಳಲು ಎಷ್ಟು ಬಾರಿ ಹೇಳಿದರೂ ಸಹ ರಿಯಾಕ್ಟ್ ಆಗುತ್ತಿಲ್ಲ. ನಾನು ತೂಕ ಹೆಚ್ಚಿಸಿಕೊಳ್ಳಬೇಕು ಅನ್ನಿಸುತ್ತಿದೆ. ಏಕೆಂದರೇ ನಾನು ನಿದ್ದೆ ಮಾಡುವ ಸಮಯದಲ್ಲಿ ಬಂದು ನನ್ನ ಎಬ್ಬಿಸಿ ಊಟ ಮಾಡು ಎಂದು ಕಿರಿಕಿರಿ ಮಾಡುತ್ತಾರೆ. ಆ ಸಮಯದಲ್ಲಿ ನನ್ನ ನಿದ್ದೆ ಕೆಡುತ್ತದೆ.

ಅಷ್ಟೇಅಲ್ಲದೇ ನಾನು ತಿನ್ನೊಂದು ಶುರು ಮಾಡಿದರೇ ನಾನು ಸಹ ತುಂಬಾನೆ ತಿನ್ನುತ್ತೇನೆ. ಜೊತೆಗೆ ನನ್ನ ಡೈಟ್ ಸಹ ಮಿಸ್ ಮಾಡಿದ್ದೇನೆ. ಮುಂದೆ ಒಂದು ದಿನ ನಾನು ತೂಕ ಆಗೋದು ಪಕ್ಕಾ. ಅಷ್ಟೇ ಅಲ್ಲದೇ ರವಿಂದರ್‍ ಗೆ ಬಿಳಿ ಕೂದಲೂ ಸಹ ಬಂದಿವೆ ಎಂದು ಸಂದರ್ಶನದಲ್ಲಿ ಕೆಲವೊಂದು ಹೇಳಿಕೆಗಳನ್ನು ನೀಡಿದ್ದು, ಆಕೆಯ ಕಾಮೆಂಟ್ ಗಳು ವೈರಲ್ ಆಗುತ್ತಿವೆ.

Most Popular

To Top